Ad imageAd image

ಆಸ್ತಿ ಬರೆದುಕೊಡಲು ನಿರಾಕರಿಸಿದ್ದಕ್ಕೆ ಪ್ರಿಯತಮೆಯ ಬರ್ಬರ ಹತ್ಯೆ : ಆರೋಪಿ ಅರೆಸ್ಟ್ 

Bharath Vaibhav
ಆಸ್ತಿ ಬರೆದುಕೊಡಲು ನಿರಾಕರಿಸಿದ್ದಕ್ಕೆ ಪ್ರಿಯತಮೆಯ ಬರ್ಬರ ಹತ್ಯೆ : ಆರೋಪಿ ಅರೆಸ್ಟ್ 
WhatsApp Group Join Now
Telegram Group Join Now

ಬೆಳಗಾವಿ: ಮದುವೆಯಾಗುವುದಾಗಿ ನಂಬಿಸಿ, ಆಸ್ತಿ ಬರೆದುಕೊಡಲು ನಿರಾಕರಿಸಿದ ಕಾರಣಕ್ಕೆ ಪ್ರಿಯತಮೆಯನ್ನೇ ಕತ್ತು ಬಿಗಿದು ಕೊಲೆ ಮಾಡಿದ್ದ ಆರೋಪಿಯನ್ನು ಅಥಣಿ ಪೊಲೀಸರು ಆಂಧ್ರಪ್ರದೇಶದ ಶ್ರೀಶೈಲದಲ್ಲಿ ಸಿನಿಮೀಯ ರೀತಿಯಲ್ಲಿ ಬಂಧಿಸಿದ್ದಾರೆ.

ಘಟನೆಯ ಹಿನ್ನೆಲೆ:

ಬಂಧಿತ ಆರೋಪಿಯನ್ನು ಅಥಣಿಯ ನಿವಾಸಿ ಕುಮಾರ್ ಕಲ್ಲಪ್ಪ ಹವಾಲ್ದಾರ್ ಎಂದು ಗುರುತಿಸಲಾಗಿದೆ.

ಅಥಣಿಯಲ್ಲೇ ವಾಸವಾಗಿದ್ದ ಸುಜಾತಾ (34) ಕೊಲೆಯಾದ ದುರ್ದೈವಿ. ಆರು ವರ್ಷಗಳ ಹಿಂದೆ ಗಂಡನನ್ನು ಬಿಟ್ಟು ಬಂದಿದ್ದ ಸುಜಾತಾ, ಕಳೆದ ಐದಾರು ವರ್ಷಗಳಿಂದ ಆರೋಪಿ ಕುಮಾರ್ ಜೊತೆ ಲಿವಿಂಗ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದರು.

ಕೊಲೆಗೆ ಕಾರಣವೇನು?

ಬೆಳಗಾವಿ ಎಸ್ಪಿ ರಾಮರಾಜನ್ ಅವರು ನೀಡಿರುವ ಮಾಹಿತಿಯ ಪ್ರಕಾರ:

ಆಸ್ತಿ ವ್ಯಾಮೋಹ: ಸುಜಾತಾ ಹೆಸರಿನಲ್ಲಿದ್ದ ಮನೆ ಮತ್ತು ಜಮೀನನ್ನು ತನ್ನ ಹೆಸರಿಗೆ ಬರೆದುಕೊಡುವಂತೆ ಕುಮಾರ್ ಪೀಡಿಸುತ್ತಿದ್ದ.

ಷರತ್ತು: “ಮದುವೆಯಾದ ಬಳಿಕವಷ್ಟೇ ಆಸ್ತಿ ಬರೆಯುತ್ತೇನೆ” ಎಂದು ಸುಜಾತಾ ತಿಳಿಸಿದ್ದರು. ಇದರಿಂದ ಆಕೆ ತನಗೆ ಮೋಸ ಮಾಡುತ್ತಿದ್ದಾಳೆ ಎಂದು ಅನುಮಾನಗೊಂಡ ಆರೋಪಿ ಅವಳನ್ನು ಮುಗಿಸಲು ಸಂಚು ರೂಪಿಸಿದ್ದ.

ಸಿನಿಮೀಯ ಮಾದರಿಯಲ್ಲಿ ಕೊಲೆ ಮತ್ತು ಪರಾರಿ:

ಮಾರ್ಚ್ 12ರಂದು ಕಿರಾಣಿ ಅಂಗಡಿಗೆ ಹೋಗೋಣ ಎಂದು ನಂಬಿಸಿ ಶಿನಾಳ ಗ್ರಾಮದ ತನ್ನ ಪೋಷಕರ ಕಬ್ಬಿನ ತೋಟಕ್ಕೆ ಸುಜಾತಾಳನ್ನು ಕುಮಾರ್ ಕರೆದೊಯ್ದಿದ್ದ. ಅಲ್ಲಿ ಆಕೆಯ ಚೂಡಿದಾರದ ಶಾಲಿನಿಂದಲೇ ಕತ್ತು ಬಿಗಿದು ಕೊಲೆ ಮಾಡಿ ಮೃತದೇಹವನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದ.

ಶ್ರೀಶೈಲದಲ್ಲಿ ಸಿಕ್ಕಿಬಿದ್ದ ಆರೋಪಿ:

ಕೊಲೆ ಮಾಡಿದ ಬಳಿಕ ಪೊಲೀಸರಿಗೆ ದಾರಿ ತಪ್ಪಿಸಲು ದೇವಸ್ಥಾನದ ದರ್ಶನದ ನೆಪದಲ್ಲಿ ಆಂಧ್ರಪ್ರದೇಶದ ಶ್ರೀಶೈಲಕ್ಕೆ ಪರಾರಿಯಾಗಿದ್ದ. ಅಥಣಿ ಡಿವೈಎಸ್ಪಿ, ಸಿಪಿಐ ಸಂತೋಷ್ ಮತ್ತು ಪಿಎಸ್‌ಐ ಗಿರಿಮಲ್ಲಪ್ಪ ನೇತೃತ್ವದ ತಂಡ ತಾಂತ್ರಿಕ ಕಾರ್ಯಾಚರಣೆ ನಡೆಸಿ ಶ್ರೀಶೈಲದಲ್ಲಿಯೇ ಆರೋಪಿಯನ್ನು ಹೆಡೆಮುರಿ ಕಟ್ಟಿದೆ.

 

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!