ನ್ಯೂಯರ‍್ಕ್: ಸಂಭಾವ್ಯ ಅಣ್ವಸ್ತç ದಾಳಿಯನ್ನು ತಡೆಯುವ ಸಲುವಾಗಿ ಇರಾನ್ ಮೇಲೆ ದಾಳಿ ಮಾಡುವುದು ಅನಿವಾರ‍್ಯವಾಗಿತ್ತು ಎಂದು ಅಮೇರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹೇಳಿದ್ದಾರೆ.
ಜಗತ್ತಿನಾದ್ಯಂತ ಭಯೋತ್ಪಾದನೆ ಹಬ್ಬಿಸುತ್ತಿರುವ ಇರಾನ್ ಮೇಲೆ ದಾಳಿ ಮಾಡುವುದು ಅಗತ್ಯ ಎಂದು ಮನಗಂಡ ಕಾರಣ ಅಮೇರಿಕ ಹಾಗೂ ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ನಡೆಸಿರುವುದನ್ನು ಡೋನಾಲ್ಡ್ ಟ್ರಂಫ್ ಸಮರ‍್ಥಿಸಿಕೊಂಡಿದ್ದಾರೆ.
ಇರಾನ್ ಹಲವು ವರ‍್ಷಗಳಿಂದ ಜನರನ್ನು ಕೊಲ್ಲುತ್ತಿದ್ದು, ಆ ರಾಷ್ಟçದ ಮೇಲೆ ದಾಳಿ ನಡೆಸದಿದ್ದರೆ, ಅದು ಅಣ್ವಸ್ತçವನ್ನು ಹೊಂದಿರುವ ರಾಷ್ಟçವಾಗಿ ಬದಲಾಗಿ ಅದು ಅಣ್ವಸ್ತçವನ್ನು ಬಳಸುವ ನರ‍್ಧಾರಕ್ಕೂ ಅನಿಯಾಗುತ್ತಿತ್ತು ಎಂದು ಟ್ರಂಪ್ ಹೇಳಿದ್ದಾರೆ.
ಸತತ ನಾಲ್ಕನೇ ದಿನವೂ ಅಮೇರಿಕ ಹಾಗೂ ಇಸ್ರೇಲ್‌ನ ಸೇನೆ ಇರಾನ್‌ನ ವೈಮಾನಿಕ ನೆಲೆಗಳ ಮೇಲೆ ದಾಳಿ ನಡೆಸಿವೆ.
ಸಂಭಾವ್ಯ ಅಣ್ವಸ್ತç ದಾಳಿ ತಡೆಯಲು ಇರಾನ್ ಮೇಲೆ ದಾಳಿ ಅಗತ್ಯವಾಗಿತ್ತು: ಡೊನಾಲ್ಡ್ ಟ್ರಂಫ್




