ಭಾಲ್ಕಿ : ತಾಲೂಕಿನ ಚಳಕಾಪೂರ ಗ್ರಾಮದ ಬ್ರಹ್ಮವಿದ್ಯಾಶ್ರಮ ಶ್ರೀ ಸಿದ್ಧಾರೂಢ ಮಠದಲ್ಲಿ ಶ್ರೀ ಸಿದ್ಧಾರೂಢ ಮಹಾಸ್ವಾಮಿಗಳ 190ನೇ ಜಯಂತಿ ಮಹಾಮಹೋತ್ಸವ ಮಾ.21 ರಿಂದ ಮಾ.27 ರವರೆಗೆ ರಥೋತ್ಸವದೊಂದಿಗೆ ನಡೆಯಲಿದೆ ಎಂದು ಬ್ರಹ್ಮವಿದ್ಯಾಶ್ರಮ ಶ್ರೀ ಸಿದ್ಧಾರೂಢ ಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಚಿದಂಬರಾಶ್ರಮ ಶ್ರೀ ಸಿದ್ದಾರೂಢ ಮಠ ಬೀದರಿನ ಡಾ| ಶಿವಕುಮಾರ ಮಹಾಸ್ವಾಮಿಗಳ ದಿವ್ಯ ಸನ್ನಿಧಾನದಲ್ಲಿ ಚಳಕಾಪೂರದ ಸದ್ಗುರು ಶ್ರೀ ಸಿದ್ಧಾರೂಢ ಮಹಾಸ್ವಾಮಿಗಳ ಜಾತ್ರಾ ಮಹೋತ್ಸವ ಮಾ.21 ರ ಶನಿವಾರ ದಿಂದ ಮಾ.27 ರ ಶುಕ್ರವಾರದ ವರೆಗೆ 7 ದಿವಸಗಳ ಕಾಲ ಜ್ಞಾನ ಸಪ್ತಾಹದೊಂದಿಗೆ ವಿಜ್ರಂಭಣೆಯಿAದ ನಡೆಯುವುದು. ಮಾ.27 ರಂದು ಶುಕ್ರವಾರ ಸದ್ಗುರು ಶ್ರೀ ಸಿದ್ಧಾರೂಢದ ಭವ್ಯ ರಥೋತ್ಸವದೊಂದಿಗೆ ಜಾತ್ರಾ ಮಹೋತ್ಸವಕ್ಕೆ ತೆರೆಯಳೆಯಲಾಗುವುದು. ಜಾತ್ರಾ ಮಹೋತ್ಸವ ಸಮಯದಲ್ಲಿ ಪ್ರತಿನಿತ್ಯ ಬೆಳಿಗ್ಗೆ 6 ರಿಂದ 7 ರ ವರೆಗೆ ಮತ್ತು ಸಾಯಂಕಾಲ 4 ರಿಂದ 5 ರ ವರೆಗೆ ಶ್ರೀ ಸಿದ್ದಾರೂಢರ ಕಥಾ ಪಾರಾಯಣ ನಡೆಯುವುದು. ಶ್ರೀ ಸಿದ್ದಾರೂಢರ ಉತ್ಸವ ಮೂರ್ತಿಗೆ ಪ್ರತಿನಿತ್ಯ ರುದ್ರಾಭಿಷೇಕ ನಡೆಯುವುದು. ಹಾಗು ಶ್ರೀಮಠದಿಂದ ಶ್ರೀ ಸಿದ್ದಾರೂಢರ ಪೂರ್ವಾಶ್ರಮದ ಮನೆಯವರೆಗೆ ಪಲ್ಲಕ್ಕಿ ಉತ್ಸವ ನಡೆಯುವುದು. ಜೊತೆಗೆ ಪ್ರತಿನಿತ್ಯ ಸದ್ಗುರು ಶ್ರೀ ಸಿದ್ದಾರೂಢ ಮಹಾಸ್ವಾಮಿಗ ಮೂರ್ತಿ ತುಲಾಭಾರ ಸೇವೆ ಹಾಗು ಸದ್ಗುರು ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ತುಲಾಭಾರ ಸೇವೆ ನಡೆಯುವುದು.

