ಸಿಂಧನೂರು : ಇರಾನ್ ಮೇಲೆ ಅಮೇರಿಕಾ, ಇಸ್ರೇಲ್ ಸಾಮ್ರಾಜ್ಯವಾದಿ ಶಿಬಿರ ನಡೆಸುತ್ತಿರುವ ಯುದ್ಧ ದಾಳಿ, ಪ್ರಚೋದನೆ ಮತ್ತು ಅಸ್ಥಿರಗೊಳಿಸುವ ಕಾರ್ಯಾಚರಣೆಗಳ ಮುಂದುವರಿಕೆಯಾಗಿ, ಇರಾನ್ ಪರಮೋಚ್ಚನಾಯಕ ಅಯಾತೊಲ್ಲಾ ಅಲಿ ಖೈಮನಿ ಅವರನ್ನು ಹತ್ಯೆ ಮಾಡಿದ್ದು ಅತ್ಯಂತ ಗಂಭೀರ ಮತ್ತು ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ಸಿಪಿಐಎಂಎಲ್ ರೆಡ್ ಸ್ಟಾರ್ ಹಾಗೂ ಪ್ರಗತಿಪರ ಸಂಘಟನೆಗಳು ಈ ರಾಜಕೀಯ ಹತ್ಯೆಯನ್ನು ಯಾವುದೇ ಗೊಂದಲವಿಲ್ಲದೆ, ತೀಕ್ಷ್ಣವಾಗಿ ಮತ್ತು ಕ್ರಾಂತಿಕಾರಿ ದೃಢತೆಯಿಂದ ಖಂಡಿಸುತ್ತದೆ
ಈ ಒಂದು ಭಯಾನಕ ವಾತಾವರಣದಲ್ಲಿ ಭಾರತದ ಪ್ರಧಾನಿ ಮೋದಿ ವಹಿಸುತ್ತಿರುವ ಮೌನ ಅತ್ಯಂತ ಜನವಿರೋಧಿ ಮತ್ತು ಲಜ್ಜಾಸ್ಪದ
ಅಪಾಯಕಾರಿ ಪ್ರವೃತ್ತಿಯಾಗಿದೆ ಇಂದು ಇರಾನ್ ನಾಳೆ ಇನ್ನೊಂದು ದೇಶ. ಆದ್ದರಿಂದ ವಿಶ್ವದ ಕಾರ್ಮಿಕ ವರ್ಗ, ಕಮ್ಯುನಿಸ್ಟ್ ಶಕ್ತಿಗಳು ಮತ್ತು ಎಲ್ಲಾ ಅಳತೆಯ ಜನತೆ ಸಾಮ್ರಾಜ್ಯವಾದಿ ಮತ್ತು ರಾಜಕೀಯ ಅಗತ್ಯಗಳಿಗೆ ವಿರುದ್ಧವಾಗಿ ಏಕತೆಯಿಂದ ಎದ್ದು ನಿಲ್ಲಬೇಕಾಗಿದೆ. ಎಂದು
ನಗರದ ಗಾಂಧಿ ವೃತ್ತದಲ್ಲಿ ಸಿಪಿಐಎಂಎಲ್ ರೆಡ್ ಸ್ಟಾರ್, ಕರ್ನಾಟಕ ಕೃಷಿ ಕೂಲಿಕಾರರ ಸಂಘ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ದಲಿತ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ಪ್ರತಿಭಟಿಸಿ ಆಗ್ರಹಿಸಲಾಯಿತು.
ಈ ಸಂಧರ್ಭದಲ್ಲಿ ಸಿಪಿಐಎಂಎಲ್ ರೆಡ್ ಸ್ಟಾರ್ ರಾಜ್ಯ ಸಮಿತಿ ಸದಸ್ಯ ಎಂ. ಗಂಗಾಧರ್. ಕೃಷಿ ಕಾರ್ಮಿಕರ ಸಂಘದ ಅಧ್ಯಕ್ಷರು ಅಪ್ಪಣ್ಣ ಕಾಂಬ್ಳೆ, ದಲಿತ ವಿದ್ಯಾರ್ಥಿ ಪರಿಷತ್ ,ಡಿವಿಪಿ.ನ ದುರುಗೇಶ್ ಕಲ್ಮಂಗಿ. ನರಸಪ್ಪ ಬಡಿಗೇರ್, ಶಿವುಪುತ್ರ, ರಾಜ್ಯ ರೈತ ಸಂಘದ ಪ್ರ. ಕಾರ್ಯದರ್ಶಿ, ಬಸವರಾಜ ಗೋಡಿಹಾಳ,ಹೆಚ್ ಆರ್. ಹೊಸಮನಿ, ಮುದಿಯಪ್ಪ ಹೆಚ್ ಎನ್. ಕ್ಯಾಂಪ್, ಧರಗಯ್ಯ, ಸಂಗಪ್ಪ, ಹುಲುಗಪ್ಪ ಬಳ್ಳಾರಿ, ನಿರಂಜನಕುಮಾರ್, ಎಂ. ಎಸ್. ರಾಜಶೇಖರ್, ಬಾಲಪ್ಪ, ಕರಿಯಮ್ಮ ವಿರುಪಾಪುರ, ರಂಗಮ್ಮ, ಶರಣಮ್ಮ, ದೇವಕೇಮ್ಮ, ಆಂಜನೇಯ್ಯ ಸೇರಿದಂತೆ ಇತರರು ಇದ್ದರು.
ವರದಿ: ಬಸವರಾಜ ಬುಕ್ಕನಹಟ್ಟಿ




