ನಾಗ್ ಮೋಹನ್ ದಾಸ್ ವರದಿ ವಿರುದ್ಧ ಬೃಹತ್ ಪ್ರತಿಭಟನೆ
ಒಳ ಮೀಸಲಾತಿ ರೋಸ್ಟರ್ ಹಂಚಿಕೆ ವಿರೋಧಿಸಿ ಪ್ರತಿಭಟನೆ
ಹಳೆಯ ಮೀಸಲಾತಿ ನಿಯಮದಂತೆ ತ್ವರಿತ ನೇಮಕಾತಿ ನಡೆಸಲು ಒತ್ತಾಯಿಸಿ ಪ್ರತಿಭಟನೆ
ಭಾಲ್ಕಿ : ಬೀದರ್ ಜಿಲ್ಲೆಯ ಭಾಲ್ಕಿ ನಗರದ ಪಾಪವ್ವ ಚೌಕ್ ದಿಂದ ಪ್ರಾರಂಭವಾದ ಪ್ರತಿಭಟನೆ ಹೋರಾಟ ಮೆರವಣಿಗೆ ಮಹಾತ್ಮಾ ಗಾಂಧಿ ವೃತದಿಂದ ಸಾಗಿ ಅಂಬೇಡ್ಕರ್ ವೃತ್ತದ ಮೂಲಕ ತಹಸೀಲ ಕಛೇರಿ ವರೆಗೆ ಪಾದ ಯಾತ್ರೆ ಮುಖಾಂತರ ಪ್ರತಿಭಟನೆ ನಡೆಯಿತು.
ಬಂಜಾರ, ಭೋವಿ, ಕೊರಮ, ಕೊರಚ, ಛಲವಾದಿ, ಚರ್ಮಕಾರ, ಸೂಕ್ಷ್ಮ ಜಾತಿಗಳ ಪ್ರತಿಭಟನೆ.
ಈ ಹಿಂದುಳಿದ ಹೆಚ್ಚು ಅನಕ್ಷರಸ್ತ ಇರುವ ಸಮಾಜದವರು ಮುಕ್ದ ಜನರು ತಮ್ಮ ಹೊಟ್ಟೆ ಪಾಡಿಗೆ ಹಗಲು ಇರಳು ದುಡಿದು ಕುಲಿ ಮಾಡಿ ತಮ್ಮ ಹೊಟ್ಟೆ ತುಂಬಿಸಿ ಕೊಳ್ಳುತ್ತಿದ್ದಾರೆ ಇವರಿಗೆ ಜಾತಿ ಹಾಗೂ ಅದರ ಸೌಲತ್ತುಗಳ ಬಗ್ಗೆ ಇನ್ನು ಏನೂ ಗೊತ್ತಿಲ್ಲ.
ರೋಸ್ಟರ್ ಪದ್ಧತಿ ಯಿಂದ ಉನ್ನತ ಶಿಕ್ಷಣ ಸಿಗ್ತಾ ಇಲ್ಲಾ ಸರಕಾರದ ಯಾವುದೇ ಸವಲತ್ತು ಸಿಗೋದಿಲ್ಲ ಇವರಿಗೆ ಸಿಟಿ ಅಂದ್ರೆ ಗೊತ್ತಿಲ್ಲಾ ಕಾನೂನು ಏನು ಅಂತ ಗೊತ್ತಿಲ್ಲಾ ನಮಗೆ ಮಲತಾಯಿ ಧೋರಣೆ ತೋರತಾ ಇದ್ದಾರೆ.
ಹೀಗಾಗಿ ಹಳೆಯ ಪದ್ಧತಿ ಯನ್ನೇ ಜಾರಿಗೆ ಮಾಡಬೇಕು ಎಂದು ತಮ್ಮ ಆಕ್ರೋಶ ವನ್ನು ಹೊರ ಹಾಕಿದ್ದರು.
ಹಳೆ ನೀತಿ ಜಾರಿಗೆ ಗೊಳಿಸಿ ಎಂದು ತಹಸೀಲ್ದಾರ್ ಮುಖಾಂತರ ಮಾನ್ಯ ಮುಖ್ಯ ಮಂತ್ರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಎಂ ಪಿ ರಾಠೋಡ, ಸುರೇಶ ಹುಬ್ಳಿಕರ್ ಸಂಜೀವ ಶಿಂದೆ, ರಾಜಕುಮಾರ್ ಶಿಂದೆ, ನಾಮದೇವ ರಾಠೋಡ್, ವೆಂಕಟ ಶಿಂದೆ, ದತ್ತು ಪವಾರ,ಚಂದು ಸಂಪಗೆ,ಕೊರವ, ಕೊಂಚ, ಚಮ್ಮರ, ಭೋವಿ, ಚರ್ಮಾಕರ, ದೊಂಬರೇ ಸಮಾಜದ ಬಾಂಧವರು ಈ ಹೋರಾಟದಲ್ಲಿ ಭಾಗವಹಿಸಿದರು.
ವರದಿ : ಸಂತೋಷ ಬಿಜಿ ಪಾಟೀಲ




