ಅಥಣಿ ಇಂಧನ ಇಲಾಖೆಯಲ್ಲಿ ಭ್ರಷ್ಟಾಚಾರ ಮಾಡಿ ಅಮಾನತ್ತು ಹೊಂದಿರುವ ಅಧಿಕಾರಿಯನ್ನು ಮರಳಿ ಅದೇ ಹುದ್ದೆಗೆ ನೇಮಕಮಾಡಿರುವುದು ನಾಚಿಕೆಡಿನ ಸಂಗತಿಯಾಗಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಹಣ ನೀಡಿದರೆ ಯಾವ ಹುದ್ದೆ ಮತ್ತು ಸ್ಥಳ ಎಲ್ಲಿ ಬೇಕಾದರು ಸಿಗುತ್ತದೆ ಎನ್ನೂವುವುದಕ್ಕೆ ಅಥಣಿ ಪ್ರಭಾರ ಇ ಇ ಗುರುರಾಜ ವಿ ಸಂಪನ್ನವರ ಸಾಕ್ಷಿ ಎಂದು ರೈತ ಸಂಘದ ಅಥಣಿ ತಾಲೂಕಾ ಮಹಿಳಾ ಅಧ್ಯಕ್ಷೆ ಪ್ರೀತಿ ಪೂಜಾರಿ ತಿಳಿಸಿದ್ದಾರೆ
ಅವರು ಅಥಣಿಯಲ್ಲಿ ಪತ್ರಿಕಾ ವರದಿಗಾರೊಂದಿಗೆ ಮಾತನಾಡಿ ಈ ಹಿಂದೆ 2021-22 ನೇ ಸಾಲಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗುರುನಾಥ ವಿ ಸಂಪನ್ನವರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು (ವಿ) ಕಾರ್ಯ ಮತ್ತು ಪಾಲನೆ ಉಪ ವಿಭಾಗ ಐಗಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಇಲಾಖೆಯ ಕೋಟಿ ಕೋಟಿ ಹಗರಣ ಮಾಡಿ ಅಮಾನತು ಆಗಿದ್ದರು ಈ ಪ್ರಕರಣ ಇಲಾಖೆ ತನಿಖಾ ಹಂತದಲ್ಲಿ ಇರುವಾಗಲೇ ಇದೇ ಅಧಿಕಾರಿಯನ್ನು ಮತ್ತೆ ಇದೇ ಹುದ್ದೆಗೆ ನಿಯೋಜನೆ ಮಾಡಿ ಅದರ ಜೊತೆಗೆ ಅಥಣಿ ತಾಲೂಕು ಪ್ರಭಾರ ಇ.ಇ . ಹುದ್ದೆ ನೀಡಿರುವುದು ಮೇಲಾಧಿಕಾರಿಗಳ ಮೇಲೆ ಅನುಮಾನ ಹುಟ್ಟಾಗಿದೆ.

ಈ ಹಿಂದೆ ಆದಂತಹ ಹಗರಣಗಳನ್ನು ಮುಚ್ಚಿ ಹಾಕಲು ಸಂಚು ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ .
