ಮಲ್ಲಮ್ಮನ ಬೆಳವಡಿ : ಮಲ್ಲಮ್ಮನ ಬೆಳವಡಿ ಗ್ರಾಮದ ಆದರ್ಶ ಶಿಕ್ಷಣ ಸಂಸ್ಥೆಯಲ್ಲಿ ಅಭ್ಯಾಸ ಮಾಡುತ್ತಿರುವ 11 ವರ್ಷದ ಬಾಲಕಿ ಗ್ರಾಮದ ಲಕ್ಷ್ಮಿ ಪ್ರಕಾಶ್ ಹುಂಬಿ ಇವಳನ್ನು ಆದರ್ಶ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಗೂ ಶಿಕ್ಷಕರು ಗುರುಮಾತೆಯರು ಸನ್ಮಾನಿಸಿದರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎ ಬಿ ಪಾಟೀಲ್ ಲಕ್ಷ್ಮಿ ಹುಂಬಿ ಭಕ್ತಿಯಿಂದ ದೇವರಿಗೆ ಹೋದಾಗ ಹನುಮಂತ ದೇವರ ದೇವಸ್ಥಾನದ ಹೊರಗಡೆ ಇರುವ ಮೂರ್ತಿಯನ್ನು ಎಲ್ಲ ಜನರು ಶನಿ ದೇವರೆಂದು ಪೂಜಿಸುತ್ತಿರುವಾಗ ಲಕ್ಷ್ಮಿಯು ಆ ದೇವರಿಗೆ ನಮಸ್ಕಾರ ಮಾಡಲು ಹೋಗಿ ಇದು ದೇವರಲ್ಲ ಒಂದು ಐತಿಹಾಸಿಕ ಶಿಲೆ ಎಂಬುದನ್ನು ಕಂಡುಹಿಡಿದಿರುವುದು ನಮ್ಮ ಹೆಮ್ಮೆ ನಮ್ಮ ಶಾಲೆಯಲ್ಲಿ ಮಕ್ಕಳಿಗೆ ಇತಿಹಾಸದ ಬಗ್ಗೆ ನಮ್ಮ ಶಿಕ್ಷಕ ವೃಂದ ಮಕ್ಕಳಿಗೆ ಅಚ್ಚುಕಟ್ಟಾದ ಪಾಠ ಪಠಿಸುತ್ತಿರುವುದು ಈ ಒಂದು ವಿದ್ಯಾರ್ಥಿನಿಯಿಂದ ನಮಗೆ ಗೊತ್ತಾಗುತ್ತಿದೆ ವಿದ್ಯಾರ್ಥಿನಿಯ ಸಾಧನೆಯು ನಮ್ಮ ತಾಲೂಕಿಗೆ ಜಿಲ್ಲೆಗೆ ನಮ್ಮ ಶಿಕ್ಷಣ ಸಂಸ್ಥೆಗೆ ಹೆಮ್ಮೆ ಇದೆ ಎಂದು ಎಬಿ ಪಾಟೀಲ್ ಹೇಳಿದರು ಸಂಸ್ಥೆಯ ಕಾರ್ಯದರ್ಶಿಯಾದ ಶ್ರೀಮತಿ ಮಂಗಳಾದೇವಿ ಪಾಟೀಲ್ ಮಾತನಾಡಿ ಎಲ್ಲ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಠದ ಜೊತೆಗೆ ಐತಿಹಾಸಿಕ ಪ್ರಜ್ಞೆಯನ್ನು ರೂಡಿಸಿಕೊಳ್ಳಬೇಕು ಲಕ್ಷ್ಮಿ ನಮ್ಮ ಆದರ್ಶ ಶಿಕ್ಷಣ ಸಂಸ್ಥೆಯ ಹೆಮ್ಮೆಯ ವಿದ್ಯಾರ್ಥಿನಿಯಾಗಿ ಹೊರಹೊಮ್ಮಿ ಇರುವುದು