Ad imageAd image

ಬಾಗಲಕೋಟೆ ಉಪಚುನಾವಣೆ ಕಾವು : ಅಭ್ಯರ್ಥಿ ಘೋಷಣೆ ಮೊದಲೇ ನಾಮಪತ್ರ ಸಲ್ಲಿಕೆಗೆ ತಯಾರಿ

Bharath Vaibhav
ಬಾಗಲಕೋಟೆ ಉಪಚುನಾವಣೆ ಕಾವು : ಅಭ್ಯರ್ಥಿ ಘೋಷಣೆ ಮೊದಲೇ ನಾಮಪತ್ರ ಸಲ್ಲಿಕೆಗೆ ತಯಾರಿ
WhatsApp Group Join Now
Telegram Group Join Now

ಬಾಗಲಕೋಟೆ : ಹೆಚ್.ವೈ. ಮೇಟಿ ನಿಧನದ ಕಾರಣ ಬಾಗಲಕೋಟೆ ಕ್ಷೇತ್ರದ ಉಪ ಚುನಾವಣೆ ಎದುರಾಗಿದೆ. ಮಾರ್ಚ್ 23 ನಾಮಪತ್ರ ಸಲ್ಲಿಕೆ ಮಾಡಲು ಕೊನೆಯ ದಿನ. ಏಪ್ರಿಲ್ 9ರಂದು ಮತದಾನ ನಡೆಯಲಿದ್ದು, ಮೇ 4ರಂದು ಫಲಿತಾಂಶ ಘೋಷಣೆಯಾಗಲಿದೆ.

ಬಾಗಲಕೋಟೆ ಕ್ಷೇತ್ರಕ್ಕೆ ಕಾಂಗ್ರೆಸ್, ಬಿಜೆಪಿ ಇನ್ನೂ ಅಭ್ಯರ್ಥಿ ಘೋಷಣೆ ಮಾಡಿಲ್ಲ.ಕಾಂಗ್ರೆಸ್ ಹೆಚ್.ವೈ. ಮೇಟಿ ಕುಟುಂಬ ಸದಸ್ಯರಿಗೆ ಟಿಕೆಟ್ ನೀಡುವು ಚಿಂತನೆಯಲ್ಲಿದೆ. ಆದರೆ ಟಿಕೆಟ್‌ಗಾಗಿ ಕುಟುಂಬದಲ್ಲೇ ಪೈಪೋಟಿ ನಡೆಸಿದೆ.

ಮೇಟಿ ಹಿರಿಯ ಪುತ್ರ ಮಲ್ಲಿಕಾರ್ಜುನ ಮೇಟಿಗೆ ಕಾಂಗ್ರೆಸ್​ ಟಿಕೆಟ್ ನೀಡುವ ಕುರಿತು ಚರ್ಚೆಗಳು ನಡೆಯುತ್ತಿದ್ದವು. ಆದರೆ, ಹೆಚ್‌.ವೈ.ಮೇಟಿ ಪುತ್ರಿ ಮಹಾದೇವಿ ಹುಲ್ಲಪ್ಪ ಮೇಟಿ ಶುಕ್ರವಾರ ನಾಮಪತ್ರ ಸಲ್ಲಿಕೆ ಮಾಡುತ್ತೇನೆ ಎಂದು ಘೋಷಣೆ ಮಾಡಿದ್ದಾರೆ.ಜನವರಿಯಲ್ಲಿಯೇ ಅವರು ರಾಜಕೀಯಕ್ಕೆ ಬರುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ಗಳನ್ನು ಹಾಕುತ್ತಿದ್ದರು.

ಈಗ ಮಾರ್ಚ್ 20ರ ಶುಕ್ರವಾರ ನಾಮಪತ್ರ ಸಲ್ಲಿಕೆ ಮಾಡುತ್ತೇನೆ ಎಂದು ಘೋಷಣೆ ಮಾಡುವ ಮೂಲಕ ಕ್ಷೇತ್ರದ ಉಪ ಚುನಾವಣೆ ಕಣದ ಕುರಿತು ಕುತೂಹಲ ಮೂಡಿಸಿದ್ದಾರೆ.

ಶನಿವಾರ ಬಾಗಲಕೋಟೆಯಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, “ಬಾಗಲಕೋಟೆ ಮತ್ತು ದಾವಣಗೆರೆ ಉಪಚುನಾವಣೆ ಅಭ್ಯರ್ಥಿಗಳ ಆಯ್ಕೆಯನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಹೆಚ್.ವೈ.ಮೇಟಿ ಕುಟುಂಬದವರೂ ಒಬ್ಬ ಟಿಕೇಟ್ ಆಕಾಂಕ್ಷಿಯಾಗಿದ್ದಾರೆ. ಯಾರಾದರೂ ಆಕಾಂಕ್ಷಿಯಾಗಬಹುದು.

