ರಾಯಚೂರು : ಪಶ್ಚಿಮ ಪೊಲೀಸ್ ಠಾಣಾ ವ್ಯಾಪ್ತಿಯ ರೈಲ್ವೆ ನಿಲ್ದಾಣದ ಹತ್ತಿರ ರೈಲ್ವೇ ಗಾರ್ಡನ್ ಮುಂದೆ ಸಾರ್ವಜನಿಕ ರಸ್ತೆಯಲ್ಲಿ ಒಬ್ಬ ವ್ಯಕ್ತಿಯು ಮಾನವ ಸೇವನೆ ಯೋಗ್ಯವಲ್ಲದ ಮಾನವ ಜೀವಕ್ಕೆ ಅಪಾಯಕಾರಿಯಾದ ವಿಷಪೂರಿತ ಸಿ.ಎಚ್. ಪೌಡರ್ ಮಿಶ್ರಿತ ಕಲಬೆರಿಕೆ ಹೆಂಡವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾರೆ.
ಅಂತಾ ಬಾತ್ಮಿ ಬಂದ ಮೇರೆಗೆ ಸದರಿಯವರ ಮೇಲೆ ದಾಳಿಜರುಗಿಸಿ ಕಾನೂನು ಕ್ರಮ ಜರುಗಿಸುವ ಕುರಿತು ಪಂಚರಾದ 1) ವಂಶಿ ಹಾಗೂ 2] ಮಹ್ಮದ್ ಹಾಜಿ ಸಿಬ್ಬಂದಿಯವರಾದ ಚಂದ್ರಶೇಖರ್ ಸಿಪಿಸಿ 200, ಸುಖಮುನಿಯಪ್ಪ ಸಿಪಿಸಿ 168, ಫರ್ಹಾನ್ ಸಿಪಿಸಿ 571 ಮಂಜುನಾಥ ಸಿಪಿಸಿ 428 ರವರೊಂದಿಗೆ 17.00 ಗಂಟೆಗೆ ಠಾಣೆಯಿಂದ ಹೊರಟು ಘಟನಾ ಸ್ಥಳಕ್ಕೆ 17.10 ಗಂಟೆಗೆ ಹೋಗಿ 17.15 ಗಂಟೆಯಿಂದಾ 18.15 ಗಂಟೆಯ ವರೆಗೆ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನ ವಶದಲ್ಲಿದ್ದ 63 ಲೀಟರ್ ಕಲಬೇರಿಕೆ ಸೇಂಧಿ ಲೀಟರಿಗೆ 30 ರೂಪಾಯಿಯಂತೆ ಅಕಿ.ರೂ, 1890/- ಬೆಲೆ ಬಾಳುವ 63 ಸೇಂಧಿ ಮತ್ತು ಸೇಂಧಿ ಮಾರಾಟದಿಂದ ಬಂದ ನಗದು ಹಣ ರೂ. 150/- ಗಳನ್ನು ದಾಳಿಯಲ್ಲಿ ಜಪ್ತಿ ಪಡಿಸಿಕೊಂಡು 18.45 ಗಂಟೆಗೆ ಮುಂದಿನ ಕ್ರಮ ಜರುಗಿಸುವ ಕುರಿತು ದೂರನ್ನು ನೀಡಿದ್ದು ಇರುತ್ತದೆ, ಅಂತಾ ಮುಂತಾಗಿ ಇರುವ ದೂರಿನ ಸಾರಾಂಶದ ಮೇಲಿಂದ ಠಾಣಾ ಅಪರಾಧ 0:34/2026 00.275. 286, 123 BNS-2023 ತನಿಖೆ ಕೈಕೊಂಡಿದ್ದು ಇರುತ್ತದೆ. 32, 34 ಕೆ ಇ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ವರದಿ : ಗಾರಲದಿನ್ನಿ ವೀರನಗೌಡ




