Ad imageAd image

ನಗರದ ರಸ್ತೆ ಗುಂಡಿಮಯ ವಾಹನ ಸವಾರರಿಗೆ ಕಿರಿಕಿರಿ

Bharath Vaibhav
ನಗರದ ರಸ್ತೆ ಗುಂಡಿಮಯ ವಾಹನ ಸವಾರರಿಗೆ ಕಿರಿಕಿರಿ
WhatsApp Group Join Now
Telegram Group Join Now

ಧಾರವಾಡ : ಸವಾರರ ಪ್ರಾಣಕ್ಕೆ ಕಂಟಕವಾಗಿದ್ದರೂ ಎಚ್ಚೆತ್ತುಕೊಳ್ಳದ ಜನಪ್ರತಿನಿಧಿಗಳ ನಡೆಗೆ ಬೇಸತ್ತ ಯುವಕನೋರ್ವ, ತಾನೇ ರಸ್ತೆಗಿಳಿದು ಗುಂಡಿ ಮುಚ್ಚುವ ಮೂಲಕ ವ್ಯವಸ್ಥೆಗೆ ಕನ್ನಡಿ ಹಿಡಿದಿದ್ದಾನೆ.

​ಧಾರವಾಡದ ಮಣಕಿಲ್ಲಾ ನಿವಾಸಿ ಹಾಗೂ ಸಮಾಜ ಸೇವಕ ಮೊಜಿನ್ ಘೀ ವಾಲೆ, ಧಾರವಾಡ ನಗರದ ಸವದತ್ತಿ ಪಿ.ಬಿ. ರಸ್ತೆಯಲ್ಲಿ ಬಿದ್ದಿದ್ದ ಅಪಾಯಕಾರಿ ಗುಂಡಿಗಳನ್ನು ಸ್ವತಃ ಮಣ್ಣು ಹಾಕಿ ಮುಚ್ಚಿದ್ದಾರೆ. ವಾಹನಗಳಿಗೆ ಅಡ್ಡ ವಾಗಿರುವ ಈ ಗುಂಡಿಗಳನ್ನು ಗಮನಿಸಿದ ಮೊಜಿನ್, ಸಾರ್ವಜನಿಕರ ಸುರಕ್ಷತೆಗಾಗಿ ತಾವೇ ಚೀಲದಲ್ಲಿ ಮಣ್ಣು ತಂದು ಗುಂಡಿಗಳನ್ನು ಬುಚ್ಚುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

​ಕೋಟಿ ಕೋಟಿ ಅನುದಾನದ ನಡುವೆಯೂ ರಸ್ತೆ ಸರಿಪಡಿಸದ ಪಾಲಿಕೆಯ ಕಾಳಜಿಯನ್ನು ಈ ಯುವಕನ ಕಾರ್ಯ ಪ್ರಶಂಸುವಂತಿದೆ. ಯುವಕನ ಈ ಜನಪರ ಕೆಲಸಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ವರದಿ : ವಿನಾಯಕ ಗುಡ್ಡದಕೇರಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!