ಚೇಳೂರು :ತಾಲೂಕಿನಲ್ಲಿ ಇಂದು ಎಲ್ಲಾ ಮುಸ್ಲಿಂ ಬಾಂಧವರೆಲ್ಲರೂ ಬಣ್ಣ -ಬಣ್ಣದ ಸಮವಸ್ತ್ರಗಳನ್ನು ಧರಿಸಿ ಜಾಮಿಯಾ ಮಸೀದಿಯ ಬಲಿ ಜಮಾ ಹಾಗಿ ನಂತರ ಕಾಲು ನಡಿಗೆಯ ಮೂಲಕ ಈದ್ ಗಾ ಮೈದಾನ ಬಲಿ ಸೇರಿ ಈದ್ ಉಲ್ ಫಿತ್ರ, ರಂಜಾನ್ ಹಬ್ಬವನ್ನು ಪ್ರಾರ್ಥನೆ ಮಾಡಿ ವಿಜೃಂಭಣೆಯಿಂದ ಸಂಭ್ರಮಿಸಿದರು, ನಂತರ ಒಂದು ತಿಂಗಳ ಕಾಲ ಉಪವಾಸ ಇದ್ದು ಅದೇವರ ಕೃಪೆಗೆ ಪಾತ್ರರಾಗಿರುತ್ತಾರೆ, ನಾವು ಯಾವುದೇ ಮದ್ಯಪಾನ ಅಥವಾ ಕೆಟ್ಟ ಕೆಲಸಗಳನ್ನು ಮಾಡಬಾರದು, ತಂದೆ -ತಾಯಿ ಗೆ ಹಾಗೂ ಗುರು -ಹಿರಿಯರಿಗೆ ಗೌರವಿಸಬೇಕು, ನಮ್ಮ ಜೀವನದಲ್ಲಿ ಯಾವುದು ಮನುಷ್ಯನಿಗೆ ಶಾಶ್ವತವಿಲ್ಲ, ಸಾವು ಎನ್ನುವುದು ಎದುರು ಬಂದರೇ ಅದನ್ನು ಯಾರ ಕೈಯಲ್ಲಿ ಕೂಡ ತಡೆಯಲು ಸಾಧ್ಯವಿಲ್ಲ ಎಂದು ಒಳ್ಳೆಯ ಜೀವನ ಶೈಲಿಯನ್ನು ನಮ್ಮ ಜೀವನದಲ್ಲಿ ಬೆಳಿಸಿಕೊಳ್ಳಬೇಕು ಎಂದು ಪರಿಚಯಸಿದರು, ಈ ಸಂದರ್ಭದಲ್ಲಿ ಬಿಸಿಲಿನ ಅಭಾವ ಇದ್ದ ಕಾರಣ ಮಜ್ಜಿಗೆ -ಹಾಗೂ ಶರಾಬಾತ್ ಮದೀನಾ ಮಸೀದಿಯ ಕಮಿಟಿಯ ವತಿಯಿಂದ ಹಂಚಲಾಯಿತು.

ಈ ಸಂದರ್ಭದಲ್ಲಿ ಅಬ್ದುಲ್ ಲತೀಫ್, ಬುಲೆಟ್ ಬಾಬು ಅಲೀಂ ಭಾಷಾ, ಮೆಕಾನಿಕ್ ನಯಾಜ್, ಖಾದರ್ ವಲಿ, ಸಾದಿಕ್ ಸೈಬರ್, ಎಲೆ ಮಾಭಾಷಾ, ಇಮ್ತಿಯಾಜ್, ಜಿಲಾನ್ ಭಾಷಾ ಮುಕ್ಯೋಪಾಧ್ಯಾಯರು ಕರ್ನಾಟಕ ಪಬ್ಲಿಕ್ ಸ್ಕೂಲ್, ಅಝರುದ್ದಿನ್, ಬಾಬು ಬೈಕ್ ಮೆಕ್ಯಾನಿಕ್, ಹಮೀದ್, ಅಮಾನುಲ್ಲಾ, ಶಾಮೀರ್ ಇನ್ನು ಮಸೀದಿಯ ಸಿಬ್ಬಂದಿಗಳು ಹಾಗೂ ಕಮಿಟಿಯವರು, ಇದೇ ವೇಳೆ ಚೇಳೂರು ತಾಲ್ಲೂಕಿನ ಸರ್ಕಲ್ ಇನ್ಸ್ಪೆಕ್ಟರ್ ಎಂ. ಶ್ರೀನಿವಾಸ್ ಹಾಗೂ ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು.
ವರದಿ :ಯಾರಬ್. ಎಂ




