ಹುಬ್ಬಳ್ಳಿ : ಗ್ರಾಮೀಣ ಕ್ರೀಡೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಶ್ರೀ ಲಕ್ಷ್ಮೀದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ರಾಜ್ಯಮಟ್ಟದ ಜಂಗೀ ನಿಕಾಲಿ ಕುಸ್ತಿ ಹಾಗೂ ಖಾಲಿ ಗಾಡಾ ಓಡಿಸುವ ಸ್ಪರ್ಧೆಯನ್ನು ಮಾ.೨೦, ೨೨ರಂದು ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಗ್ರಾಮದಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷ ಹಾಗೂ ಮಾಜಿ ಪೈಲವಾನ್ ಶಿವಾನಂದ ಕರಿಗಾರ ತಿಳಿಸಿದರು.
ನಗರದಲ್ಲಿ ಮಾತನಾಡಿದ ಅವರು, ಶ್ರೀ ಲಕ್ಷ್ಮೀದೇವಿ ಜಾತ್ರಾಮಹೋತ್ಸವ ಹಿನ್ನೆಲೆ ಮಾ. ೨೦ರಂದು ಜಂಗೀ ನಿಕಾಲಿ ಕುಸ್ತಿಯನ್ನು ಅಂದು ಮಧ್ಯಾಹ್ನ ೩ ಗಂಟೆಗೆ ಆಯೋಜಿಸಲಾಗಿದ್ದು, ರಾಜ್ಯದ ವಿವಿಧೆಡೆಯಿಂದ ೩೧ ಜೋಡಿ ಪೈಲವಾನರು ಪಾಲ್ಗೊಳ್ಳಲಿದ್ದು, ವಿಜೇತರಿಗೆ ಬಹುಮಾನ ವಿತರಿಸಲಾಗುವುದು. ಜೊತೆಗೆ ಮಾಜಿ ಪೈಲವಾನರಿಗೆ ಸನ್ಮಾನ ಮಾಡಲಾಗುವುದು ಎಂದರು.
ಖಾಲಿಗಾಡಾ ಓಡಿಸುವ ಸ್ಪರ್ಧೆಯನ್ನು ಮಾ. ೨೨ರಂದು ಆಯೋಜಿಸಿದ್ದು, ಒಂದು ನಿಮಿಷದ ಅವಧಿ ಇರಲಿದೆ. ಪ್ರಥಮ ಬಹುಮಾನ ೭೧,೦೦೦, ದ್ವಿತೀಯ ಬಹುಮಾನ ೫೦,೦೦೦, ತೃತೀಯ ಬಹುಮಾನ ೪೦,೦೦೦, ನಾಲ್ಕನೇ ಬಹುಮಾನ ೨೫,೦೦೦ ಹೀಗೆ ಪ್ರಶಸ್ತಿ ವಿಜೇತರಿಗೆ ಬಹುಮಾನ ವಿತರಿಸಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಶೋಕ ಚಿಲ್ಲಣ್ಣವರ, ಸಿದ್ದು ಮಲ್ಲಾಡಿ, ರುದ್ರಪ್ಪ ಕುಂಬಾರ, ಮಂಜುನಾಥ ಮಲ್ಲಾರಿ, ಬಸವರಾಜ ಕುರುಬರ, ವಿಶ್ವನಾಥ ಕರಿಗಾರ ಇತರರಿದ್ದರು.
ವರದಿ : ಸುಧೀರ್ ಕುಲಕರಣಿ




