ಚಿಟಗುಪ್ಪ:ತಾಲ್ಲೂಕಿನ ತಾಳಮಡಗಿ ಗ್ರಾಮದ ಐತಿಹಾಸಿಕ ಶ್ರೀ ಅಲ್ಲಮ ಪ್ರಭು ದೇವರ ಜಾತ್ರಾ ಮಹೋತ್ಸವ ಮಾರ್ಚ್ 19ರಿಂದ ಮಾರ್ಚ್ 21ರವರೆಗೆ ಅದ್ದೂರಿಯಾಗಿ ಜರುಗಲಿದೆ.ಮಾರ್ಚ್ 19ರಂದು ರಾತ್ರಿ 9ಗಂಟೆಗೆ ಅಲ್ಲಮ ಪ್ರಭುಗಳ ಮೂರ್ತಿಗೆ ಗಂಧ ಹಚ್ಚಿ ಪರಸ್ಪರ ಬೆಲ್ಲ ಹಂಚುವುದು.ಮಾರ್ಚ್ 20ರಂದು ಬೆಳಗ್ಗೆ 11ಗಂಟೆಗೆ ಅನ್ನ ಪ್ರಸಾದ,ರಾತ್ರಿ 9ಗಂಟೆಗೆ ಶ್ರೀ ಅಲ್ಲಮ ಪ್ರಭುಗಳ ಭಾವಚಿತ್ರದ ಅದ್ದೂರಿ ಮೆರವಣಿಗೆ,ರಾತ್ರಿ 11ಗಂಟೆಗೆ ಶ್ರೀ ಗುರು ನಾಗಲಿಂಗೇಶ್ವರ ನಾಟ್ಯ ಸಂಘದಿಂದ ನಾಟಕ ಪ್ರದರ್ಶನ.ಮಾರ್ಚ್ 21ರಂದು ಬೆಳಗ್ಗೆ 7ಗಂಟೆಗೆ ಜಟ್ಟಿಗಳಿಂದ ಜಂಗಿ ಕುಸ್ತಿ ಜರುಗಲಿದೆ.ಸುತ್ತಮುತ್ತಲಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಜಾತ್ರಾ ಮಹೋತ್ಸವವನ್ನು ಯಶಸ್ವೀಗೊಳಿಸಬೇಕು ಎಂದು ಶ್ರೀ ಅಲ್ಲಮ ಪ್ರಭು ಪಂಚ ಕಮಿಟಿ ಪ್ರಕಟಣೆ ತಿಳಿಸಿದೆ.
ವರದಿ:ಸಜೀಶ್ ಲಂಬುನೋರ್




