ಹುಬ್ಬಳ್ಳಿ: ಸಾಂಪ್ರದಾಯಿಕ ಹಬ್ಬವಾದ ಹೋಳಿ ನಿಮಿತ್ತ ಹುಬ್ಬಳ್ಳಿಯಲ್ಲಿ ನಾಡಿದ್ದು ದಿ. ೫ರಂದು ಭವ್ಯ ಜಗ್ಗಲಗಿ ಹಬ್ಬವನ್ನು ಆಯೋಜಿಸಲಾಗಿದ್ದು, ಅಂದು ಮಧ್ಯಾಹ್ನ ೩ ಗಂಟೆಗೆ ನಗರದ ಮೂರುಸಾವಿರಮಠದ ಮೈದಾನದಿಂದ ಮೆರವಣಿಗೆ ಪ್ರಾರಂಭವಾಗಲಿದೆ ಎಂದು ಆಯೋಜಕರಾದ ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ಮೂರುಸಾವಿರಮಠದ ಜಗದ್ಗುರು ಡಾ. ಗುರುಸಿದ್ದ ರಾಜಯೋಗೀಂದ್ರ ಮಹಾಸ್ವಾಮೀಜಿ ಸಾನಿಧ್ಯ ವಹಿಸಲಿದ್ದು, ವಿವಿಧ ಮಠಾಧೀಶರು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉದ್ಘಾಟಿಸುವರು ಎಂದರು.
ಮೆರವಣಿಗೆ ಮೂರುಸಾವಿರ ಮಠದ ಮೈದಾನದಿಂದ ಪ್ರಾರಂಭವಾಗಿ ಎಸ್.ಟಿ. ಭಂಡಾರಿ ರಸ್ತೆ, ವಿಕ್ಟೋರಿಯಾ ರಸ್ತೆ, ಕೊಪ್ಪಿಕರ ರಸ್ತೆ, ಬಾನಿ ಓಣಿ, ಶಕ್ತಿ ರಸ್ತೆ, ಸ್ಟೇಷನ್ ರಸ್ತೆ, ಗಣೇಶ ಪೇಟ್ ವೃತ್ತ, ಮರಾಠಾ ಗಲ್ಲಿ, ಶಿವಾಜಿ ಚೌಕ್, ಬ್ರಾಡ್‌ವೆ, ದುರ್ಗದ ಬೈಲ್ ವೃತ್ತ, ಬೆಳಗಾಂವ ಗಲ್ಲಿ, ಪೆಂಡಾರ ಗಲ್ಲಿ, ತುಳಜಾಭವಾನಿ ವೃತ್ತ ಮೂಲಕ ಹಾಯ್ದು ಮತ್ತೆ ಮಠದ ಆವರಣದಲ್ಲಿ ಸಮಾಪ್ತಿಗೊಳ್ಳಲಿದೆ ಎಂದು ತಿಳಿಸಿದರು.
ಸುಳ್ಳ, ಬ್ಯಾಹಟ್ಟಿ, ಛಬ್ಬಿ, ಸೂರಶೆಟ್ಟಿಕೊಪ್ಪ, ಧಾರವಾಡ, ಅರಳಿಕಟ್ಟಿ, ಅಮರಗೋಳ, ತಾರಿಹಾಳ ಸೇರಿದಂತೆ ಅನೇಕ ಗ್ರಾಮಗಳಿಂದ ನೂರಾರು ಜಾನಪದ ಕಲಾವಿದರು ತಮ್ಮ ತಂಡಗಳೊAದಿಗೆ ಭಾಗವಹಿಸಲಿದ್ದಾರೆ. ಮಹಿಳೆಯರ ಡೊಳ್ಳು ಕುಣಿತ ತಂಡಗಳು ವಿಶೇಷ ಆಕರ್ಷಣೆಯಾಗಲಿವೆ. ಹಾನಗಲ್ಲದ ಕುಮಾರೇಶ್ವರ ಯುವಕ ಮಂಡಳದ ಬೇಡರ ವೇಷದ ತಂಡ, ಉಡುಪಿಯ ಕಾಡುಬೆಟ್ಟು ಪ್ರದೇಶದ ಹುಲಿ ಕುಣಿತ ತಂಡ, ಹನುಮಾನ, ನಂದಿ, ನಾಗಾಸಾಧು, ಪರಮೇಶ್ವರ ಹಾಗೂ ನರಸಿಂಹ ವೇಷಧಾರಿಗಳ ೪೫ ಕಲಾವಿದರು ಮೆರವಣಿಗೆಯಲ್ಲಿ ಶೋಭೆ ಹೆಚ್ಚಿಸಲಿದ್ದಾರೆ. ಮಕ್ಕಳಿಗಾಗಿ ಸ್ವರ್ಣ ಮಯೂರಿ ಗೊಂಬೆ ತಂಡದ ವಿಶೇಷ ಪ್ರದರ್ಶನವೂ ಇರಲಿದೆ. ಮಹಾರಾಷ್ಟçದ ಇಚಲಕರಂಜಿಯಿAದ ಜೀವಿಕಾ ಇವೆಂಟ್ ವತಿಯಿಂದ ಡೋಲತಾಷಾ ತಂಡ ಭಾಗವಹಿಸಲಿದೆ. ಗಂಗಾವತಿ ಹಾಗೂ ಹುಬ್ಬಳ್ಳಿಯ ಪ್ರಸಿದ್ಧ ನಾಸಿಕ ಡೋಲ್ ತಂಡಗಳು ಮನರಂಜನೆ ನೀಡಲಿವೆ. ನಗರದ ಘಂಟಿಕೇರಿ ಓಣಿ, ಬಮ್ಮಾಪೂರ ಓಣಿ, ತಿಮ್ಮಸಾಗರ ಓಣಿ, ಬಡಿಗೇರ ಓಣಿ, ಆಗಸರ ಓಣಿ, ಜೋಳಿನವರ ಓಣಿ, ಶಿವಶಂಕರ ಕಾಲೋನಿ, ವೀರಾಪೂರ ಓಣಿ, ಅಕ್ಕಿಪೇಟ, ಚನ್ನಪೇಟ ಸೇರಿದಂತೆ ವಿವಿಧ ಪ್ರದೇಶಗಳ ಜಗ್ಗಲಗಿ ತಂಡಗಳು ಮೆರವಣಿಗೆ ಯಲ್ಲಿ ಪಾಲ್ಗೊಳ್ಳಲಿವೆ ಎಂದರು.
ಮೆರವಣಿಗೆಯ ಮಾರ್ಗದುದ್ದಕ್ಕೂ ವಿವಿಧ ಸಂಘ ಸಂಸ್ಥೆಗಳು ಹಾಗೂ ವ್ಯಾಪಾರಸ್ಥರು ಭವ್ಯ ಸ್ವಾಗತ ಕೋರಲಿದ್ದು, ಭಾಗವಹಿಸುವ ತಂಡದ ಸದಸ್ಯರು ಹಾಗೂ ಸಾರ್ವಜನಿಕರಿಗೆ ಅಲ್ಪೋಪಹಾರ ಮತ್ತು ತಂಪು ಪಾನೀಯಗಳ ವ್ಯವಸ್ಥೆ ಮಾಡಲಾಗಿದೆ. ಭಾರತೀಯ ಸಂಸ್ಕöÈತಿ, ಉಳಿಸುವ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದರು. ಪತ್ರಿಕಾಗೋಷ್ಠಿಯಲ್ಲಿ ಮೇಯರ್ ಜ್ಯೋತಿ ಪಾಟೀಲ್, ಉಪಮೇಯರ್ ಸಂತೋಷ ಚವ್ಹಾಣ, ಲಿಂಗರಾಜ ಪಾಟೀಲ, ಶಿವು ಮೆಣಸಿನಕಾಯಿ, ಸುಬ್ರಹ್ಮಣ್ಯ ಶಿರಕೋಳ, ದತ್ತಮೂರ್ತಿ ಕುಲಕರ್ಣಿ ಸೇರಿದಂತೆ ಇತರರಿದ್ದರು.
ಬೇಹುಗಾರಿಕೆ ಸರಿಯಲ್ಲ ಉಪ ಮುಖ್ಯಮಂತ್ರಿಯವರ ಪೋನ್ ಕದ್ದಾಲಿಕೆ ಕೇಳಿ ಬಂದಿದ್ದು ಈ ರೀತಿ ಬೇಹುಗಾರಿಕೆ ಸರಿಯಲ್ಲ.ಈಗಾಗಲೇ ವಿಪಕ್ಷ ನಾಯಕ ಅಶೋಕ ಅವರು ಈ ಬಗ್ಗೆ ಹೇಳಿದ್ದಾರೆ. ಬಿಜೆಪಿಯವರು ಯಾವುದೇ ಕೈ ಶಾಸಕರನ್ನು ಸೆಳೆಯುವುದಿಲ್ಲ. ಕೈ ಪಾಳೆಯದಲ್ಲೇ ಮರ‍್ನಾಲ್ಕು ಬಣವಾಗಿದ್ದರಿಂದ ಇಂತಹ ಕೃತ್ಯ ನಡೆದಿದೆ ಎಂದು ಶಾಸಕ ಟೆಂಗಿನಕಾಯಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ವರದಿ: ಸುಧೀರ್ ಕುಲಕರ್ಣಿ




