Ad imageAd image

ಸಂಪುಟ ಸಭೆಯಲ್ಲಿ ಮೂಡದ ಒಮ್ಮತ : ಒಳ ಮೀಸಲಾತಿ ಜಾರಿ ಅಪೂರ್ಣ

Bharath Vaibhav
ಸಂಪುಟ ಸಭೆಯಲ್ಲಿ ಮೂಡದ ಒಮ್ಮತ : ಒಳ ಮೀಸಲಾತಿ ಜಾರಿ ಅಪೂರ್ಣ
vidhana soudha
WhatsApp Group Join Now
Telegram Group Join Now

ಬೆಂಗಳೂರು: ಪರಿಶಿಷ್ಟ ಜಾತಿಗೆ ಇರುವ ಶೇಕಡ 15 ರಷ್ಟು ಮೀಸಲಾತಿಯಲ್ಲಿ ಒಳ ಮೀಸಲಾತಿ ಜಾರಿ ಮಾಡಲು ದಲಿತ ಸಚಿವರಲ್ಲಿ ಒಮ್ಮತ ಮೂಡದ ಕಾರಣ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಅಪೂರ್ಣವಾಗಿದೆ.

ಇದೇ ಒಳ ಮೀಸಲಾತಿ ವಿಚಾರವಾಗಿ ವಿಶೇಷ ಸಂಪುಟ ಸಭೆ ನಡೆಸಲು ತೀರ್ಮಾನಿಸಲಾಗಿದೆ.ಒಳ ಮೀಸಲಾತಿ ವಿಚಾರವಾಗಿ ಉಂಟಾಗಿರುವ ಗೊಂದಲ ನಿವಾರಿಸಲು ತೀರ್ಮಾನಿಸಲಾಗಿದೆ.

ದಲಿತ ವರ್ಗದ ಮೂರು ಗುಂಪುಗಳಿಗೆ ಸಮಾನ ಅವಕಾಶ ಒದಗಿಸಲು ಒಳ ಮೀಸಲಾತಿ ಜಾರಿಯ ವೇಳೆ ರೋಸ್ಟರ್ ಬಿಂದು ಮರು ನಿಗದಿಗೆ ಸರ್ಕಾರ ಒಲವು ತೋರಿದೆ. ಇದಕ್ಕಾಗಿ ತಾಂತ್ರಿಕ ಸಮಿತಿ ರಚಿಸಲು ಮುಂದಾಗಿದ್ದು, ಸಂಪುಟ ಸಭೆಯಲ್ಲಿ ಈ ವಿಚಾರವಾಗಿ ಚರ್ಚೆ ನಡೆದಿದೆ.

ದಲಿತ ಸಮುದಾಯದ ಎಡಗೈ, ಬಲಗೈ, ಸ್ಪೃಶ್ಯ ವರ್ಗಗಳ ಸಚಿವರಿಂದ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ. ರೋಸ್ಟರ್ ಬಿಂದು ಜಾರಿ ಮಾಡಿದರೆ ಬಲಗೈಗೆ ಅನ್ಯಾಯವಾಗುತ್ತದೆ ಎಂದು ಆಕ್ಷೇಪ ವ್ಯಕ್ತವಾಗಿದೆ. ಒಮ್ಮತ ಮೂಡದ ಕಾರಣ ಚರ್ಚೆ ಅಪೂರ್ಣವಾಗಿದ್ದು, ವಿಶೇಷ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲು ತೀರ್ಮಾನ ಕೈಗೊಳ್ಳಲಾಗಿದೆ.

ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಗೆ ಬದ್ಧವಾಗಿದ್ದು ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ. ಆದರೆ ಚರ್ಚೆ ಅಪೂರ್ಣವಾಗಿದ್ದು, ಮುಂದೆ ವಿಶೇಷ ಸಭೆ ಕರೆಯುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಮುಖ್ಯಮಂತ್ರಿಗಳಿಗೆ ಅಧಿಕಾರ ನೀಡಲಾಗಿದೆ ಎಂದು ಕಾನೂನು ಸಚಿವ ಹೆಚ್.ಕೆ. ಪಾಟೀಲ್ ತಿಳಿಸಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!