ನವದೆಹಲಿ: ಈಚೆಗೆ ನಡೆದ ವಿಶ್ವಕಪ್ ಟ್ವೆಂಟಿ-೨೦ ಕ್ರಿಕೆಟ್ ಪಂದ್ಯಾವಳಿಯಲ್ಲಿ ಉತ್ತಮ ಆಟವಾಡಿರುವ ಎಡಗೈ ಬ್ಯಾಟರ್ ಇಶಾನ್ ಕಿಶನ್ ಅವರಿಗೆ ಮಹತ್ವದ ಭಡ್ತಿ ಸಿಕ್ಕಿದೆ.
ಇದೇ ದಿ. ೨೮ ರಿಂದ ಆರಂಭವಾಗುವ ಐಪಿಎಲ್ ಪಂದ್ಯಾವಳಿಯಲ್ಲಿ ಸನ್ ರೈರ್ಸ್ ಹೈದರಾಬಾದ್ ಪರವಾಗಿ ಆಡುತ್ತಿರುವ ಇಶಾನ್ ಕಿಶನ್ ಅವರು ತಂಡದ ನಾಯಕತ್ವ ವಹಿಸುವರು ಎಂದು ತಂಡದ ವ್ಯವಸ್ಥಾಪಕ ಮಂಡಳಿ ಇಂದು ದೃಢ ಪಡಿಸಿದೆ.
ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಅವರು ತಂಡಕ್ಕೆ ಮರಳುವವರೆಗೆ ಇಶಾನ್ ಕಿಶನ್ ತಂಡದ ಸಾರಥ್ಯ ವಹಿಸುವರು. ಅಭಿಷೇಕ ಶರ್ಮಾ ತಂಡದ ಉಪನಾಯಕರಾಗಿ ಜವಾಬ್ದಾರಿ ನಿಭಾಯಿಸುವರು. ಮೊದಲ ಹಂತದ ಐಪಿಎಲ್ ಪಂದ್ಯಾವಳಿ ಮರ್ಚ್ ೨೮ ರಿಂದ ಆರಂಭವಾಗುತ್ತಿದೆ.
ಇಶಾನ್ ಕಿಶನ್ ಎಸ್ಆರ್ಎಚ್ ತಂಡದ ನಾಯಕ




