Ad imageAd image

ಶಿವಶಕ್ತಿ ಕಲ್ಲು ಗಣಿಗಾರಿಕೆ ಅನುಮತಿ ರದ್ದು ಪಡಿಸಬೇಕು ಎಂದು ನೇರ್ಲಹಳ್ಳಿ ಗ್ರಾಮಸ್ಥರಿಂದ ಮನವಿ

Bharath Vaibhav
ಶಿವಶಕ್ತಿ ಕಲ್ಲು ಗಣಿಗಾರಿಕೆ ಅನುಮತಿ ರದ್ದು ಪಡಿಸಬೇಕು ಎಂದು ನೇರ್ಲಹಳ್ಳಿ  ಗ್ರಾಮಸ್ಥರಿಂದ  ಮನವಿ
WhatsApp Group Join Now
Telegram Group Join Now

ಮೊಳಕಾಲ್ಮೂರು : ರೈತರೇ ಈ ದೇಶದ ಬೆನ್ನೆಲುಬು ಎಂದು ಹೇಳುತ್ತಾ ಅದೇ ರೈತರಿಗೆ ಬೆನ್ನಿಗೆ ಚೂರಿ ಹಾಕುತ್ತಿದ್ದಾರೆ ಎಂದು ಸಮಾಜ ಪರಿವರ್ತನಾ ವೇದಿಕೆಯ ಮುಖಂಡರಾದ ಪರಮೇಶಿ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಬುದುವಾರ ತಾಲೂಕು ಆಡಳಿತ ಸೌದದಲ್ಲಿ ಸಮಾಜ ಪರಿವರ್ತನಾ ವೇದಿಕೆ ಹಾಗೂ ಕರ್ನಾಟಕ ಪ್ರಾಂತ್ಯ ರೈತ ಸಂಘ ಹಾಗೂ ನೇರಳಹಳ್ಳಿ ಗ್ರಾಮಸ್ಥರು ಸೇರಿ ಶಿವಶಕ್ತಿ ಬಿಲ್ಡಿಂಗ್ ಸ್ಟೋನ್ ಕಂಪನಿ ಗಣಿಗಾರಿಕೆ ನಡೆಸುತ್ತಿರುವುದನ್ನು ನಿಲ್ಲಿಸಬೇಕು ಅದರ ಅನುಮತಿಯನ್ನು ರದ್ದು ಪಡಿಸಬೇಕು ಎಂದು ತಹಸಿಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿ ಈ ಸಂದರ್ಭದಲ್ಲಿ ಅವರು ಮಾತನಾಡಿದರು, ಆಂಧ್ರ ಮೂಲದ ಗುಂಡಾಗಳು ಕಲ್ಲುಗಣಿಗಾರಿಕೆಯನ್ನು ಪ್ರಾರಂಭಿಸಿದ್ದಾರೆ ಡ್ರೋನ್ ಕ್ಯಾಮೆರಾಗಳ ಮೂಲಕ ವಿಡಿಯೋ ಚಿತ್ರೀಕರಣ ಮಾಡುತ್ತಾ ಸುತ್ತಮುತ್ತಲಿನ ಜಮೀನುಗಳು ಮಾಲೀಕರಿಗೆ ಮತ್ತು ಸುತ್ತಮುತ್ತಲಿನ ರೈತರಿಗೆ ಪ್ರಾಣ ಬೆದರಿಕೆ ಹಾಕುತ್ತಿದ್ದಾರೆ, ಸರ್ವೇ ನಂಬರ್ 67 ರಲ್ಲಿ ಕಂಪನಿ ಅವರು ಭಯಾನಕ ಬಾಂಬುಗಳನ್ನು ಸ್ಪೋಡಿಸುವುದರಿಂದ ಕಲ್ಲಿನ ತುಂಡಗಳು ವೇಗವಾಗಿ ತೋಟಗಳ ಮನೆಗಳಿಗೆ ಹಾಗೂ ಗ್ರಾಮದ ಸಮೀಪಕ್ಕೆ ನುಗ್ಗುತ್ತವೆ, ಆದ್ದರಿಂದ ಸಾರ್ವಜನಿಕರು ಹೋರಾಡಲು ಭಯಭೀತರಾಗಿದ್ದಾರೆ, ಅದೇ ರೀತಿ ಧನಕರುಗಳಿಗೆ ಮೇವಿನ ಸಂಪತ್ತು ತುಂಬಿದ ಪ್ರದೇಶವಾಗಿದ್ದು ಜಾನುವಾರುಗಳ ಜೀವನಾಡಿಯಾಗಿದೆ, ಆದ್ದರಿಂದ ರೈತರುಗಳಿಗೆ ಕೂಲಿ ಕಾರ್ಮಿಕರಿಗೆ ಜಾನುವಾರುಗಳಿಗೆ ತುಂಬಾ ತೊಂದರೆ ಉಂಟಾಗುತ್ತದೆ ಈ ಕೂಡಲೇ ಇದನ್ನು ರದ್ದುಪಡಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ನೇರ್ಲಹಳ್ಳಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪಾಪಣ್ಣ ಮಾತನಾಡಿ ಈ ಪ್ರದೇಶದ ಜನಗಳು ಕೃಷಿಯನ್ನೇ ನಂಬಿಕೊಂಡು ಜೀವನ ಮಾಡುತ್ತಿದ್ದಾರೆ, ಊರಿನ ಗ್ರಾಮಸ್ಥರಿಗೆ ಕಂಪನಿಯವರು ಸ್ಪಟಿಸುವ ಭಯಾನಕ ಸ್ಪೋಟಕ್ಕೆ, ಮಹಿಳೆಯರು ಮಕ್ಕಳು ರಾತ್ರಿ ಇಡೀ ನಿದ್ದೆ ಮಾಡಲು ಸಾಧ್ಯವಾಗಿದೆ ಜೀವಭಯದಲ್ಲೇ ಬದುಕುತ್ತಿದ್ದಾರೆ, ಆದ್ದರಿಂದ ಈ ಪ್ರದೇಶದ ತುಂಬಾ ಭಯದ ವಾತಾವರಣವೇ ಉಂಟಾಗಿದೆ, ಅದೇ ರೀತಿ ಕಾಡು ಪ್ರಾಣಿಗಳು ಕಾಡಿನಿಂದ ನಾಡಿಗೆ ಬರಲು ಆರಂಭಿಸುವೆ, ಆದ್ದರಿಂದ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಕಲ್ಲುಗಣಿಗಾರಿಕೆ ಕಂಪನಿಗೆ ನೀಡಿರುವ ಪರ್ವನಿಗೆ ತಕ್ಷಣ ರದ್ದು ಪಡಿಸಬೇಕು. ಮಲ್ಲಹಳ್ಳಿ ಗ್ರಾಮದ ಜನತೆಗೆ ಸೂಕ್ತವಾದ ರಕ್ಷಣೆ ನೀಡಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ, ಬಂಗಿ ಸೂರಯ್ಯ, ತಿಪ್ಪೇಸ್ವಾಮಿ ತಿಪ್ಪಯ್ಯ, ರಾಜು,ತಾಲೂಕು ಉಪಾಧ್ಯಕ್ಷರಾದ ಓ ತಿಪ್ಪೇಶ್, ನಾಗಸಮುದ್ರ ಮರಿಸ್ವಾಮಿ,ಗ್ರಾಮದ ಮುಖಂಡರಾದ ಮಂಜುನಾಥ ಬೋರಯ್ಯ ಪೆದ್ದಯ್ಯ ನಾಗೇಶ್, ಓಬಣ್ಣ, ಚಿದಾನಂದ,ಬೊಮ್ಮಣ್ಣ, ಸಣ್ಣ ಪಾಲಯ್ಯ ಮಲ್ಲಯ್ಯ ಇನ್ನು ಹಲವು ಮುಖಂಡರು ಉಪಸ್ಥಿತರಿದ್ದರು.

ವರದಿ : ಪಿಎಂ ಗಂಗಾಧರ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!