Ad imageAd image

ತಾಲ್ಲೂಕಿನಲ್ಲಿ ಎರಡು ವರ್ಷಗಳಲ್ಲಿ ತಾ ಪಂ ಇಂದ ಅಭಿವೃದ್ದಿ ಮಾಡಿದ್ದಾದರೂ ಏನು

Bharath Vaibhav
ತಾಲ್ಲೂಕಿನಲ್ಲಿ ಎರಡು ವರ್ಷಗಳಲ್ಲಿ ತಾ ಪಂ ಇಂದ ಅಭಿವೃದ್ದಿ ಮಾಡಿದ್ದಾದರೂ ಏನು
WhatsApp Group Join Now
Telegram Group Join Now

ಪಂಚಾಯಿತಿಗಳ ಅಭಿವೃದ್ದಿಯ ಸಂಕಲ್ಷ ಮಾಡದ ಅಧಿಕಾರಿಯ ವರ್ಗಾವಣೆ ಎಂದು
ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಹುತೇಕ ಗ್ರಾಮಗಳು ಕನಿಷ್ಠ ಅಭಿವೃದ್ದಿ ಕಾಣದೆ ಕೊರಗುತ್ತಿದ್ದು ನೋಡಿದರೆ ಇಲ್ಲಿನ ಗ್ರಾಮ ಪಂಚಾಯಿತಿಗಳು ಹಾಗು ಗ್ರಾಮದ ಬಗ್ಗೆ ಯಾವುದೇ ಕಾಳಜಿ ಇಲ್ಲದೆ ಮೂಡಿಗೆರೆ ತಾಲ್ಲೂಕಿನ ತಾ ಪಂ ಕಾರ್ಯ ನಿರ್ವಾಹಕ ಅಧಿಕಾರಿ ಕೇವಲ ಕುರ್ಚಿ ಗಟ್ಟಿ ಮಾಡಿ ತಿಂಗಳ ಸಂಬಳ ಪಡೆದು ದಿನವನ್ನು ದೂಡುತ್ತಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಪ್ರಗತಿಪರ ಸಂಘಟನೆಗಳು ಇವರ ವಿರುದ್ದ ತಮ್ಮ ಆಕ್ರೋಶವನ್ನು ವ್ಯೆಕ್ತಪಡಿಸಿದ್ದಾರೆ.

ಮೂಡಿಗೆರೆ ತಾಲ್ಲೂಕಿನ ತಾ.ಪಂ, ಕಾರ್ಯ ನಿರ್ವಾಹಕ ಅಧಿಕಾರಿ ‘ದಯಾವತಿ,

ಪಂಚಾಯಿತಿ ವ್ಯಾಪ್ತಿಗಳಲ್ಲಿ ಆದಂತಹ ಕಾಮಗಾರಿಗಳಿಗೆ ಸಂಭಂದಪಟ್ಟಂತೆ ಹಾಗು ಆ ಕಾಮಗಾರಿಗಳ ಗುಣಮಟ್ಟ ಸೇರಿದಂತೆ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಇನ್ನು ಮುಂದೆ ಯಾವ ಕಾಮಗಾರಿಯನ್ನು ತುರ್ತಾಗಿ ಅನುಷ್ಟಾನಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ ಹಾಗು ನಡೆದಂತಹ ಕಾಮಗಾರಿಗಳ ಗುಣಮಟ್ಟವನ್ನು ಸಂಬಂದಪಟ್ಟವರೊಂದಿಗೆ ತೆರಳಿ ಪರಿಶೀಲಿಸುವುದು ಹಾಗು ಗ್ರಾಮ ಪಂಚಾಯಿತಿಯ ಅಭಿವೃದ್ದಿ ಅಧಿಕಾರಿಗಳ ತುರ್ತು ಕೋರಿಕೆ ಏನು? ಇದೆಲ್ಲವೂ ಇಲ್ಲಿನ ತಾ ಪ ಈ ಓ ಅವರ ಜವಬ್ದಾರಿ ಆಗಿದೆ ಅದನ್ನು ಬಿಟ್ಟು ಕೇವಲ ಪರ್ಸೆಂಟೇಜ್ ಲೆಕ್ಕಾಚಾರದ ಕೆಲಸದಲ್ಲಿ ತೊಡಗಿರುವ ಮೂಡಿಗೆರೆ ಕಾರ್ಯ ನಿರ್ವಾಹಕ ಅಧಿಕಾರಿಯಾದ ದಯಾವತಿ ಯವರ ಅಗತ್ಯ ಈ ಜಿಲ್ಲೆಗೆ ಇದೆಯೇ ಎಂಬ ಪ್ರಶ್ನೆ ಇಲ್ಲಿರುವ ಸಾರ್ವಜನಿಕರಲ್ಲಿ ಕಾಡಿದೆ

