Ad imageAd image

ಹುಬ್ಬಳ್ಳಿಯಲ್ಲಿ ರಿಲ್ಸ್ ಹುಚ್ಚಾಟಕ್ಕೆ ಬಾಲಕ ಸಾವು ಪ್ರಕರಣ : ತಂದೆ, ಕಾರು ಚಾಲಕ ಅರೆಸ್ಟ್

Bharath Vaibhav
ಹುಬ್ಬಳ್ಳಿಯಲ್ಲಿ ರಿಲ್ಸ್ ಹುಚ್ಚಾಟಕ್ಕೆ ಬಾಲಕ ಸಾವು ಪ್ರಕರಣ : ತಂದೆ, ಕಾರು ಚಾಲಕ ಅರೆಸ್ಟ್
WhatsApp Group Join Now
Telegram Group Join Now

ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ರಿಲ್ಸ್ ಹುಚ್ಚಾಟಕ್ಕೆ ಬಾಲಕ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಾಲಕನ ಸಾವಿಗೆ ಕಾರಣರಾದ ಇಬ್ಬರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹುಬ್ಬಳ್ಳಿ ವಿದ್ಯಾನಗರ ಠಾಣೆ ಪೋಲಿಸರಿಂದ ನಾಗರಾಜ್ ಎನ್ನುವ ವ್ಯಕ್ತಿಯನ್ನು ಬಂಧಿಸಲಾಗಿದೆ.

ಅಪ್ರಾಪ್ತ ಮಗನ ಕೈಯಲ್ಲಿ ಕಾರು ಕೊಟ್ಟು ಇದೀಗ ನಾಗರಾಜ್ ಜೈಲು ಸೇರಿದ್ದಾನೆ. ಕಾರು ಮಾಲಿಕ ನಾಗರಾಜ್ ರಾಯ್ಕರ್ ಸೇರಿ ಇಬ್ಬರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಆಕ್ಷನ್ ರಿಲ್ಸ್ ವೇಳೆ 15 ವರ್ಷದ ನಮಿಷ ಸಂಗಳದ ಮೃತಪಟ್ಟಿದ್ದ. ಆಡಿ ಕಾರು ಡಿಕ್ಕಿಯಾಗಿ ಸ್ಕೂಟಿಯಲ್ಲಿ ಇದ್ದ ನಮಿಷ ಮೃತಪಟ್ಟಿದ್ದ. ಹುಬ್ಬಳ್ಳಿ ನಗರದ ಶೇಜವಾಡಕರ್ ಪ್ಲಾಟ್ ನಲ್ಲಿ ಈ ಒಂದು ಘಟನೆ ನಡೆದಿತ್ತು.

ಉತ್ತರ ಪ್ರದೇಶದಲ್ಲಿ ನಾಗರಾಜ ರಾಯ್ಕರ್ ಈ ಒಂದು ಕಾರು ಖರೀದಿಸಿದ್ದ. ವಶಕ್ಕೆ ಪಡೆದಿದ್ದ ಬಾಲಕನನ್ನು ಬಾಲ ಮಂದಿರಕ್ಕೆ ಪೊಲೀಸರು ಕಳುಹಿಸಿದ್ದಾರೆ. ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿತ್ತು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!