Ad imageAd image

ದಾರ್ಮಿಕ, ಸಾಮಾಜಿಕ ಸೇವಾ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಬಸವಾಭಿಮಾನಿಗಳು

Bharath Vaibhav
ದಾರ್ಮಿಕ, ಸಾಮಾಜಿಕ ಸೇವಾ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಬಸವಾಭಿಮಾನಿಗಳು
WhatsApp Group Join Now
Telegram Group Join Now

ಹುಬ್ಬಳ್ಳಿ: ದಾರ್ಮಿಕ, ಸಾಮಾಜಿಕ ಸೇವಾ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಬಸವಾಭಿಮಾನಿಗಳು, ಜನಪರ ಕಾಳಜಿವುಳ್ಳ , ಸಮಾಜ ಸೇವಕ ಸಂಭಾಜಿ ಕಲಾಲ್ ಅವರಿಗೆ ಹಾಗೂ ವೃತ್ತಿಯಿಂದ ಸೃಜನಶೀಲ ಗ್ರಂಥಪಾಲಕರು ಮತ್ತು ಪ್ರವೃತ್ತಿಗಳಿಂದ ಸಮಾಜ ಸೇವಕರು. ಜಾತ್ಯಾತೀತ ಮನೋವೃತ್ತಿಯಿಂದ ಎಲ್ಲರನ್ನೂ ಅಪ್ಪಿ ಸಮಾನ ಮನಸ್ಕರಾಗಿ ಸಹೃದಯತೆಯಿಂದ ಉತ್ತರಕರ್ನಾಟಕದಲ್ಲಿ ಹಲವಾರು ಸಮಾಜ ಮುಖಿ ಕ್ರಿಯಾತ್ಮಕ ಚಟುವಟಿಕೆಗಳನ್ನು ಮಾಡುವ ಮೂಲಕ ಸಮಾಜ ಸೇವಾ ಕಾರ್ಯ ಮಾಡುತ್ತಿರುವ ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕರ‍್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ, ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ ಅವರಿಗೆ ಶ್ರೇಯಾ ಜನ ಸೇವಾ ಫೌಂಡೇಶನ್ ೬ ನೇ ವಾರ್ಷಿಕೋತ್ಸವ ಶುಭ ಸಂದರ್ಭದಲ್ಲಿ ಶಾಲು , ಮಾಲಾರ್ಪಣೆ ಮಾಡಿ, ನೆನಪಿನ ಕಾಣಿಕೆ ನೀಡಿ ಗೌರವ ಪೂರ್ವಕವಾಗಿ ಹೆಮ್ಮೆ, ಅಭಿಮಾನದಿಂದ ಸನ್ಮಾನಿಸಿದರು. ಹುತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು.

ಶ್ರೇಯಾ ಜನ ಸೇವಾ ಫೌಂಡೇಶನ್ ನ ರಾಜ್ಯಾಧ್ಯಕ್ಷ ವಿ.ಜಿ ಪಾಟೀಲ್, ಸುಜಯ ಸುರೇಶ ಹೊರಕೇರಿ, ಸೋಹನ ಸುರೇಶ ಹೊರಕೇರಿ, ಶಕುಂತಲಾ ವಿ. ಪಾಟೀಲ್, ಮೃತ್ಯುಂಜಯ ಮಟ್ಟಿ, ಶರಣಪ್ಪ ಕೋಟಗಿ , ಶಾಂತಣ್ಣ ಕಡಿವಾಲ , ಮಹೇಶ್ ಮಾದೇವಪ್ಪನವರ, ಡಾ ಎಚ್ ವಿ. ಬೆಳಗಲಿ, ಮಲ್ಲನಗೌಡ ಪಾಟೀಲ್ , ಡಾ ಎಚ್ ಎಚ್ ನದಾಫ್, ಮಂಜುಳಾ ಬೆಣ್ಣಿ, ಆರ್ ಎಂ ಗೋಗೇರಿ, ಸುಧಾ ಕಬ್ಬೂರ, ಸದಾಶಿವ ಚೌಶೆಟ್ಟಿ, ವಂದನಾ ಕರಾಳೆ , ಮುಂತಾದವರು ಇದ್ದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!