Ad imageAd image

ಅನುಕಂಪದ ಆಧಾರದ ನೇಮಕಾತಿ’ ಎಂಬುದು ಜನ್ಮಸಿದ್ಧ ಹಕ್ಕಲ್ಲ : ಹೈಕೋರ್ಟ್

Bharath Vaibhav
ಅನುಕಂಪದ ಆಧಾರದ ನೇಮಕಾತಿ’ ಎಂಬುದು ಜನ್ಮಸಿದ್ಧ ಹಕ್ಕಲ್ಲ : ಹೈಕೋರ್ಟ್
WhatsApp Group Join Now
Telegram Group Join Now

ಬೆಂಗಳೂರು: ಸರ್ಕಾರಿ ನೌಕರರು ಸೇವೆಯಲ್ಲಿದ್ದಾಗ ಮೃತಪಟ್ಟರೆ ಅವರ ಕುಟುಂಬದವರಿಗೆ ನೀಡಲಾಗುವ ‘ಅನುಕಂಪದ ಆಧಾರದ ನೇಮಕಾತಿ’ ಎಂಬುದು ವಾರಸುದಾರರ ಜನ್ಮಸಿದ್ಧ ಹಕ್ಕಲ್ಲ ಅಥವಾ ಅದು ಪಿತ್ರಾರ್ಜಿತವಾಗಿ ಬರುವ ಉತ್ತರಾಧಿಕಾರದ ಹಕ್ಕಲ್ಲ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ.

ಸರ್ಕಾರಿ ಕಚೇರಿಯಲ್ಲಿ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು 2005ರಲ್ಲಿ ನಿಧನರಾಗಿದ್ದರು. ಅವರ ವಿವಾಹಿತ ಪುತ್ರಿಯು ಅನುಕಂಪದ ಆಧಾರದ ಮೇಲೆ ಕೆಲಸ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು.

ಆದರೆ, ಅಂದಿನ ನಿಯಮಗಳ ಪ್ರಕಾರ ವಿವಾಹಿತ ಪುತ್ರಿಯರಿಗೆ ಇಂತಹ ನೇಮಕಾತಿಗೆ ಅವಕಾಶವಿರಲಿಲ್ಲ ಎಂಬ ಕಾರಣಕ್ಕೆ ಸರ್ಕಾರ ಅರ್ಜಿಯನ್ನು ತಿರಸ್ಕರಿಸಿತ್ತು.

ಇದನ್ನು ಪ್ರಶ್ನಿಸಿ ಆಕೆ ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ.ಎಂ. ಶ್ಯಾಮ್ ಪ್ರಸಾದ್ ಮತ್ತು ಶಿವಶಂಕರ್ ಅಮರಣ್ಣವರ್ ಅವರಿದ್ದ ವಿಭಾಗೀಯ ಪೀಠವು ಈ ಕೆಳಗಿನ ಪ್ರಮುಖ ಅಂಶಗಳನ್ನು ಉಲ್ಲೇಖಿಸಿ ಅರ್ಜಿಯನ್ನು ವಜಾಗೊಳಿಸಿದೆ.

ಅನುಕಂಪದ ನೇಮಕಾತಿಯ ಉದ್ದೇಶವು ಕುಟುಂಬದ ಯಜಮಾನನ ಸಾವಿನ ನಂತರ ಎದುರಾಗುವ ಹಠಾತ್ ಆರ್ಥಿಕ ಬಿಕ್ಕಟ್ಟಿನಿಂದ ಆ ಕುಟುಂಬವನ್ನು ರಕ್ಷಿಸುವುದೇ ಹೊರತು, ಅದನ್ನು ಕೆಲಸ ಪಡೆಯುವ ಹಕ್ಕಾಗಿ ಬಳಸಲಾಗದು.

‘ಅವಲಂಬಿತ’ ಎಂದರೆ ಆರ್ಥಿಕವಾಗಿ ಸಂಪೂರ್ಣವಾಗಿ ಮೃತಪಟ್ಟವರ ಮೇಲೆ ಅವಲಂಬಿತರಾದವರು ಎಂದರ್ಥ. ವಿವಾಹಿತ ಪುತ್ರಿಯು ಸಾಮಾನ್ಯವಾಗಿ ಕಾನೂನುಬದ್ಧವಾಗಿ ತನ್ನ ಪತಿಯ ಮೇಲೆ ಅವಲಂಬಿತಳಾಗಿರುತ್ತಾಳೆ.

ಕಾಲಮಿತಿ

ನೌಕರ ಮೃತಪಟ್ಟು 20 ವರ್ಷಗಳ ನಂತರ ಉದ್ಯೋಗ ನೀಡುವುದು ಅನುಕಂಪದ ನೇಮಕಾತಿಯ ಮೂಲ ಉದ್ದೇಶಕ್ಕೆ (ತಕ್ಷಣದ ಪರಿಹಾರ) ವಿರುದ್ಧವಾಗಿದೆ. ಅರ್ಜಿದಾರರು ಈ ಹಿಂದೆ ತಮ್ಮ ಅರ್ಜಿ ತಿರಸ್ಕೃತಗೊಂಡಿದ್ದನ್ನು ಮರೆಮಾಚಿ ಕೋರ್ಟ್ಗೆ ತಪ್ಪು ಮಾಹಿತಿ ನೀಡಿದ್ದರು. ಸತ್ಯ ಮರೆಮಾಚಿದ ಅರ್ಜಿದಾರರ ನಡೆಯನ್ನು ಪೀಠವು ತೀವ್ರವಾಗಿ ಖಂಡಿಸಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!