Ad imageAd image

ಕುಡಿಯುವ ನೀರಿಗೆ ಸಮಸ್ಯೆ ಬಾರದಂತೆ ಮುನ್ನೆಚ್ಚರಿಕೆ ಕ್ರಮ: ಕಾರ್ಯನಿರ್ವಾಹಕ ಅಧಿಕಾರಿ ಮಧುಸೂದನ್

Bharath Vaibhav
ಕುಡಿಯುವ ನೀರಿಗೆ ಸಮಸ್ಯೆ ಬಾರದಂತೆ ಮುನ್ನೆಚ್ಚರಿಕೆ ಕ್ರಮ: ಕಾರ್ಯನಿರ್ವಾಹಕ ಅಧಿಕಾರಿ ಮಧುಸೂದನ್
WhatsApp Group Join Now
Telegram Group Join Now

ಕೊಳವೆ ಭಾವಿಗಳು ಕೆಟ್ಟು ನಿಂತರೆ ತಕ್ಷಣವೇ ರೀಪೇರಿ ಮಾಡಿಸಬೇಕೆಂದು ಕಾರ್ಯನಿರ್ವಹಣಾಧಿಕಾರಿ ಮಧುಸೂದನ್ ತಿಳಿಸಿದರು.

 ಪಾವಗಡ : ತಾಲ್ಲೂಕಿನ ಮಂಗಳವಾರ ರಂದು ರಂಗಸಮುದ್ರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬೆನ್ನೆಲ್ಲೇ ಇಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಧು ಸೂಧನ್ ರವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಂತರ ಗ್ರಾಮ ಪಂಚಾಯತಿ ಸಿಬ್ಬಂದಿ ಮತ್ತು ವಾಟರ್ ಮ್ಯಾನ್ ಗಳ ಸಭೆ ನಡೆಸಿ ಬೇಸಿಗೆ ಅವಧಿಯಲ್ಲಿ ಯಾವುದೇ ಗ್ರಾಮದಲ್ಲೂ ಕುಡಿಯುವ ನೀರಿನ ಸಮಸ್ಯೆ ಬಾರದಂತೆ ಎಚ್ಚರಿಕೆ ವಹಿಸಿ ಬೇಕು ಎಂದರು.

ನಂತರ ಪಂಪ್ ಮತ್ತು ಮೋಟಾರು ಕೇಬಲ್ ಅಳವಡಿಕೆ ಸಮಸ್ಯೆಗಳನ್ನು ಅತೀ ತುರ್ತಾಗಿ ನಿರ್ವಹಸಲು.
ಸೂಚಿಸಿದರು. ಇದೇ ವೇಳೆ ತಾಲ್ಲೂಕಿನ ಯಾವುದೇ ಗ್ರಾಮಗಳಿಂದ ಜುಡಿಯುವ ನೀರಿನ ಸಮಸ್ಯೆ ಎಂದು ದೂರು ಬಂದರೆ ಅಧಿಕಾರಿಗಳ ಮೇಲೆ ಸೂಕ್ತ ಕ್ರಮಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ಕಾರ್ಯನಿರ್ವಹಣಾಧಿಕಾರಿ ಮಧುಸೂದನ್ ಅವರು ನೀಡಿದರು‌.

ನಂತರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕುಡಿಯುವ ನೀರಿನ ದೂರಿನ ಮೆರೆಗೆ ಬೆಳಿಗ್ಗೆ ೭ ಗಂಟೆಗೆ ಹಾಜರಾಗಿ ನೀರಿನ ಸಮಸ್ಯೆ ಬಗೆಹರಿಸಿ,ಗ್ರಾಮಗಳಲ್ಲಿ ಸ್ವಚ್ಚತೆ ಮತ್ತು ಕುಡಿಯುವ ಕೊರತೆ ಬಾರದಂತೆ ಅಭಿವೃದ್ಧಿ ಅಧಿಕಾರಿಗಳು ಹಾಗೂ ನೌಕರರು ಜವಾಬ್ದಾರಿ ವಹಿಸಬೇಕು. ಈ ವೇಳೆ ತಾಲ್ಲೂಕು ಪಂಚಾಯತ್ ಸಹಾಯಕ ನಿರ್ದೇಶಕರು ಮಾರುತಿ ಪ್ರಸಾದ್ ಮತ್ತು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ,ಹಾಗೂ ಸಿಬ್ಬಂದಿ ಸಭೆಯಲ್ಲಿ ಭಾಗವಹಸಿದ್ದರು.

ವರದಿ: ಶಿವಾನಂದ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!