ಬೆಂಗಳೂರು : ಬೆಂಗಳೂರಿನ ಕನ್ನಡ ಭವನದ
ಕನ್ನಡ ಮತ್ತು ಸಂಸ್ಕೃತಿ” ಇಲಾಖೆ ಸಹಕಾರದೊಂದಿಗೆ ನಯನ ಸಭಾಂಗಣದಲ್ಲಿ ಕನ್ನಡಾಂಬೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘ ರಿ ಬೆಂಗಳೂರು ಯುಗಾದಿ ಪುರಸ್ಕಾರ ವಿಶೇಷ ಕಾರ್ಯಕ್ರಮ ” ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕಲೆ, ಸಾಹಿತ್ಯ, ಶಿಕ್ಷಣ, ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ವಿವಿಧ ಸಾಧಕರು ಹಾಗೂ ಸಮಾಜ ಸೇವಕರನ್ನು ಗುರುತಿಸಿ ಅವರನ್ನು ಗೌರವದಿಂದ ಸತ್ಕರಿಸಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕೊಟಬಾಗಿ ಗ್ರಾಮದ ಶ್ರೀ*ಸಂತೋಷ ಅವ್ವಣ್ಣಾ ಪಾಟೀಲ ಎಂಬುವ ಯುವ ರಾಜಕೀಯ ಮುಖಂಡರು ” ಕರ್ನಾಟಕ ಭೂಷಣ ರಾಜ್ಯ ಪ್ರಶಸ್ತಿ” ಗೆ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿಯಾಗಿದೆ.
ಭಾರತ ಸರ್ಕಾರದ ಅತ್ಯುನ್ನತ ಪ್ರಶಸ್ತಿಯಾದ 2026ನೇ ವರ್ಷದ ಪ್ರತಿಷ್ಠಿತ “ಪದ್ಮಶ್ರೀ” ಪ್ರಶಸ್ತಿ* ಪುರಸ್ಕೃತರಾದ ಡಾ. ಸುಶೀಲಮ್ಮ ಅವರ ಅಮೃತ ಹಸ್ತದಿಂದ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷರು ಕರ್ನಾಟಕ ಸರ್ಕಾರ ಡಾ. ಮಾನಸರವರಘನ ಉಪಸ್ಥಿತಿಯಲ್ಲಿ ರಾಜ್ಯ ಪ್ರಶಸ್ತಿಯನ್ನು ಪಡೆದಿರುವುದು ಸಂತಸದ ವಿಷಯವಾಗಿದೆ.

ವರದಿ : ರಾಜು ಮುಂಡೆ




