ಸೇಡಂ:ತಾಲೂಕಿನ ಬಿಜನಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಪ್ರಕೃತಿಯ ಮಡಿಲಲ್ಲಿ ಅರಿವಿನ ಪಾಠದ ಜೊತೆಗೆ ವನ ವೀಕ್ಷಣೆಯನ್ನು ಗ್ರಾಮದ ಮಲ್ಲಯ್ಯ ಸ್ವಾಮಿ ತೋಟಕ್ಕೆ ತೆರಳಿ ತೋಟದಲ್ಲಿರುವ ವಿವಿಧ ತರಕಾರಿಗಳು ಹಾಗೂ ದನ ಕರುಗಳಿಗೆ ಮೇವು ಬೆಳವಣಿಗೆಯನ್ನು ಶಿಕ್ಷಕರು ವಿದ್ಯಾರ್ಥಿಗಳು ಒಟ್ಟಿಗೆ ವೀಕ್ಷಿಸಿ ಆನಂದ ಪಡೆದು ಪರಿಸರ ಜಾಗೃತಿ ಸಂರಕ್ಷಣೆಯ ಮಹತ್ವ ವಿದ್ಯಾರ್ಥಿಗಳಲ್ಲಿ ಬರುವಂತೆ ಮಾಡಲಾಯಿತು,ಈ ವೇಳೆಯಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಶಾಂತಪ್ಪ ಹೆಬ್ಬಳ,ಶಿಕ್ಷಕರಾದ ಶಿವಲಿಂಗಪ್ಪ, ಅಂಬರೀಷ್ ಸಂಗಾವಿ. ಎಮ್ ಹಾಗೂ ವಿದ್ಯಾರ್ಥಿಗಳು ಇದ್ದರು.
ಬಾಕ್ಸ್ : ಮಕ್ಕಳಿಗೆ ಪರಿಸರದ ಬಗ್ಗೆ ಪ್ರೀತಿ ಮತ್ತು ಕಾಳಜಿ ಬೆಳೆಸಲು ವನ ವೀಕ್ಷಣೆಯನ್ನು ಪ್ರಾಯೋಗಿಕ ಕಲಿಕೆಯಿಂದ ಅತ್ಯಗತ್ಯವಾಗಿದ್ದು ಪ್ರಕೃತಿಯೇ ನಮಗೆ ದೊಡ್ಡ ಶಿಕ್ಷಕ. ಶಾಂತಪ್ಪ ಹೆಬ್ಬಾಳ ಮುಖ್ಯೋಪಾಧ್ಯಾಯರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಿಜನಳ್ಳಿ.
ವರದಿ :ವೆಂಕಟಪ್ಪ ಕೆ ಸುಗ್ಗಾಲ್.