ಒಂದೇ ಕುಟುಂಬದಿಂದ ಎಷ್ಟು ಜನ ಕೇಳಿದರೂ ಒಬ್ಬರಿಗೆ ಹೈಕಮಾಂಡ್ ಟಿಕೆಟ್ ನೀಡುವುದು. ಉಪಚುನಾವಣೆಗೆ ಎಲ್ಲಾ ತಯಾರಿ ನಡೆದಿದ್ದು, ನಾವು ಅದಕ್ಕೆ ಸಿದ್ಧರಿದ್ದೇವೆ” ಎಂದು ಹೇಳಿದ್ದರು.

ಮಹಾದೇವಿ ಮೇಟಿ ನಾಮಪತ್ರ: ಮಹಾದೇವಿ ಹುಲ್ಲಪ್ಪ ಮೇಟಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, ‘ಬಾಗಲಕೋಟೆಯ ಜನಶಕ್ತಿ-ಮಹಾದೇವಿ ಮೇಟಿ ಅವರ ನಾಮಪತ್ರ ಸಲ್ಲಿಕೆ’ ಎಂದು ಹೇಳಿದ್ದಾರೆ.

‘ಶುಕ್ರವಾರ, ದಿನಾಂಕ 20 ಮಾರ್ಚ್ 2026 ರಂದು ಶ್ರೀಮತಿ ಮಹಾದೇವಿ ಮೇಟಿ ಅವರು ತಮ್ಮ ಅಪಾರ ಬೆಂಬಲಿಗರು ಮತ್ತು ಕಾರ್ಯಕರ್ತರೊಂದಿಗೆ ಬಾಗಲಕೋಟೆ ಉಪಚುನಾವಣೆಯಲ್ಲಿ ಸ್ಪರ್ಧಿಸಲು ತಮ್ಮ ನಾಮಪತ್ರವನ್ನು ಸಲ್ಲಿಸಲಿದ್ದಾರೆ’ ಎಂದು ಮಾಹಿತಿ ನೀಡಲಾಗಿದೆ.

‘ಜನರ ಆಶೀರ್ವಾದ, ಬೆಂಬಲ ಮತ್ತು ವಿಶ್ವಾಸದೊಂದಿಗೆ ಬಾಗಲಕೋಟೆಯ ಅಭಿವೃದ್ಧಿಯ ಹೊಸ ಅಧ್ಯಾಯ ಆರಂಭವಾಗಲಿದೆ ಎಂಬ ನಂಬಿಕೆ ನಮಗಿದೆ. ನಿಮ್ಮ ಆಶೀರ್ವಾದ ಮತ್ತು ಬೆಂಬಲವೇ ನಮ್ಮ ಶಕ್ತಿ’ ಎಂದು ತಿಳಿಸಿದ್ದಾರೆ.

ಮಹಾದೇವಿ ಮೇಟಿ ಅವರಿಗೆ ಯಾವ ಪಕ್ಷವೂ ಟಿಕೆಟ್ ಘೋಷಣೆ ಮಾಡಿಲ್ಲ. ಅವರು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಹಾಗಾದರೆ ಕಾಂಗ್ರೆಸ್ ಯಾರಿಗೆ ಟಿಕೆಟ್ ನೀಡಲಿದೆ?

ಹೆಚ್.ವೈ.ಮೇಟಿ ಕುಟುಂಬದಲ್ಲಿ ನಡೆಯುತ್ತಿರುವ ಟಿಕೆಟ್ ಪೈಪೋಟಿ ವಿರೋಧ ಪಕ್ಷವಾದ ಬಿಜೆಪಿಗೆ ಲಾಭವಾಗಲಿದೆಯೇ? ಎಂಬ ಚರ್ಚೆಗಳು ನಡೆಯುತ್ತಿವೆ. ನಾಮಪತ್ರ ಸಲ್ಲಿಕೆಗೆ ಮಾರ್ಚ್ 23 ಕೊನೆಯ ದಿನ, ಮಾರ್ಚ್ 24ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ನಾಮಪತ್ರ ವಾಪಸ್ ಪಡೆಯಲು ಮಾರ್ಚ್ 26 ಕೊನೆ ದಿನವಾಗಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!