1. ಪ್ರತಿನಿತ್ಯ ಕ್ರಮವಾಗಿ ಬೆಳಿಗ್ಗೆ 8 ರಿಂದ 10 ಗಂಟೆಯವರೆಗೆ, 1. ತಿಳಿಯಲಹುದೊಲಿದು ಬಿಡಲಹುದು. 2. ಆಗದಾಗದು ವರವಿವೇಕಿಗೆ ಮುಕ್ತಿ. 3. ಎಂದಿನAತೆ ಜೀವಭಾವವಿರಲು, 4. ಬೇರೊಂದು ಯೋಗದೋಳು ಬಳಲದಾನಂದವನೆ. 5. ಜೀವಂಗೆ ಪಂಚ ಪಾಶಂಗಳು. 6. ಸೋಪಾಧಿಯಾದ ಸಂಸಾರಮA ಕಡಿಸಲ್ಕೆ ನಿರೂಪಿಸುವೆನಾ ಸಮಾಧಿಗಳನಿಲ್ಲಿ. 7. ನಿರಹಂತೆ ಪರಮವಿರಕ್ತಿ ಸದ್ಗುರು ಭಕ್ತಿ ದೊರಕೊಂಡಾತನೆ ಶಿಷ್ಯನೆನಿಪನು ಎನ್ನುವ ವಿಷಯಗಳ ಮೇಲೆ ಪ್ರವಚನ ಹಾಗೆಯೇ ಪ್ರತಿನಿತ್ಯ ಕ್ರಮವಾಗಿ ಸಾಯಂಕಾಲ 6 ರಿಂದ 8 ಗಂಟೆಯವರೆಗೆ, 1 ವರಪುಣ್ಯಲತೆಯನಾವರಿಪಂತೆ ಬೆಳೆಪುದೆ ಚಂದಮಮ. 2. ದೊರಕಲೇನದರೊಳು ಪರಿಣತೆದಳೆವುದೆ ಚಂದಮಮ. ೩. ಎಲ್ಲರೊಡನೆ ವೈರವಿಲ್ಲದೆ ಕೂರ್ಪುದೆ ಚಂದಮಮ. 4. ಹಿತವಿದಹಿತವೆಂದತಿಶಯಸಿ ತಿಳಿವುದೇ ಚಂದಮಮ. 5. ದಿರತವನೆಳ್ಳಿನಿತಾದವರು ನೇತಿಗಳೆವುದೆ ಚಂದಮಮ. 6. ಜವನದಾಳಿಯ ಕೆಡಿಸುವ ಭಕ್ತಿಗಲಿವುದೆ ಚಂದಮಮ ಎನ್ನುವ ವಿಷಯಗಳ ಮೇಲೆ ಪ್ರವಚನ ನಡೆಯುವುದು.
ಬಾಕ್ಸ್ 2. ಸದ್ಗುರು ಶ್ರೀ ಡಾ| ಶಿವಕುಮಾರ ಮಹಾಸ್ವಾಮಿಗಳು ಚಿದಂಬರಾಶ್ರಮ ಬೀದರಿನ ಪೂಜ್ಯರ ದಿವ್ಯಸಾನಿಧ್ಯದಲ್ಲಿ ನಡೆಯುವ ಜ್ಞಾನಾಮೃತ ಕಾರ್ಯಕ್ರಮದಲ್ಲಿ ಭಾಗವಹಿಸುವ ಪೂಜ್ಯರ ವಿವರ: ಶಿವಯೋಗೀಶ್ವರ ಸಾಧು ಸಂಸ್ಥಾನ ಮಠ ಇಂಚಲನ ಶ್ರೀಡಾ| ಶಿವಾನಂದ ಭಾರತಿ ಮಹಾಸ್ವಾಮಿಗಳು, ಗೋಸಾಯಿ ಮಾಸಂಸ್ಥಾನ ಮಠ ಗವಿಪುರಂ ಬೆಂಗಳೂರಿನ ಶ್ರೀ ಮಂಜುನಾಥ ಭಾರತಿ ಮಹಾಸ್ವಾಮಿಗಳು, ಪಂಢರಪುರ ವಿಠಲ ರುಕ್ಮಿಣಿ ಮಂದಿರ ಸಮಿತಿಯ ಅಧ್ಯಕ್ಷ ಸದ್ಗುರು ಗಹಿನಿನಾಥ ಮಹಾರಾಜರು ಔಸೆಕರ್ ಪಾವನ ಸಾನಿಧ್ಯದಲ್ಲಿ ಶ್ರೀ ಪ್ರಣವಾನಂದ ಸ್ವಾಮೀಜಿ ಮುಚಳಂಬ, ಡಾ| ವಿರುಪಾಕ್ಷ ಶಿವಾಚಾರ್ಯರು ಶ್ರೀಕ್ಷೇತ್ರ ಮನ್ಮಥಧಾಮ, ಸಂಸ್ಥಾನ ಕಪಿಲಾಧಾರ, ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯರು ಚಿಕ್ಕಮಠ ಹಳ್ಳಿಖೇಡ(ಬಿ), ಜಗದ್ಗುರು ಅಭಿನವ ಸಿದ್ದರಾಮೆಶ್ವರ ಶಿವಯೋಗಿಗಳು ಕವಲಗಿ, ಶ್ರೀ ಜಡಿಸಿದ್ದೇಶ್ವರ ಸ್ವಾಮಿಗಳು ಸೋಲಾಪೂರ, ಶ್ರೀ ಶಂಕರಾನAದ ಸ್ವಾಮಿಗಳು ಶ್ರೀ ಸಿದ್ದಾರೂಢಮಠ ಆಳೂರು ಮತ್ತು ಚಳಕಾಪೂರ, ಶ್ರೀ ಸೋಮೇಶ್ವರಾನಂದ ಸ್ವಾಮಿಗಳು ಸೈದಾಪೂರ, ಶ್ರೀ ಪೂರ್ಣಾನಂದ ಸ್ವಾಮಿಗಳು ಬೀದರ, ಶ್ರೀ ಶಿವಾತ್ಮಾನಂದ ಸ್ವಾಮಿಗಳು ನಾಗಪೂರ, ಮಾತೋಶ್ರೀ ಲಕ್ಷಿö್ಮÃದೇವಿ ಕಲಬುರಗಿ, ಮಾತೋಶ್ರೀ ಸಿದ್ದೇಶ್ವರಿತಾಯಿ ಬೀದರ, ಮಾತೋಶ್ರೀ ಅಮೃತಾನಂದಮಯಿ ಬೆಳ್ಳೂರ, ಮಾತೋಶ್ರೀ ಆನಂದಮಯಿತಾಯಿ ಮಲ್ಲಾಪೂರ, ಶ್ರೀ ಪರಮಾನಂದ ಸ್ವಾಮಿಗಳು ಯಳಸಂಗಿ, ಶ್ರೀ ದಯಾನಂದ ಸ್ವಾಮಿಗಳು ಮುಳಸಾವಳಗಿ, ಶ್ರೀ ಅದ್ವೆöÊತಾನಂದ ಸ್ವಾಮಿಗಳು ಯರಗಲ, ಶ್ರೀ ಗಣಪತಿ ಮಹಾರಾಜರು ಬೀದರ ಮತ್ತು ಬಕಕ್ಷಡಿ, ಶ್ರೀ ಸದ್ರೂಪಾನಂದ ಸ್ವಾಮಿಗಳು ಮಳಚಾಪುರ, ಶ್ರೀ ಸ್ವಾತ್ಯಾನಂದ ಸ್ವಾಮಿಗಳು ಬೀದರ, ಶ್ರೀ ದೇವಾನಂದ ಸ್ವಾಮಿಗಳು ರುದನೂರ, ಶ್ರೀ ಚನ್ನಬಸವ ಪಟ್ಟದ್ದೇವರು ಆಳಂದ, ಶ್ರೀ ಸಿದ್ದಾನಂದ ಸ್ವಾಮಿಗಳು ಬುಧ್ನಿ, ಅಭಿನವ ರೇವಣಸಿದ್ದ ಸ್ವಾಮಿಗಳು ಮೈಂದರ್ಗಿ, ಸಂಗೀತಾತಾಯಿ ಬೀದರ, ಸುಶಾಂತಾತಾಯ ಸೋಲಾಪೂರ, ಜ್ಞಾನೇಶ್ವರಿ ತಾಯಿ ಭೀ.ಗುಡಿ, ಮನಿಷಾತಾಯಿ ನಾಸಿಕ್ ಸೇರಿದಂತೆ ಹಲವಾರು ಸ್ವಾಮಿಗಳು ಮತ್ತು ಮಾತಾಜಿಯವರು ಉಪಸ್ಥಿತರಿರುವರು.
ವರದಿ: ಸಂತೋಷ ಬಿಜಿ ಪಾಟೀಲ




