ಹಲ್ಯಾಳ : ದಿನಾಂಕ 09/03/26 ರಂದು ನ್ಯಾಯಾಲಯಗಳ ಸಂಕೀರ್ಣ ಅಥಣಿಯಲ್ಲಿ , ತಾಲೂಕು ನ್ಯಾಯವಾದಿಗಳ ಸಂಘದ ವತಿಯಿಂದ ನಡೆದ ರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರವನ್ನು ಹಮ್ಮಿಕೊಂಡಿದ್ದರು.11 ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಈರಣ್ಣ ಇ ಎಸ್.ಮುಖ್ಯ ಅತಿಥಿಗಳು,ಅತಿಥಿಗಳು ಕೇಕ್ ಕತ್ತರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ವಿದ್ಯಾ ವಿದ್ಯಾಧರ ಸವದಿ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಇಂದು ಜಗತ್ತಿನಲ್ಲಿ ಮಹಿಳೆಯೇ ಸರ್ವ ಶಕ್ತಿ,ಎಲ್ಲ ರಂಗಗಳಲ್ಲಿ ಮಹಿಳೆ ಮುಂಚೂಣಿಯಲ್ಲಿದ್ದಾಳೆ ಅವಳಿಗೆ ಇನ್ನು ಸಹಕರಿಸಿದರೆ ಇನ್ನು ಮುಂದೆ ಬರುತ್ತಾಳೆ ಎಂದರು. ಈ ವೇಳೆ ಈರಣ್ಣ ಇ. ಎಸ್.11ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು, ಸಾಲಮಂಟಪ ಮಾನ್ಯ ಪ್ರಧಾನ ಸಿವಿಲ್ ಜಡ್ಜ್ ಜೆ ಎಂ ಎಫ್ ಸಿ ಅಥಣಿ, ಭಾಗ್ಯಶ್ರೀ ಮಾದರ 3ನೇ ಸಿವಿಲ್ ಜಡ್ಜ್ ಜೆ ಎಂ ಎಫ್ ಸಿ ಅಥಣಿ, ಕವಿತಾ ಛಲವಾದಿ ಎ ಪಿ ಪಿ, ಗೀತಾ ಕಾಂಬಳೆ ಮಹಿಳಾ ಪ್ರತಿನಿಧಿ,ಶ್ರೀಮತಿ ರೇಖಾ ಎಂ.ಕುಳ್ಳೊಳ್ಳಿ ನ್ಯಾಯವಾದಿಗಳ ಸಂಘದ ಅಧ್ಯಕ್ಷರು,ಉಪಾಧ್ಯಕ್ಷರು,ಪ್ರಧಾನ ಕಾರ್ಯದರ್ಶಿ ಮತ್ತು ಸಂಘದ ಎಲ್ಲ ಪದಾಧಿಕಾರಿಗಳು,ನ್ಯಾಯವಾದಿಗಳು ಭಾಗವಹಿಸಿದ್ದರು.




