Ad imageAd image

ಈರುಳ್ಳಿ ತುಂಬಿದ್ದ ಲಾರಿ ಪಲ್ಟಿ : ಓರ್ವ ಸಾವು, ಇಬ್ಬರು ಗಂಭೀರ ಗಾಯ

Bharath Vaibhav
ಈರುಳ್ಳಿ ತುಂಬಿದ್ದ ಲಾರಿ ಪಲ್ಟಿ : ಓರ್ವ ಸಾವು, ಇಬ್ಬರು ಗಂಭೀರ ಗಾಯ
ACCIDENT
WhatsApp Group Join Now
Telegram Group Join Now

ಬೆಳಗಾವಿ: ಈರುಳ್ಳಿ ತುಂಬಿದ್ದ ಲಾರಿ ಪಲ್ಟಿಯಾಗಿ ಬಿದ್ದ ಪರಿಣಾಮ ಸ್ಥಳದಲ್ಲಿಯೇ ಓರ್ವ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿ ಘಾಟ್ ನಲ್ಲಿ ನಡೆದಿದೆ.

ಹಿರೇಬಾಗೇವಾಡಿ ಘಾಟ್ ನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಲಾರಿ ಪಲ್ಟಿಯಾಗಿ ಬಿದ್ದಿದ್ದು, ಓರ್ವ ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೃತನ ಗುರುತು ಪತ್ತೆಯಾಗಿಲ್ಲ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ನಸುಕಿನ ಜಾವ 1 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ.ಘಾಟ್ ನಲ್ಲಿ ಅದಾಗಲೇ ಮೂರು ಲಾರಿ ಗಳು ಪಲ್ಟಿಯಾಗಿ ಬಿದ್ದಿದ್ದವು. ವಾಹನ ಸಂಚಾರಕ್ಕೂ ಅಡ್ಡಿಯುಂತಾಗುತ್ತಿತ್ತು.

ಘಟನ ಸ್ಥಳಕ್ಕೆ ಆಗಮಿಸಿದ ಬೆಳಗಾವಿ ಪೊಲೀಸರು ವಾಹನಗಳನ್ನು ತೆರವುಗೊಳಿಸಿ, ರಾಷ್ಟ್ರೀಯ ಹೆದ್ದಾರಿ ಸಿಬ್ಬಂದಿಗಳ ಜೊತೆ ಸೇರಿ ರಸ್ತೆಯನ್ನು ಗುಡಿಸಿ, ಸಂಭವಿಸಲಿದ್ದ ಇನ್ನಷ್ಟು ಅಪಘಾತಗಳನ್ನು ತಡೆದಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!