Ad imageAd image

ರಾಜ್ಯದಲ್ಲಿ ಮರ್ಯಾದೆ ಗೇಡು ಹತ್ಯೆಗೆ ಇವ ನಮ್ಮವ ವಿಧೇಯಕ-2026 ಮಂಡನೆ

Bharath Vaibhav
ರಾಜ್ಯದಲ್ಲಿ ಮರ್ಯಾದೆ ಗೇಡು ಹತ್ಯೆಗೆ ಇವ ನಮ್ಮವ ವಿಧೇಯಕ-2026 ಮಂಡನೆ
vidhana soudha
WhatsApp Group Join Now
Telegram Group Join Now

ಬೆಂಗಳೂರು: ರಾಜ್ಯದಲ್ಲಿ ಜಾತಿ ಕಾರಣಕ್ಕಾಗಿ ನಡೆಯುವ ಹತ್ಯೆಗಳು (ಮರ್ಯಾದೆ ಗೇಡು ಹತ್ಯೆ) ಮತ್ತು ಅಂತರ್ಜಾತಿ ವಿವಾಹವಾಗುವ ದಂಪತಿಗಳ ಮೇಲೆ ನಡೆಯುವ ದೌರ್ಜನ್ಯಗಳನ್ನು ತಡೆಯಲು ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.

ಈ ನಿಟ್ಟಿನಲ್ಲಿ ರೂಪಿಸಲಾದ ‘ಇವ ನಮ್ಮವ ಇವ ನಮ್ಮವ ವಿಧೇಯಕ-2026’ಕ್ಕೆ ಗುರುವಾರ ನಡೆದ ಸಚಿವ ಸಂಪುಟ ಸಭೆಯು ಅನುಮೋದನೆ ನೀಡಿದೆ.ಪ್ರಸಕ್ತ ಅಧಿವೇಶನದಲ್ಲೇ ಈ ವಿಧೇಯಕವನ್ನು ಉಭಯ ಸದನಗಳಲ್ಲಿ ಮಂಡಿಸಲು ಸರ್ಕಾರ ತೀರ್ಮಾನಿಸಿದೆ.

ವಿಧೇಯಕದ ಪ್ರಮುಖ ಅಂಶಗಳು ಮತ್ತು ಶಿಕ್ಷೆಯ ವಿವರ:

ಜಾತಿ ದ್ವೇಷ ಮತ್ತು ಮರ್ಯಾದೆಗೇಡು ಹತ್ಯೆಗಳನ್ನು ಹತ್ತಿಕ್ಕಲು ಈ ಕಾಯ್ದೆಯಲ್ಲಿ ಕಠಿಣ ಕಾನೂನು ಕ್ರಮಗಳನ್ನು ಸೂಚಿಸಲಾಗಿದೆ.

ಮರ್ಯಾದೆಗೇಡು ಹತ್ಯೆಗೆ ಜೀವಾವಧಿ: ಜಾತಿ ಕಾರಣಕ್ಕೆ ಮದುವೆ ನಿರಾಕರಿಸಿ ಅಥವಾ ಮದುವೆಯಾದ ನಂತರ ಮರ್ಯಾದೆ ಹೋಯಿತೆಂದು ಕೊಲೆ ಮಾಡಿದರೆ ಅಂತಹವರಿಗೆ ಜೀವಾವಧಿ ಶಿಕ್ಷೆ ವಿಧಿಸಲು ಅವಕಾಶವಿದೆ.

ಕೊಲೆ ಯತ್ನಕ್ಕೆ ಶಿಕ್ಷೆ: ವಿವಾಹವಾದ ಕಾರಣಕ್ಕೆ ದಂಪತಿಗಳ ಕೊಲೆಗೆ ಸಂಚು ರೂಪಿಸಿದರೆ ಅಥವಾ ದಾಳಿ ಮಾಡಿದರೆ ಕನಿಷ್ಠ 5 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ.

ದೈಹಿಕ ಹಲ್ಲೆಗೆ ಶಿಕ್ಷೆ: ಅಂತರ್ಜಾತಿ ವಿವಾಹವಾದವರ ಮೇಲೆ ಹಲ್ಲೆ ನಡೆಸಿದರೆ 3 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶ ನೀಡಲಾಗಿದೆ.

ಸಣ್ಣಪುಟ್ಟ ಹಲ್ಲೆಗೂ ದಂಡನೆ: ಗಂಭೀರವಲ್ಲದ ಹಲ್ಲೆ ನಡೆಸಿದ ಸಂದರ್ಭದಲ್ಲಿ 2 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ.

ವಂಚನೆಗೆ ‘ರೇಪ್’ ಶಿಕ್ಷೆ: ವಿವಾಹದ ಆಮಿಷವೊಡ್ಡಿ, ನಂತರ ಜಾತಿಯ ಕಾರಣ ನೀಡಿ ವಂಚಿಸಿದರೆ ಅದನ್ನು ‘ರೇಪ್’ (ಅತ್ಯಾಚಾರ) ಎಂದು ಪರಿಗಣಿಸಿ ಕಠಿಣ ಶಿಕ್ಷೆ ನೀಡಲಾಗುವುದು.

ದಂಪತಿಗಳಿಗೆ ರಕ್ಷಣೆ: ಜೀವ ಬೆದರಿಕೆ ಇರುವ ಅಂತರ್ಜಾತಿ ವಿವಾಹಿತ ದಂಪತಿಗಳಿಗೆ ಪೊಲೀಸ್ ಇಲಾಖೆಯ ಮೂಲಕ ವಿಶೇಷ ರಕ್ಷಣೆ ಒದಗಿಸಲು ಈ ವಿಧೇಯಕದಲ್ಲಿ ಕ್ರಮ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ಜಾತಿ ವೈಷಮ್ಯ ತಡೆದು ಸಾಮಾಜಿಕ ಸಮಾನತೆ ತರುವುದು ಸರ್ಕಾರದ ಈ ನಿರ್ಧಾರದ ಮುಖ್ಯ ಉದ್ದೇಶವಾಗಿದೆ.

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!