ಕಲಘಟಗಿ : ಧಾರವಾಡ ಕಲಘಟಗಿ ಹಲವಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ವೆಲ್ಫೇರ್ ಸೊಸೈಟಿಯ ಗುಡ್ ನ್ಯೂಸ್ ಪ್ರಥಮ ದರ್ಜೆ ಮಹಾವಿದ್ಯಾಲಯ ಇರುವ ಜಾಗಯು ನಾಶಿ ಕುಟುಂಬಕ್ಕೆ ಸೇರಿದ್ದು.

ಇದರ ಕುರಿತು ನಮ್ಮ ಪತ್ರಿಕೆಗೆ ಮಾಹಿತಿ ನೀಡಿದ ಗುರುಸಿದ್ದಪ್ಪ ಅಮರಪ್ಪ ನಾಶಿ ಅವರು ತಿಳಿಸಿರುವುದೇನೆಂದರೆ ರಿಜಿಸ್ಟರ್ ಸರ್ವೆ ನಂಬರ್ 275/1 ಕ್ಷೇತ್ರ 2 ಎಕರೆ 37 ಗುಂಟೆ ಜಮೀನು ಕಲಘಟಗಿ ತಾಲೂಕಿಗೆ ಕಲಘಟಗಿ ಪಟ್ಟಣದಲ್ಲಿ ನಮ್ಮ ತಾಯಿಯವರಾದ ನಾಶಿ ಸಂಗವ್ವ ಅಮರಪ್ಪ ಅವರ ಹೆಸರಿನಲ್ಲಿ 9ನೇ ನಂಬರ್ ಸ್ವಾಧೀನ ಕಬ್ಸಾದಲ್ಲಿ ಇರುತ್ತದೆ ಹಾಗೂ ಕಂದಾಯ ಇಲಾಖೆಯ ಇ ಸಿ ದಾಖಲೆಗಳು ಕೂಡ ನಮ್ಮ ಕುಟುಂಬದ ಪರವಾಗಿ ಇರುತ್ತದೆ ಹಾಗೂ ಪಟ್ಟಣ ಪಂಚಾಯತಿಯಲ್ಲಿ ಈ ಜಾಗಕ್ಕೆ ಈ ಸುತ್ತು ಕೂಡ ಮಾಡಿಸಲಾಗಿದೆ ಹಾಗೂ ಟ್ಯಾಕ್ಸ್ ಕೂಡ ನಾವೆ ಕಟ್ಟುತ್ತಾ ಬಂದಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ.

ಹಾಗೂ ಈ ಆಸ್ತಿಯ ಕುರಿತು ಹಲವಾರು ವರ್ಷಗಳಿಂದ ಕೋರ್ಟ್ ಮೆಟ್ಟಿಲೇರಿ ಹಲವಾರು ಸಮಸ್ಯೆಗಳನ್ನ ಎದುರಿಸಿ ಸದರಿ ಎಲ್ಲ ದಾಖಲೆಗಳು ನಮ್ಮ ಕುಟುಂಬಕ್ಕೆ ಸೇರಿದೆ ಎಂದು ದಾಖಲೆಗಳು ಸರಿಪಟ್ಟಿವೆ. ಈ ಮಾತಿಯನ್ನು ಸಂಬಂಧಪಟ್ಟ ಎಲ್ಲಾ ಹಿರಿಯ ಅಧಿಕಾರಿಗಳ ಗಮನಕ್ಕೆ ಈ ಮಾಹಿತಿಯನ್ನು ಒದಗಿಸಿದ್ದು ಇರುತ್ತದೆ ಹಾಗೂ ಕಾನೂನು ಅಡಿಯಲ್ಲಿ ನಾಲ್ಕು ಜನರ ವಿರುದ್ಧ ಎಫ್ ಐ ಆರ್ ದಾಖಲಾಗಿ ಇಬ್ಬರೂ ಕೂಡ ಅದರಲ್ಲಿ ಜಾಮೀನು ಪಡೆದುಕೊಂಡಿದ್ದಾರೆ ಎಂದು ಗುರುಸಿದ್ದಪ್ಪ ಅಮರಪ್ಪ ನಾಶಿ ಅವರು ನಮ್ಮ ಪತ್ರಿಕೆಗೆ ತಿಳಿಸಿದ್ದಾರೆ.
