
ಬೆಂಗಳೂರು: ಯುದ್ಧದ ಭೀತಿಯ ನಡುವೆ ಅಬುದಾಬಿಯಲ್ಲಿ ಸಿಲುಕಿದ್ದ ೨೧೩ ಕನ್ನಡಿಗರು ಸೋಮವಾರ ರಾತ್ರಿ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ್ದಾರೆ.
ಮೂರು ದಿನಗಳ ಕಾಲ ಯುದ್ಧದ ಭೀತಿಯ ನಡುವೆ ಆತಂಕದಲ್ಲಿಯೇ ಕಾಲ ಕಳೆದಿದ್ದ ಕನ್ನಡಿಗರು ದೇವನಹಳ್ಳಿ ಬಳಿಯ ಕೆಂಪೆಗೌಡ ಅಂತಾರಾಷ್ಟಿçÃಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಬಂದಿಳಿದರು. ಈ ೨೧೩ ಕನ್ನಡಿಗರಲ್ಲಿ ವಿಧಾನ ಪರಿಷತ್ ಸದಸ್ಯ ಬೋಜೆಗೌಡ ಹಾಗೂ ಓಲಿಂಪಿಕ್ ಪದಕ ವಿಜೇತೆ ಕ್ರೀಡಾಪಟು ಪಿ.ವಿ. ಸಿಂಧು ಕೂಡ ಸೇರಿದ್ದಾರೆ.




