Ad imageAd image

ಗಳತಗಾದಲ್ಲಿ ಮಾರ್ಚ್ 28ರಂದು ಬೀರಸಿದ್ದೇಶ್ವರ ಮಂದಿರ ಮಹಾದ್ವಾರ ಉದ್ಘಾಟನೆ ಹಾಗೂ ಸಂಗೊಳ್ಳಿ ರಾಯಣ್ಣ ಮೂರ್ತಿ ಅನಾವರಣ.

Bharath Vaibhav
ಗಳತಗಾದಲ್ಲಿ ಮಾರ್ಚ್ 28ರಂದು ಬೀರಸಿದ್ದೇಶ್ವರ ಮಂದಿರ ಮಹಾದ್ವಾರ ಉದ್ಘಾಟನೆ ಹಾಗೂ ಸಂಗೊಳ್ಳಿ ರಾಯಣ್ಣ ಮೂರ್ತಿ ಅನಾವರಣ.
WhatsApp Group Join Now
Telegram Group Join Now

ನಿಪ್ಪಾಣಿ : ತಾಲೂಕಿನ ಗಳತಗಾ ಗ್ರಾಮದಲ್ಲಿ ಮಾರ್ಚ್ 26 ರಿಂದ 28ರವರೆಗೆ ಶ್ರೀ ಬೀರ ಸಿದ್ದೇಶ್ವರ ಮಂದಿರದ ಮಹಾದ್ವಾರ ಉದ್ಘಾಟನೆ ವಾಸ್ತು ಶಾಂತಿ ಹಾಗೂ ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಪ್ರಯುಕ್ತ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ಕವಲಗುಡ್ಡದ ಅಮರೇಶ್ವರ, ಯಾದವಾಡದ ಸಿದ್ದೇಶ್ವರ, ಹುಲಜಂತಿಯ ಮಾಳಿಂಗರಾಯ, ಚಿಂಚಣಿ ಅಲ್ಲಮಪ್ರಭು ಮಠದ ಶಿವಪ್ರಸಾದ ದೇವರು, ಬಸವನ ಸಂಗೊಳ್ಳಿಯ ಮರುಗುಂಡೇಶ್ವರ ಹಾಗೂ ಧಾರವಾಡ ರೇವಣಸಿದ್ದೇಶ್ವರ ಮಠದ ಡಾ. ಬಸವರಾಜ್ ದೇವರ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಅನಾವರಣ, ಮಹಾದ್ವಾರ ಉದ್ಘಾಟನೆ ಹಾಗೂ ಭಂಡಾರ ಮಹೋತ್ಸವ ನಡೆಯಲಿದೆ ಎಂದು ಹಾಲಸಿದ್ದನಾಥ ಸಕ್ಕರೆ ಕಾರ್ಖಾನೆಯ ಸಂಚಾಲಕ ಹಾಗೂ ಹಾಲುಮತ ಸಮಾಜದ ಪ್ರಮುಖರಾದ ಶ್ರೀಕಾಂತ ಬನ್ನೇ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಗ್ರಾಮದ ಗಳತಗಾ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಅಧಿಕ ಮಾಹಿತಿ ನೀಡಿದ ಅವರು *ಗುರುವಾರ 26ರಂದು ಸುತ್ತಲಿನ 11 ಹಳ್ಳಿಗಳ ವಿಠ್ಠಲ ಬೀರ ದೇವರ ಪಲ್ಲಕ್ಕಿ ಉತ್ಸವ, ಅಂಬಲಿಕೊಡ ಮೆರವಣಿಗೆ ನಡೆಯಲಿದ್ದು ಶ್ರೀಗಳಿಂದ ಅರಸಿನ ಕುಂಕುಮ, ತವರಿನ ಉಡುಗೊರೆ, ಸಾಯಂಕಾಲ ಆಧ್ಯಾತ್ಮಿಕ ಪ್ರವಚನ, ದಿನಾಂಕ 27ರಂದು ಬೀರದೇವರಿಗೆ ಅಭಿಷೇಕ, ಹೋಮ, ಹವನ, ವಾಸ್ತು ಪೂಜೆ, ಹಾಗೂ ಪಲ್ಲಕ್ಕಿ ಉತ್ಸವ. 28ರಂದು ಮಹಾಕುಂಭಮೇಳ ಡೊಳ್ಳು ವಾದ್ಯದೊಂದಿಗೆ ಸಂಗೊಳ್ಳಿ ರಾಯಣ್ಣನ ಮೂರ್ತಿ ಮೆರವಣಿಗೆ ನಡೆಯಲಿದೆ. ಮುಂಜಾನೆ 11ಗಂಟೆಗೆ ಶಾಸಕಿ ಶಶಿಕಲಾ ಜೊಲ್ಲೆಯವರ ಹಸ್ತದಿಂದ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ, ಮಹಾದ್ವಾರ ಉದ್ಘಾಟನೆ ಆಗಲಿದೆ. ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅನ್ನಾಸಾಹೇಬ ಜೊಲ್ಲೆ, ಸಂಸದೇ ಪ್ರಿಯಾಂಕ ಜಾರಕಿಹೊಳಿ, ಜತ್ ಶಾಸಕ ಗೋಪಿಚಂದ್ ಪಡವಲ್ಕರ್
ಬುಡಾ ಅಧ್ಯಕ್ಷ ಲಕ್ಷ್ಮಣ್ ರಾವ್ ಚಿಂಗಳೆ ವೆಂಕಟೇಶ್ವರ ಸಕ್ಕರೆ ಕಾರ್ಖಾನೆಯ ಎಂ.ಡಿ. ಸ್ವರೂಪ್ ಮಾಹಾಡಿಕ ನಿಪ್ಪಾಣಿ ಮತಕ್ಷೇತ್ರದ ಯುವ ನಾಯಕ ಉತ್ತಮ ಪಾಟೀಲ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಹಾಲುಮತ ಸಮಾಜದ ಅಧ್ಯಕ್ಷ ಅನ್ನಾಸಾಹೇಬ ಹಿರವೆ,ಹಾಗು ಬೀರಸಿದ್ದೇಶ್ವರ ದೇವಸ್ಥಾನ ಕಮಿಟಿಯ ಆಡಳಿತ ಮಂಡಳಿಯ ಸದಸ್ಯರು ಹಾಲುಮತ ಸಮಾಜದ ಗಣ್ಯರು ಉಪಸ್ಥಿತರಿದ್ದರು.

ವರದಿ : ಮಹಾವೀರ ಚಿಂಚಣೆ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!