Ad imageAd image

ಬೆಳಗಾವಿ – ವಿಜಯಪುರ ಬಸ್‌ಗೆ ಪೂಜೆ ಮಾಡಿದ ಐನಾಪುರ ಗ್ರಾಮಸ್ಥರು

Bharath Vaibhav
ಬೆಳಗಾವಿ – ವಿಜಯಪುರ ಬಸ್‌ಗೆ ಪೂಜೆ ಮಾಡಿದ ಐನಾಪುರ ಗ್ರಾಮಸ್ಥರು
WhatsApp Group Join Now
Telegram Group Join Now

ಐನಾಪುರ  : ಕಲ್ಯಾಣ ಕರ್ನಾಟಕ ಘಟಕದಿಂದ ಬೆಳಗಾವಿಯಿಂದ ವಿಜಾಪುರಕ್ಕೆ ಬಸ್ ಬಿಟ್ಟ ಹಿನ್ನಲೆ ಬಸ್‌ಗೆ ಪೂಜೆ ಮಾಡಿದ ಐನಾಪುರ ಗ್ರಾಮಸ್ಥರು ನೂತನ ಬಸ್ಸನು ಪ್ರಾರಂಭಿಸಲು ಸೂಚಿಸಿದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಅರುಣಕುಮಾರ ಪಾಟೀಲ ಅಪ್ಜಲಪುರ ಅವರಿಗೆ ಐನಾಪುರ ಪಟ್ಟಣ ಮತ್ತು ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ಧನ್ಯವಾದ ತಿಳಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪುರ ಗ್ರಾಮದಲ್ಲಿ ಬೆಳಗಾವಿಗೆ ಬಸ್ ಬಿಟ್ಟ ಹಿನ್ನಲೆ ಹಲವಾರು ಸಾರ್ವಜನಿಕರಿಗೆ ಅನುಕೂಲವಾಗಿದೆ. ವಿಜಯಪುರಯಿಂದ ತಿಕೋಟಾ,ತೆಲಸಂಗ,ಅಥಣಿ,ಐನಾಪುರ, ಉಗಾರ,ಶಿರಗುಪ್ಪಿ, ಚಿಕ್ಕೋಡಿ ಮೂಲಕ ಬೆಳಗಾವಿಗೆ ಬಸ್ ಪ್ರಯಾಣಿಸಲಿದೆ.

ವಿಜಾಪುರಯಿಂದ ಬೆಳಗಾವಿಗೆ ಬಸ್ ಬಿಟ್ಟ ಖುಷಿಗೆ ಬಸ್ ಪೂಜೆ ಮಾಡಿದ ಐನಾಪುರ ಗ್ರಾಮಸ್ಥರು ಬಸ್‌ಗೆ ಪೂಜೆ ಮಾಡಿ ಚಾಲಕ , ನಿರ್ವಾಹಕ ಕೆ.ಎ.ಹುಂಡಿ, ಎಂ.ಎಸ್ ವಾಲಿಕಾರ ಅವರಿಗೆ ಸತ್ಕಾರ ಮಾಡಿದರು.

ಇ ಸಂದರ್ಭದಲ್ಲಿ ಮುಖಂಡ ಉಮೇಶ ಕಾರ್ಚಿ,ರಾಮು ಹವಳಪಗೋಳ,ಚಮನರಾವ ಪಾಟೀಲ,ಮಹೇಶ ಸೊಲ್ಲಾಪುರ, ಸುಮೀತ ಕಾರ್ಚಿ,ಮಹಾಂತೇಶ ಹಿರೇಮಠ, ವಿನಾಯಕ ಕಮತೆ,ಕುಮಾರ ಗಾಣಿಗೇರ, ಸಂಜು ಕಟ್ಟಿ,ಶಿವಪ್ರಸಾದ ಕಾರ್ಚಿ,ಅಶೋಕ ಪೋತದಾರ,ವಿಶ್ವನಾಥ ನಾಮದಾರ, ಮಲಿಕಾರ್ಜುನ ಕೊಲ್ಲಾರ, ಭರತೇಶ ಪಾಟೀಲ ಸೇರಿದಂತೆ ಇತರರು ಇದ್ದರು.

ವರದಿ : ಮುರಗೇಶ ಗಸ್ತಿ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!