ತುರುವೇಕೆರೆ: ತಾಲೂಕು ಬಿಜೆಪಿ ಮಂಡಲದ ನೂತನ ಅಧ್ಯಕ್ಷರಾಗಿ ಪ್ರಕಾಶ್ ಯಾದವ್ ಅವರು ನೇಮಕಗೊಂಡಿದ್ದಾರೆ.
ತಾಲೂಕು ಮಂಡಲದ ಉಪಾಧ್ಯಕ್ಷರಾಗಿ ಸಂತೋಷ್ ಕಂಟ್ಲಿ, ಸಿದ್ದಪ್ಪಾಜಿ, ಮಾವಿನಕೆರೆ ಮಂಜೇಗೌಡ, ಪ್ರಧಾನ ಕಾರ್ಯದರ್ಶಿಯಾಗಿ ಮಹೇಶ್, ಖಜಾಂಚಿಯಾಗಿ ಹರಿಕಾರನಹಳ್ಳಿ ಪ್ರಸಾದ್, ದಂಡಿನಶಿವರ ಹೋಬಳಿ ಘಟಕದ ಅಧ್ಯಕ್ಷರಾಗಿ ರಕ್ಷಿತ್, ದಬ್ಬೇಘಟ್ಟ ಹೋಬಳಿ ಘಟಕದ ಅಧ್ಯಕ್ಷರಾಗಿ ಕಡೇಹಳ್ಳಿ ರವಿಕುಮಾರ್, ಮಹಿಳಾ ಘಟಕದ ಅಧ್ಯಕ್ಷರಾಗಿ ರಾಧಾಮಣಿ, ಯುವಮೋರ್ಚಾ ಅಧ್ಯಕ್ಷರಾಗಿ ತೀರ್ಥಕುಮಾರ್(ತಿಲಿ) ನೇಮಕಗೊಂಡಿದ್ದಾರೆ.
ಹೊಸ ಪದಾಧಿಕಾರಿಗಳು ಪಕ್ಷದ ಮುಖಂಡರು, ಕಾರ್ಯಕರ್ತರೊಂದಿಗೆ ಬಿಜೆಪಿ ಕಛೇರಿಯಲ್ಲಿ ಇಂದು ಸಂಘಟನೆಗೆ ಸಂಬಂಧಿಸಿದಂತೆ ಸಭೆ ನಡೆಸಿದರು. ಇದೇ ಸಂದರ್ಭದಲ್ಲಿ ಬಿಜೆಪಿ ಪಕ್ಷದ ನೂತನ ಪದಾಧಿಕಾರಿಗಳು ಮಾಜಿ ಶಾಸಕ ಮಸಾಲಾ ಜಯರಾಮ್ ಅವರಿಗೆ ಅಭಿನಂದನೆಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಹಿಳಾ ಘಟಕದ ಜಿಲ್ಲಾ ಉಪಾಧ್ಯಕ್ಷೆ ಅನಿತಾ ನಂಜುಂಡಯ್ಯ, ಎಸ್.ಟಿ. ಮೋರ್ಚಾ ಜಿಲ್ಲಾ ಘಟಕದ ಉಮಾರಾಜ್, ಕೋರ್ ಕಮಿಟಿ ಸದಸ್ಯ ಕಣತೂರು ನಾಗೇಶ್, ಯುವಮೋರ್ಚಾ ಮಾಜಿ ಅಧ್ಯಕ್ಷ ಗೌರೀಶ್, ಮಾಜಿ ಕಾರ್ಯದರ್ಶಿ ಡ್ಯಾನಿ ಮುಂತಾದವರು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್




