ಗೋಕಾಕ : ಸಂಸ್ಕಾರವಂತ ಮಕ್ಕಳಿದ್ದರೆ ಎನನ್ನು ಹೇಳೊಕೆ ಆಗೊದಿಲ್ಲ.ಆದರೆ ಸಂಸ್ಕಾರ ಕಡಿಮೆ ಇರುವ ಮಕ್ಕಳಿಂದ ಇವತ್ತಿನ ಕಾಲದಲ್ಲಿ ಅಪರಾದ ಕೃತ್ಯಗಳು ಆಗುತ್ತಲಿವೆಂದು ಗೋಕಾಕ ತಹಸಿಲ್ದಾರ ಡಾ: ಮೊಹನ ಬಸ್ಮೆ ಇವರು ಕೊಣ್ಣೂರಲ್ಲಿರುವ ಶ್ರೀ ಆಚಾರ್ಯ ಶಾಂತಿಸಾಗರ ತಪೋವನ ಶಿಕ್ಷಣ ಸಂಸ್ಥೆಯ ಶಾಲೆಯಲ್ಲಿ ನಡೆದ ಪಾಲಕರ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ.
ಸಂಸ್ಕಾರ ಯಾವ ಜಾತಿ ಧರ್ಮದಲ್ಲಿ ಇರೊದಿಲ್ಲ ನಾವು ಬೆಳೆಸುವ ರೀತಿಯಲ್ಲಿ ಇರುತ್ತದೆ.
ಶಾಂತಿಸಾಗರ ಶಾಲೆಯಲ್ಲಿ ಸಂಸ್ಕಾರ ಇದೆ.ಇಲ್ಲಿನ ಶಿಕ್ಷಕಿಯರು ಹೃದಯ ಶ್ರೀಮಂತಿಕೆ ಇದ್ದವರು ಇದ್ದಾರೆ, ಇಲ್ಲಿ ಕಲಿತವರು ಮುಂದಿನ ದಿನಮಾನದಲ್ಲಿ ಒಳ್ಳೆಯ ಅಧಿಕಾರಿಗಳಾಗುತ್ತಾರೆ ಎಂದು ಪಾಲಕರಲ್ಲಿ ಹಮ್ಮಸ್ಸು ಮೂಡಿಸಿದರು.
ಶಾಲೆಯಲ್ಲಿ ಯಾವುದೆ ತಪ್ಪು ಇದ್ದಲ್ಲಿ ತಿದ್ದಿ ಹೇಳುವ ಸಾಮರ್ಥ್ಯ ಶಿಕ್ಷಕರಿಗೆ ಮಾತ್ರ ಇರುತ್ತದೆ.
ನಮ್ಮ ಮಕ್ಕಳು ಒಳ್ಳೆಯ ಪ್ರಜೆ ಆಗಬೇಕೆನ್ನುವ ಪಾಲಕರು ತಿದ್ದಿ ಹೇಳುವ ಶಿಕ್ಷಕರನ್ನು ಪ್ರಶ್ನಿಸುವುದಿಲ್ಲ, ಯಾರ ಜೀವನ ಎಲ್ಲಿಗೆ ಹೊಗುತ್ತದೆಯೋ,
ಯಾರಿಗೂ ಗೊತ್ತಿಲ್ಲ ಅದಕ್ಕಾಗಿ ಶಿಕ್ಷಕರು ವಿದ್ಯಾರ್ಥಿಗಳಿಗೆ ತಿದ್ದಿ ಕಲಿಸುತ್ತಾರೆಂದರು.
ಇನ್ನು ತಹಸಿಲ್ದಾರ ಡಾ: ಮೊಹನ ಬಸ್ಮೆ ಇವರು ತಮ್ಮ ಕಥೆಯ ಹೇಳುವ ಮೂಲಕ ಪಾಲಕರಿಗೆ ತಮ್ಮ ಮಕ್ಕಳ ಭವಿಷ್ಯ ರೂಪಿಸುವ ಆತ್ಮಶೈರ್ಯ ತುಂಬಿದರು. ಶಾಂತಿಸಾಗರ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶಿಕ್ಷಕರ ಜೊತೆ ಸಂಸ್ಕಾರ ಇದೆ.
ನಿಮ್ಮ ಮಕ್ಕಳನ್ನು ಉತ್ತಮ ಪ್ರಜೆ,ನಾಗರಿಕರನ್ನಾಗಿ ಮಾಡುವಂತ ಈ ಶಿಕ್ಷಣ ಸಂಸ್ಥೆ ಹೊಂದಿದೆ ಎಂದರು.
ಇನ್ನು ಶಾಲಾ ಅದ್ಯಕ್ಷ ಜಿನ್ನಪ್ಪ ಚೌಗಲಾ ಇವರು ವಿನಾಕಾರಣ ಪಾಲಕರಿಗೆ ಮಕ್ಕಳನ್ನು ತಪ್ಪದೆ ಶಾಲೆಗೆ ಕಳುಹಿಸಲು ಮತ್ತು ಪಾಲಕರು ತಮ್ಮ ಮಕ್ಕಳನ್ನು ದುಷ್ಟರ ಸಂಘದಿಂದ ದೂರವಿಡಲು ತಿಳಿಸಿ ಮಕ್ಕಳ ಭವಿಷ್ಯಕ್ಕಾಗಿ ಹೊಸ ಆಲೋಚನೆ ಇದ್ದರೆ ತಿಳಿಸಲು ಪಾಲಕರಲ್ಲಿ ಕೇಳಿದರು.
ಇದೆ ಸಂದರ್ಭದಲ್ಲಿ ಪಾಲಕರು ಶಾಂತಿಸಾಗರ ಶಿಕ್ಷಣ ಸಂಸ್ಥೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವಾಗ ಆಡಳಿತ ಮಂಡಳಿಯವರು 9 ಮತ್ತು 10 ನೆ ತರಗತಿ ಪ್ರಾರಂಭಿಸಲು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಅದ್ಯಕ್ಷರು ಪಾಲಕರ ಸಹಕಾರ ಇದ್ದರೆ ವಿದ್ಯಾರ್ಥಿಗಳು ಇದೆ ಶಾಲೆಯಲ್ಲಿ ತಮ್ಮ ಕಲಿಕೆಯನ್ನು ಮುಂದುವರೆಸಲು ಇಚ್ಚಿಸಿದ್ದರೆ ನಾವು ಹೆಚ್ಚಿನ ತರಗತಿ ಪ್ರಾರಂಬಿಸುತ್ತೇವೆಂದು ಭರವಸೆ ನೀಡಿದರು.ಶಾಲೆಯ ಮುಖ್ಯ ಶಿಕ್ಷಕಿ ಸುಧಾ ಶ್ರೀನಿವಾಸ ಕೊಟೆಪೂಜೇರಿ ಇವರು ಸ್ವಾಗತಿಸಿ ವಂದಿಸಿ ನಿರೂಪಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಕಾರ್ಯದರ್ಶಿ ಮಹಾವೀರ ಬೂದಿಗೊಪ್ಪ, ಸದಸ್ಯರಾದ ಅರುಣ ಹೋಳಿ,ಸಿದ್ದಪ್ಪಾ ಬೊರಗಲ್ಲೆ ,ಸಚಿನ ಸಮಯ, ಮಹಾವೀರ ಪಾಟೀಲ ಸರ್ವ ಶಿಕ್ಷಕಿಯರು, ಭೊದಕೇತರರು ,ಪಾಲಕರು ಉಪಸ್ಥಿತರಿದ್ದರು.
ವರದಿ : ಮನೋಹರ ಮೇಗೇರಿ




