Ad imageAd image

ಸಾಲು ಸಾಲು ಸಮಾಧಿ ಚಿತ್ರ ಫೋಟೋ ಹಂಚಿಕೊಂಡ ಇರಾನ್ : ವಿಶ್ವವೇ ಸ್ಥಬ್ದ 

Bharath Vaibhav
ಸಾಲು ಸಾಲು ಸಮಾಧಿ ಚಿತ್ರ ಫೋಟೋ ಹಂಚಿಕೊಂಡ ಇರಾನ್ : ವಿಶ್ವವೇ ಸ್ಥಬ್ದ 
WhatsApp Group Join Now
Telegram Group Join Now

ಇರಾನ್: ಅಮೆರಿಕ ಮತ್ತು ಇರಾನ್ ನಡುವಿನ ಸೇನಾ ಸಂಘರ್ಷ ತಾರಕಕ್ಕೇರಿದ್ದು, ಈ ಯುದ್ಧದ ಅಟ್ಟಹಾಸಕ್ಕೆ ಅಮಾಯಕ ಜೀವಗಳು ಬಲಿಯಾಗುತ್ತಿವೆ.

ಇರಾನ್‌ನ ದಕ್ಷಿಣ ಭಾಗದ ಮಿನಾಬ್ ನಗರದ ಪ್ರಾಥಮಿಕ ಶಾಲೆಯೊಂದರ ಮೇಲೆ ನಡೆದ ಅಮೆರಿಕ ಮತ್ತು ಇಸ್ರೇಲ್‌ನ ಜಂಟಿ ವೈಮಾನಿಕ ದಾಳಿಯು ಜಗತ್ತನ್ನೇ ನಡುಗಿಸಿದೆ.

ಈ ದಾಳಿಯಲ್ಲಿ ಬಲಿಯಾದ 165 ಪುಟ್ಟ ವಿದ್ಯಾರ್ಥಿನಿಯರಿಗಾಗಿ ಸಾಲು ಸಾಲಾಗಿ ಸಮಾಧಿಗಳನ್ನು ತೋಡುತ್ತಿರುವ ಹೃದಯವಿದ್ರಾವಕ ಫೋಟೋ ಈಗ ಯುದ್ಧದ ಭೀಕರತೆಗೆ ಸಾಕ್ಷಿಯಾಗಿದೆ.

ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಅವರು ಸಾಮಾಜಿಕ ಜಾಲತಾಣ ‘X’ ನಲ್ಲಿ ಹಂಚಿಕೊಂಡಿರುವ ಈ ಫೋಟೋದಲ್ಲಿ, ಮೈದಾನವೊಂದರಲ್ಲಿ ನೂರಾರು ಸಮಾಧಿಗಳನ್ನು ಸಿದ್ಧಪಡಿಸಿರುವುದು ಕಂಡುಬಂದಿದೆ.

ಬಿಳಿ ಸುಣ್ಣದ ಪುಡಿಯಿಂದ ಗುರುತು ಮಾಡಲಾದ ಈ ಶವಕುಳಿಗಳ ಮುಂದೆ ಪೋಷಕರು ಮತ್ತು ಸಂಬಂಧಿಕರು ಕಣ್ಣೀರಿಡುತ್ತಾ ನಿಂತಿರುವ ದೃಶ್ಯ ಮನಕಲಕುವಂತಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!