ನಮಗೆ ಸಂತೋಷವಾಗಿದೆ ಎಂದು ಹೇಳಿದರು ಕಾರ್ಯಕ್ರಮದಲ್ಲಿ ಶಿಕ್ಷಣ ಸಂಸ್ಥೆಯ ಮುಖ್ಯೋಪಾಧ್ಯಾಯರಾದ ಸಂಗಮೇಶ್ ಫಡಕರ್ ಲಕ್ಷ್ಮಿ ನಮ್ಮ ಶಾಲೆಯಲ್ಲಿ ಐದನೇ ತರಗತಿಯಲ್ಲಿ ಓದುತ್ತಿದ್ದಾಳೆ ಅವಳು ಚಿಕ್ಕವಯಸ್ಸಿನಲ್ಲಿ ನಮ್ಮ ಶಾಲೆಯ ಕೀರ್ತಿಯನ್ನು ತಂದಿದ್ದಾಳೆ ಅದಕ್ಕಾಗಿ ನಾವು ಅವಳನ್ನು ಅಭಿನಂದಿಸುತ್ತೇವೆ ಎಂದು ಹೇಳಿದರು ಕಾರ್ಯಕ್ರಮದಲ್ಲಿ ಲಕ್ಷ್ಮಿಯ ಸಹೋದರ ಸಚಿನ್ ಹುಂಬಿ ಮಾತನಾಡಿ ನಮ್ಮ ಸಹೋದರಿ ಲಕ್ಷ್ಮಿಗೆ ಈ ಸಂಸ್ಥೆಯಲ್ಲಿ ಕಲಿಸುವ ಎಲ್ಲಾ ಶಿಕ್ಷಕರು ಗುರುಮಾತೆಯರಿಗೆ ಹಾಗೂ ಅಧ್ಯಕ್ಷರಾದ ಎ ಬಿ ಪಾಟೀಲ್ ಸರ್ ಅವರಿಗೆ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಮಕ್ಕಳಲ್ಲಿ ಈ ರೀತಿ ಇತಿಹಾಸಪ್ರಜ್ಞೆ ಬರಲು ಈ ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳಿಗೆ ಇತಿಹಾಸಪ್ರಜ್ಞ ಬರುವ ಹಾಗೆ ತಿಳುವಳಿಕೆ ನೀಡಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು ಕಾರ್ಯಕ್ರಮದಲ್ಲಿ ಶಿಕ್ಷಕಿಯರಾದ ಶಾಂಭವಿ ದೇಸಾಯಿ ಬಸಮ್ಮ ಕೋಲ್ಕಾರ್ , ಶಿಲ್ಪ ಮಂಗಳಗಟ್ಟಿ ಶ್ರೀದೇವಿ ಪೂಜೇರ್ ಐಶ್ವರ್ಯ ಪಾಟೀಲ್ ಸುಮಾ ಕಬ್ಬೂರ್ ಪ್ರಶಾಂತ ಗಾಳಿ ರತ್ನ ಕಂಬಾರ ಲಕ್ಷ್ಮಿಕೋಟಿ ಅನುರಾಧ ಗೌಡ ಭಾಗ್ಯ ಹುಲಿಮಠ ತೇಜಸ್ವಿನಿ ಬಡಿಗೇರ್ ರಿಯಾಣ ಶಾನವಾಡ ವಾಣಿ ಛಬ್ಬಿ ಬಸಮ್ಮ ಮೊಕಾಶಿ ನಾಗರತ್ನ ಮಂಗಳಗಟ್ಟಿ ನಾಗರತ್ನ ಕಂಬಾರ್ ಬಸ್ಸಮ್ಮ ಹುಬ್ಬಳ್ಳಿ ರೇಣುಕಾ ಭಾಜಿ ಸುಷ್ಮಾ ಕಂಬಾರ್ ಉಪಸ್ಥಿತರಿದ್ದರು.
ವರದಿ :ದುಂಡಪ್ಪ ಹೂಲಿ




