ಗುರುಮಠಕಲ್: ಪಟ್ಟಣದ ಜ್ಞಾನ ವೃಕ್ಷ ನವೋದಯ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದ ವಿದ್ಯಾರ್ಥಿ ವರ್ಷಿತ್ ರೆಡ್ಡಿ ತಂದೆ ಸಾಯಿರೆಡ್ಡಿ ಮಲ್ಕಪಲ್ಲಿ ಅವರು 2026ನೇ ಸಾಲಿನ ಅಖಿಲ ಭಾರತ ಸೈನಿಕ ಶಾಲಾ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಸೈನಿಕ ಶಾಲೆಗೆ ಆಯ್ಕೆಯಾಗಿದ್ದಾರೆ ಎಂದು ಪೋಷಕರು ಸಂತಸ ವ್ಯಕ್ತಪಡಿಸಿದರು.
ವಿದ್ಯಾರ್ಥಿ ವರ್ಷಿತ್ ರೆಡ್ಡಿ ಅವರು ಸಾಯಿರೆಡ್ಡಿ ಅವರ ಪುತ್ರರಾಗಿದ್ದಾರೆ. ಅವರ ಸಾಧನೆಗೆ ಕುಟುಂಬದವರು ಹಾಗೂ ತರಬೇತಿ ಕೇಂದ್ರದ ಶಿಕ್ಷಕರು ಸಂತೋಷ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಯ ಪರಿಶ್ರಮ ಮತ್ತು ತರಬೇತಿ ಕೇಂದ್ರದ ಮಾರ್ಗದರ್ಶನದಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ಪಾಲಕರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಜ್ಞಾನ ವೃಕ್ಷ ನವೋದಯ ತರಬೇತಿ ಕೇಂದ್ರದ ಸಿಬ್ಬಂದಿಗಳು ವಿದ್ಯಾರ್ಥಿಯನ್ನು ಅಭಿನಂದಿಸಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆಗಳನ್ನು ಮಾಡಲು ಶುಭ ಹಾರೈಸಿದರು.




