ಕಾಗವಾಡ: ನಿಮೋನಿಯಾದಿಂದ ಕಾಗವಾಡ ಪೊಲೀಸ್ ಠಾಣೆಯ ಎಎಸ್ಐ ಜಯಾನಂದ ಸೋನಾವಣೆ ಅವರ ಧರ್ಮಪತ್ನಿ ನಿಧನ ಹೊಂದಿರುವ ಘಟನೆ ಇತ್ತೀಚಿಗೆ ನಡೆದಿದೆ. 49 ವಯಸ್ಸಿನ ಶಿವಲೀಲಾ ಜಯಾನಂದ ಸೋನಾವಣೆ ಮೃತಹೊಂದಿದ್ದ ಮಹಿಳೆಯಾಗಿದ್ದಾರೆ. 10 ಫೆಬ್ರುವರಿ 2026 ರಂದು ಇವರನ್ನು ಬೆಳಗಾವಿ ಕೆಎಲ್ಇ ಆಸ್ಪತ್ರೆಗೆ ದಾಖಲಿಸಲಾಗಿತ್ತು ತದನಂತರ ಇವರು 25 ಫೆಬ್ರುವರಿ ಬುಧವಾರ ದಿನದಂದು ಚಿಕಿತ್ಸೆ ಫಲಿಸದೆ ಬೆಳ್ಳಿಗೆ 6. 45 ಕ್ಕೆ ಲಿಂಗೈಕ್ಯರಾಗಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.