ಹಗರಣ ಮಾಡಿದ ಹಣವನ್ನು ಸರ್ಕಾರಕ್ಕೆ ಮರಳಿ ತುಂಬಿದ್ದು ಕೂಡಾ ನಮ್ಮ ರೈತರಿಗೆ ಮಾಹಿತಿ ಬಂದಿಲ್ಲ
ಸಾರ್ವಜನಿಕರ ಮನೆ ವಿದ್ಯುತ್ ಬಿಲ್ಲ ಕಟ್ಟುವುದು ತಡವಾದರೆ ದಂಡ ವಿಧಿಸುವ ಈ ಇಲಾಖೆಯು ಅಧಿಕಾರಿಗಳು ಕೋಟಿ ಕೋಟಿ ಹಣ ಲೋಟಿ ಮಾಡಿದರು ಯಾಕೆ ಸುಮ್ಮನೆ ಬಿಟ್ಟಿದೆ ಎಂದು ತಿಳಿಯುತ್ತಿಲ್ಲ
ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಆಡಳಿತದಲ್ಲಿ ಇಂತಹ ಅಧಿಕಾರಿಗಳಿದ ಸರ್ಕಾರಕ್ಕೆ ಕೆಟ್ಟ ಹೆಸರು ಬುರುತ್ತಿದೆ ಕೂಡಲಿ ಸರ್ಕಾರ ಎಚ್ಚೆತ್ತು ಗುರುರಾಜ ವಿ ಸಂಪನ್ನವರನನ್ನು ಇಲಾಖೆಯಿಂದಲೇ ತಗೆದು ಹಾಕಬೇಕು
ಅಷ್ಟೇ ಅಲ್ಲದೇ
ಈ ವರ್ಷದಲ್ಲಿಯೂ ಸರ್ಕಾರದಿಂದ ಬಂದ ಅನುದಾನವನ್ನು ಸಹ ಗುರುರಾಜ ವಿ ಸಂಪನ್ನವರ ಅವರು ದುರ್ಬಳಕೆ ಮಾಡಿಕೊಂಡಿರುತ್ತಾರೆ ಈ ಅಧಿಕಾರಿ ವಿರುದ್ಧ ಸಾಲು ಸಾಲು ಆರೋಪಗಳು ಕೇಳಿ ಬಂದರು ಹುಬ್ಬಳ್ಳಿ ಹೆಸ್ಕಾಂ ನಿಗಮದ ವ್ಯವಸ್ಥಾಪಕರು ನಿರ್ದೇಶಕರು ಕಣ್ಣು ಇದ್ದು ಕುರುಡುರಂತೆ ವರ್ತಸುತ್ತಿದ್ದಾರೆ
ಈ ಕುರಿತು ಪ್ ಮನವಿ ಸಲ್ಲಿಸಿದರು ಪ್ರಯೋಜನೆಯಾಗಿಲ್ಲ.
ವ್ಯವಸ್ಥಾಪಕ ನಿರ್ದೇಶಕರ ಜೊತೆಗೆ ಈ ಕುರಿತು ಪೋನ್ ಮೂಲಕ ವಿಚಾರಿಸಿದಾಗ ನಾವು ಅವರ ವಿರುದ್ಧ ಯಾವುದೇ ಕ್ರಮವಹಿಸಲು ನಮಗೆ ಅಧಿಕಾರ ಇರುವುದಿಲ್ಲ ತಮಗೆ ಬೇಕಾದ ಅಧಿಕಾರಿಗಳನ್ನು ತಾವೇ ಹಾಕಿಕೊಳ್ಳಬೇಕು ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ ನಿಗಮದ ವ್ಯವಸ್ಥಾಪಕರೇ ಈ ರೀತಿ ಹಾರಿಕೆ ಉತ್ತರ ನೀಡಿದರೆ ನಾವು ಯಾರ ಬಳಿ ಹೋಗಬೇಕು? ಈ ಅಧಿಕಾರಿಗಳಿಗೆ
ಇನ್ನುಳಿದ ಅಧಿಕಾರಿಗಳು ಸಹ ಸಹಕಾರ ನೀಡುತ್ತಿರುವುದು ಗಮನಕ್ಕೆ ಬಂದಿದೆ
ಈ ಕುರಿತು ಇಗಾಗಲೇ ನಿಗಮದ ಅಧ್ಯಕ್ಷರಾದ ಸೈಯದ ಆಜೀಮ್ ಪೀರ ಖಾದ್ರಿ ಅವರಿಗೆ ಮನವಿ ಸಲ್ಲಿಸಿದ್ದೇವೆ .
ಈ ಕುರಿತು ಇಂಧನ ಸಚಿವರು ಹಾಗೂ ಇಲಾಖೆ ಅಧಿಕಾರಿಗಳು ಯಾವು ಕ್ರಮ ಕೈಗೊಳುತ್ತಾರೆ ಎಂದು ಕಾದು ನೋಡಬೇಕಾಗಿದೆ ಒಂದು ವೇಳೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳದಿಂದರೆ ಹುಬ್ಬಳ್ಳಿ ಕೇಂದ್ರ ಕಛೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ರೈತ ಸಂಘದ ಮಹಿಳಾ ಅಥಣಿ ತಾಲೂಕಾ ಅಧ್ಯಕ್ಷೆ ಪ್ರೀತಿ ಪೂಜಾರಿ ಹಾಗೂ ಸಂಘದ ಸದಸ್ಯರು ಎಚ್ಚರಿಕೆ ನೀಡಿದ್ದಾರೆ ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .
ಭಾರತ ವೈಭವ ನ್ಯೂಸ್ ಅಥಣಿ.




