ಬೈಲಹೊಂಗಲ : ಸಮೀಪದ ಸುಕ್ಷೇತ್ರ ಇಂಚಲ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ಶೆಟ್ಟೆಮ್ಮ ದೇವಿ ದೇವಸ್ಥಾನ ಉದ್ಘಾಟನೆ ಕಾರ್ಯಕ್ರಮ ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ಉದ್ಘಾಟನೆ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪರಮ ಪೂಜ್ಯ ಡಾಕ್ಟರ್ ಶ್ರೀ ಶಿವಾನಂದ ಭಾರತಿ ಮಹಾಸ್ವಾಮಿಗಳು ಇಂಚಲ ವಹಿಸಿದ್ದರು. ಉಪಸ್ಥಿತಿ ಪರಮ ಪೂಜ್ಯ ಶ್ರೀ ಪೂರ್ಣಾನಂದ ಭಾರತಿ ಮಹಾಸ್ವಾಮಿಗಳು ಶ್ರೀ ಶಿವಾನಂದ ಭಾರತಿ ಶಿಕ್ಷಣ ಸಂಸ್ಥೆ ಆಡಳಿತ ಅಧಿಕಾರಿಗಳು ಇವರು ಆಗಮಿಸಿದ್ದರು. ಹೂರ ರಾಜ್ಯದಲ್ಲಿ ಶೆಟ್ಟೆಮ್ಮ ದೇವಿ ದೇವಸ್ಥಾನ ಬಹುತೇಕ ಕಡಿಮೆ ಇವೆ. ಕರ್ನಾಟಕ ಹಾಗೂ ಹೊರ ರಾಜ್ಯದಿಂದ ಈ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಾರೆ. ಈ ದೇವಸ್ಥಾನದ ಹಿನ್ನೆಲೆ ಏನೆಂದರೆ ಶೆಟ್ಟೆಮ್ಮದೇವಿ ಉದ್ಭವ ಮೂರ್ತಿ ಇದಾಗಿದೆ.
ಇದು ಕರಾಡೆ ಅವರ ಮನೆತನದ ಮೂಲ ಗದ್ದುಗೆ ಯಾಗಿದೆ. ಸಣ್ಣ ಮಕ್ಕಳು ಹುಟ್ಟಿದಾಗ ಐದು ದಿನಕ್ಕೊಮ್ಮೆ ಅಥವಾ ಒಂಬತ್ತು ದಿನಕ್ಕೊಮ್ಮೆ ಚೇಟಿಗೆವ್ವ ಎಂದು ದೇವಿಗೆ ಬಂದು ಉಡಿತುಂಬಿ ಹೋಗುತ್ತಾರೆ. ಆಗ ಶೆಟ್ಟೆಮ್ಮ ಮಕ್ಕಳ ಹಣೆಬರಹವನ್ನು ಬರಿತಾಳೆ ಎಂದು ಮೊದಲಿನಿಂದ ವಾಡಿಕೆ ಇದೆ. ಶೆಟ್ಟೆಮ್ಮ ಉಡಿ ತುಂಬಿದರೆ ಆಗ ಮಕ್ಕಳು ಒಳ್ಳೆಯ ರೀತಿ ಸದೃಢವಾಗಿ ವಿದ್ಯಾವಂತರಾಗಿ ಬೆಳೆಯುತ್ತಾರೆ.ಇಂದು ಹೋಮ ಹವನ ವಿಶೇಷ ಪೂಜೆಗಳನ್ನು ಮಾಡಿ ದೇವಿಗೆ ವಿಶೇಷ ಹೂವಿನ ಅಲಂಕಾರವನ್ನು ಮಾಡಿದ್ದರು. ಈ ಕಾರ್ಯಕ್ರಮದಲ್ಲಿ ಡಿ ಬಿ ಮಲ್ಲೂರ್. ಎಸ್ಎಂ ರಾಹುತನ್ನವರ. ಸದೆಪ್ಪ ವಾರಿ. ಚಂದ್ರನಾಯಕ ರಾಯನಾಯ್ಕರ.ರಾವಜೀ ನಲವಡೆ. ಶಿವಾನಂದ ಗಾಯಕವಾಡ. ನಾರಾಯಣ ನಲವಡೆ. ಬಿಎಸ್ ಮಲ್ಲುರ. ಸಿರಾಜ ಮಿರ್ಜನ್ನವರ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕರಾಡೆ ಬಂಧುಗಳು ಹಾಗೂ ಇಂಚಲ ಗ್ರಾಮದ ಗುರು ಹಿರಿಯರು ಹಾಗೂ ಮರಾಠ ಗಲ್ಲಿಯ ಸದ್ಭಕ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ವರದಿ : ದುಂಡಪ್ಪ ಹೂಲಿ