ಇವರು ಸುಮಾರು ಎರಡು ವರ್ಷಗಳ ಹಿಂದೆ ಬೇರೆ ಜಿಲ್ಲೆಯಿಂದ ವರ್ಗಾವಣೆಗೊಂಡು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ತಾಲ್ಲೂಕು ಪಂಚಾಯಿತಿಯಲ್ಲಿ ಕಾರ್ಯ ನಿರ್ವಾಹಕ ಅಧಿಕಾರಿಯಾಗಿ ಪ್ರಸ್ತುತ ಕಾರ್ಯನಿರ್ವಹಿಸುತ್ತದ್ದು ಇವರ ಬಳಿ ಕೆಲವು ಕೆಳ ಮಟ್ಟದ ಅಧಿಕಾರಿಗಳಿಂದ ಹಿಡಿದು ಇವರ ಬಳಿ ವಿವಿಧ ಕೆಲಸಕ್ಕಾಗಿ ಬರುವ ಸಾರ್ವಜನಿಕರೊಂದಿಗೆ ಕನಿಷ್ಟ ಗೌರವದಿಂದ ವರ್ತಿಸುವ ಮನೋಭಾವ ಕೂಡ ಇವರಲ್ಲಿ ಇಲ್ಲದಂತಾಗಿದೆ ಹಾಗು ಇವರು ಈ ಹಿಂದೆ ಕೆಲಸ ನಿರ್ವಹಿಸಿದ ಸ್ಥಳದಲ್ಲಿ ಇವರ ದುಷ್ಟ ಮನಸ್ಥಿತಿಗೆ ಬಲವಂತದ ವರ್ಗಾವಣೆಯೂ ಕೂಡ ಆಗಿರುವ ವಿಚಾರ ಬಲ್ಲ ಮೂಲಗಳಿಂದ ತಿಳಿದಿದ್ದು ಹಾಗು ಇವರ ಬಗ್ಗೆ ಬಹುತೇಕ ಸ್ಥಳಿಯರಲ್ಲಿ ಯಾವುದೇ ಒಳ್ಳೆಯ ಕನಿಷ್ಟ ಅಭಿಪ್ರಾಯವಿಲ್ಲದಂತೆ ಎದ್ದು ಕಾಣಿಸುತ್ತಿದೆ

ಒಟ್ಟಿನಲ್ಲಿ ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದರೆ ಈ ಒಂದು ಅಧಿಕಾರಿ ಈ ತಾಲ್ಲೂಕಿನಲ್ಲಿ ಇರುವವರೆಗೂ ಅಭಿವೃದ್ದಿ ಕೇವಲ ಮರೀಚಿಕೆ ಮಾತ್ರ. ಹಾಗು ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಇಲಾಖೆಗಳ ಭ್ರಷ್ಟಾಚಾರಕ್ಕೆ ಇನ್ನಷ್ಟು ಪುಷ್ಟಿ ನೀಡಿದಂತೆ ಆಗುತ್ತದೆ
ಆದ್ದರಿಂದ ಬ್ರಷ್ಟಾಚಾರ ಮುಕ್ತ ಹಾಗು ಸುಭದ್ರ ಸುಲಲಿತ ಆಡಳಿತದ ದೃಷ್ಟಿಯಿಂದ ಇವರನ್ನು ಆದಷ್ಟು ಬೇಗ ವರ್ಗಾವಣೆ ಗೊಳಿಸಬೇಕಾಗಿದೆ ಹಾಗು ಇಂತಹ ಭ್ರಷ್ಟ ಅಧಿಕಾರಿಳು ಇದುವರೆಗೂ ಗಳಿಸಿರುವ ಆದಾಯದ ಕುರಿತು ಸಂಭಂದಪಟ್ಟ ಇಲಾಖೆಗಳು ಉನ್ನತ ಮಟ್ಟದಲ್ಲಿ ತನಿಖೆಯನ್ನು ನಡೆಸಿ ಕಾನೂನು ರೀತಿಯ ಕ್ರಮದ ಜೊತೆಗೆ ಇಂತಹ ಅಧಿಕಾರಿಗಳನ್ನು ಆದಷ್ಟು ಬೇಗ ವರ್ಗಾವಣೆ ಮಾಡಲು ಜಿಲ್ಲಾಡಳಿತ ಸರ್ಕಾರಕ್ಕೆ ಹಾಗು ಸಂಭಂದಿಸಿದವರಿಗೆ ಸೂಚಿಸಿ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ

ವರದಿ : ನಿತೀಶಗೌಡ ಪಾಟೀಲ್ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!