ನಿಪ್ಪಾಣಿ : ತಾಲೂಕಿನ ಬೇಡಕಿಹಾಳ ಗ್ರಾಮದ ಎಸ್ ಟಿ ಕಾಲನಿಯಲ್ಲಿ ಸಿಸಿ ರಸ್ತೆ ಕಾಮಗಾರಿಗಾಗಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿಯವರ ವಿಶೇಷ ಪ್ರಯತ್ನದಿಂದ ಲೋಕೋಪಯೋಗಿ ಇಲಾಖೆಯಿಂದ 25 ಲಕ್ಷ ರೂಪಾಯಿ ಮಂಜೂರಾಗಿದ್ದು ಸಂಸದೆ ಪ್ರಿಯಾಂಕಾ ಜಾರಕಿಹೊಳಿಯವರ ಹಸ್ತದಿಂದ ಗುದ್ದಲಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೇ ಕೆಪಿಸಿಸಿ ಮಹಿಳಾ ಪ್ರಧಾನ ಕಾರ್ಯದರ್ಶಿ ಸುಪ್ರಿಯಾ ದತ್ತಕುಮಾರ ಪಾಟೀಲ ಮಾತನಾಡಿ *ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ಪ್ರಯತ್ನದಿಂದ ಮುಂಬರುವ ದಿನಗಳಲ್ಲಿ ನಿಪ್ಪಾಣಿ ಮತಕ್ಷೇತ್ರದ ಜನರ ಮೂಲಭೂತ ಸೌಕರ್ಯಕಲ್ಪಿಸಲು ತಾವು ಬದ್ಧರಾಗಿರುವುದಾಗಿ ತಿಳಿಸಿದರು. ಪ್ರಾರಂಭದಲ್ಲಿ ಗ್ರಾಮದ ಸಿದ್ದೇಶ್ವರ ಕೆರೆಯಿಂದ.
ಸಿದ್ದಾರ್ಥ ನಗರದವರೆಗೆ ವಿವಿಧ ವಾದ್ಯ ಗಳೊಂದಿಗೆ ಮೆರವಣಿಗೆ ಮುಖಾಂತರ ಪುಷ್ಪವೃಷ್ಟಿ ಮಾಡಿ ವೇದಿಕೆಗೆ ಪ್ರಿಯಾಂಕಾ ರವರನ್ನು ಬರಮಾಡಿಕೊಳ್ಳಲಾಯಿತು. ಸಮಾರಂಭದಲ್ಲಿ ಯುವ ನಾಯಕ ದತ್ತಕುಮಾರ ಪಾಟೀಲ, ಪಂಕಜ ಪಾಟೀಲ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ರೋಹನ ಸಾಳ್ವಿ ,ರಾಜೇಶ್ ಕದಂ, ಪ್ರಮೋದ್ ಪಾಟೀಲ್ ತಾಜುದ್ದೀನ್ ಮುಲ್ಲಾ ಅಶೋಕ ಅರಗೆ, ದನಪಾಲ್ ದೇಸಾಯಿ ಜೀವನ ಯಾದವ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವರದಿ : ಮಹಾವೀರ ಚಿಂಚಣೆ




