Ad imageAd image

ನಮ್ಮಲ್ಲಿದ್ದ ಮೂರು ಗುಂಪು ಈಗ ಒಂದಾಗಿವೆ : ಸತೀಶ್ ಜಾರಕಿಹೊಳಿ

Bharath Vaibhav
ನಮ್ಮಲ್ಲಿದ್ದ ಮೂರು ಗುಂಪು ಈಗ ಒಂದಾಗಿವೆ : ಸತೀಶ್ ಜಾರಕಿಹೊಳಿ
WhatsApp Group Join Now
Telegram Group Join Now

ಬೆಳಗಾವಿ: ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ಎರಡೂ ಕ್ಷೇತ್ರಗಳು ಕಾಂಗ್ರೆಸ್‌ನ ಭದ್ರಕೋಟೆಯಾಗಿವೆ. ಅವೆರಡನ್ನೂ ಉಳಿಸಿಕೊಳ್ಳಲು ಪ್ರಯತ್ನಿಸುತ್ತೇವೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಬೆಳಗಾವಿಯಲ್ಲಿ ರವಿವಾರ (ಮಾ.22) ಮಾತನಾಡಿದ ಅವರು, ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಉಮೇಶ ಮೇಟಿ ಅವರಿಗೆ ಟಿಕೆಟ್‌ ದೊರಕಬೇಕು ಎಂಬುದು ಕ್ಷೇತ್ರದ ಜನರ ಹಾಗೂ ನಮ್ಮ ನಿರೀಕ್ಷೆಯಿತ್ತು.ಅದರಂತೆಯೇ ಹೈಕಮಾಂಡ್‌ ಅವರು ಉಮೇಶ ಮೇಟಿಗೆ ಟಿಕೆಟ್‌ ನೀಡಿದೆ ಎಂದರು.

ಬಾಗಲಕೋಟೆ ಕ್ಷೇತ್ರದಲ್ಲಿ ಮೇಟಿ ಕುಟುಂಬಸ್ಥರ ಮೇಲೆ ಅಲ್ಲಿನ ಜನ ಅಪಾರ ಗೌರವ ಇಟ್ಟುಕೊಂಡಿದ್ದಾರೆ. ಮೇಲಾಗಿ ಬಾಗಲಕೋಟೆಯಲ್ಲಿ ಕಳೆದ ಎರಡು ತಿಂಗಳಿಂದ ನಾವು ಸಹ ಚುನಾವಣೆ ಗೆಲುವಿಗಾಗಿ ಕೆಲಸ ಮಾಡುತ್ತಿದ್ದೇವೆ. ಆದ್ದರಿಂದ ಉಮೇಶ ಮೇಟಿ ಗೆಲುವಿಗೆ ಕಷ್ಟವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಉಮೇಶ ಮೇಟಿ ಅವರ ಪರ ಪ್ರಚಾರ ಮಾಡುತ್ತೇನೆ. ದಾವಣಗೆರೆಗೂ ಪ್ರಚಾರಕ್ಕೆ ಹೋಗುತ್ತೇನೆ. ಆದರೆ ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚು ಪ್ರಚಾರಕ್ಕೆ ಆದ್ಯತೆ ನೀಡುತ್ತೇನೆ. ಎರಡು ಕ್ಷೇತ್ರದಲ್ಲೂ ನಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಸತೀಶ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.

ನಮ್ಮಲ್ಲಿದ್ದ ಮೂರು ಗುಂಪು ಈಗ ಒಂದಾಗಿವೆ. ಅಹಿಂದ ಮತಗಳು ಕಾಂಗ್ರೆಸ್ ಪರವಾಗಿಯೇ ಇವೆ. ನಾವೇ ಗೆಲ್ಲುತ್ತೇವೆ. ಉತ್ತಮ ವಾತಾವರಣ ಇದೆ. ಇಡೀ ಪಕ್ಷ ಅವರ ಜತೆಗಿದೆ. ಇದಲ್ಲದೆ ನಮ್ಮ ಸರಕಾರದ ಗ್ಯಾರಂಟಿಗಳು ಕೈಹಿಡಿಯಲಿವೆ ಎಂದರು.

ಬಾಗಲಕೋಟೆ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜ ಆಗಬೇಕು ಎಂಬುದು ಎಚ್‌.ವೈ.ಮೇಟಿ ಅವರ ಆಸೆಯಾಗಿತ್ತು. ಅದು ಕೂಡ ಈಡೇರಿದೆ. ಬಿಜೆಪಿಯವರು ಹಿಂದುತ್ವದ ಆಧಾರದ ಮೇಲೆ ಪ್ರಚಾರ ಮಾಡುತ್ತಾರೆ. ನಾವು ಅಹಿಂದ ಮತಗಳನ್ನು ಇಟ್ಟುಕೊಂಡು ಪ್ರಚಾರ ಮಾಡುತ್ತೇವೆ ಎಂದು ಜಾರಕಿಹೊಳಿ ಹೇಳಿದರು.

ಮೇಟಿ ಕುಟುಂಬದಲ್ಲಿಯೇ ಟಿಕೆಟ್ ಗಾಗಿ ಪೈಪೋಟಿಯಿತ್ತು. ಬೇರೆಯವರು ಯಾರು ಆಕಾಂಕ್ಷಿಗಳು ಇರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!