ಹಾಗೂ ನಾವು ಕಾಲೇಜ್ ಆಡಳಿತ ವ್ಯವಸ್ಥೆಗೆ ಅರ್ಜಿ ನೀಡಲು ಹೋದಾಗ ಅರ್ಜಿಯನ್ನ ತಿರಸ್ಕರಿಸಿದ್ದು ಕೂಡ ಇರುತ್ತದೆ ಹಾಗೂ ಕಾಲೇಜು ಮುಂಭಾಗದಲ್ಲಿ ಹಾಗೂ ಮುಖ್ಯ ಆಡಳಿತ ಅಧಿಕಾರಿಗಳ ಕೊಠಡಿಯ ಗೋಡೆ ಮೇಲೆ ನೋಟಿಸ್ ಕೂಡ ಅಂಟಿಸಿದ್ದೇವೆ ಎಂದರು.
ಹಾಗೂ ಪತ್ರಿಕೆ ಮೂಲಕ ಕೇಳಿಕೊಳ್ಳುವುದೇನೆಂದರೆ ಇಲ್ಲಿ ಹಲವಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ನಡೆಸುತ್ತಿದ್ದು ಕೂಡಲೇ ಅವರನ್ನು ಸ್ಥಳಾಂತರಿಸಿ ನಮ್ಮ ಜಾಗವನ್ನು ಬಿಟ್ಟು ಕೊಡಬೇಕಾಗಿ ಪತ್ರಿಕೆ ಮೂಲಕವೂ ಅಧಿಕಾರಿಗಳಿಗೂ ಹಾಗೂ ಸೊಸೈಟಿ ಮೇಲ್ದರ್ಜೆಯ ಅಧಿಕಾರಿಗಳಿಗೂ ಕೇಳಿಕೊಳ್ಳುತ್ತೇವೆ.
ಈ ವಿಷಯ ಅಗೋಚರ ವೆನಿಸುತ್ತಿದ್ದು ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಇದರ ಕುರಿತು ಮಾಹಿತಿ ತೆಗೆದುಕೊಂಡು ಇದರಲ್ಲಿ ತಪ್ಪು ಒಪ್ಪುಗಳನ್ನ ಗಮನಿಸಿ ತಪ್ಪಿದ ಸ್ತರ ವಿರುದ್ಧ ಕ್ರಮ ಕೈಗೊಳ್ಳುತ್ತಾರ ಎಂದು ಕಾದು ನೋಡಬೇಕಿದೆ.
ಇದರ ಕುರಿತು ನಮ್ಮ ಪತ್ರಿಕೆಯಿಂದ ಜಿಲ್ಲಾಧಿಕಾರಿಗಳ ಗಮನಕ್ಕೆ ತಿಳಿಸಿತ್ತು ಕೂಡಲೇ ದಾಖಲೆಗಳನ್ನು ಪರಿಶೀಲಿಸಿ ತಪ್ಪಿದಸ್ಥರ ವಿರುದ್ಧ ಕಾನೂನಾತ್ಮಕವಾಗಿ ಕ್ರಮ ಜರುಗಿಸಲಾಗುವುದು ಎಂದು ಧಾರವಾಡ ಜಿಲ್ಲಾಧಿಕಾರಿಗಳಾದ ಶ್ರೀಮತಿ ಸ್ನೇಹಲ್ ಆರ್ ಮೇಡಮ್ ಅವರು ನಮ್ಮ ಪತ್ರಿಕೆಯ ಪ್ರತಿಕ್ರಿಯಿಸಿದ್ದಾರೆ.
ವರದಿ : ನಿತೀಶಗೌಡ ತಡಸ ಪಾಟೀಲ್




