ಪಶ್ಚಿಮ ಏಷ್ಯಾ ಸಂಘರ್ಷ ಆರಂಭವಾಗಿ ತಿಂಗಳುಗಳೇ ಕಳೆದಿವೆ. ಯುದ್ದ ನಿಲ್ಲುವ ಲಕ್ಷಣಗಳೇ ಕಾಣುತ್ತಿಲ್ಲ. ಬದಲಾಗಿ ಎಚ್ಚರಿಕೆ ಪ್ರತಿ ಎಚ್ಚರಿಕೆಗಳೇ ಹೆಚ್ಚಾಗಿವೆ.
೪೮ ಘಂಟೆಯೊಳಗಾಗಿ ಹೋರ್ಮುಜ್ ಜಲಸಂಧಿ ತೆರೆಯದಿದ್ದರೆ ವಿದ್ಯುತ್ ಸ್ಥಾವರಗಳ ಮೇಲೆ ದಾಳಿ ನಡೆಸುವುದಾಗಿ ಅಮೇರಿಕ ಎಚ್ಚರಿಕೆ ನೀಡಿದ ಬಳಿಕ ಇರಾನ್ ಕೂಡ ಈಗ ಅದೇ ಎಚ್ಚರಿಕೆ ನೀಡಿದ್ದು, ನಾವು ಕೂಡ ವಿದ್ಯುತ್ ಸ್ಥಾವರಗಳ ಮೇಲೆ ದಾಳಿ ನಡೆಸುವುದಾಗಿ ಇರಾನ್ ಕೂಡ ಅಮೇರಿಕಕ್ಕೆ ಎಚ್ಚರಿಕೆ ನೀಡಿದೆ.
ನಾವೂ ಕೂಡ ವಿದ್ಯುತ್ ಸ್ಥಾವರಗಳ ಮೇಲೆಯೇ ದಾಳಿ ನಡೆಸುತ್ತೇವೆ: ಇರಾನ್ ಪ್ರತಿ ಎಚ್ಚರಿಕೆ




