ಹುಬ್ಬಳ್ಳಿ:ಶೋಷಿತ ಸಮುದಾಯದ ಅನೇಕ ವರ್ಷಗಳ ಬೇಡಿಕೆ ಮೇರೆಗೆ ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ಬೌದ್ಧ ಅಭಿವೃದ್ಧಿ ನಿಗಮವನ್ನು ಘೋಷಣೆ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ. ನಿಗಮಕ್ಕೆ ೧ ಸಾವಿರ ಕೋಟಿ ಅನುದಾನ ನೀಡಬೇಕು ಎಂದು ವಿಶ್ವ ಬಹುಜನ ಮತ್ತು ಸಂವಿಧಾನದ ರಕ್ಷಾ ಸೇನಾದ ರಾಷ್ಟç ಘಟಕದ ಅಧ್ಯಕ್ಷ ಸದಾನಂದ ತೆರದಾಳ ಮತ್ತು ಕರ್ನಾಟಕ ಸಮತಾ ಸೈನಿಕ ದಳದ ರಾಜ್ಯ ಉಪಾಧ್ಯಕ್ಷ ಶಂಕರ ಅಜಮನಿ ತಿಳಿಸಿದರು.
ನಗರದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಬುದ್ಧ, ಬಸವ, ಅಂಬೇಡ್ಕರ್ ಅವರ ಸಿದ್ಧಾಂತದAತೆ ನಡೆಯುತ್ತಿದೆ. ಬಿ.ಆರ್. ಅಂಬೇಡ್ಕರ್ ಹಾಗೂ ಸಮಾಜ ಸುಧಾರಕರ ಪುಸ್ತಕವನ್ನು ಉರ್ದುಭಾಷೆಯಲ್ಲಿ ಅನುವಾದಿಸುವುದು. ಬಾಬಾ ಸಾಹೇಬರು ಕರ್ನಾಟಕದ ಕಲಬುರ್ಗಿ, ವಿಜಯಪುರ, ಬೆಳಗಾವಿ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಭೇಟಿ ನೀಡಿದ ಸ್ಥಳಗಳಿಗೆ ಬಿ.ಆರ್. ಅಂಬೇಡ್ಕರ್ ಹೆಸರಿನಲ್ಲಿ ಕ್ರೆöÊಸ್ತ ಸಂಸ್ಥೆ ಸಹಯೋಗದಲ್ಲಿ ಕ್ರೆöÊಸ್ತ ವಸತಿ ಶಾಲೆ ಪ್ರಾರಂಭ. ವಿದ್ಯಾರ್ಥಿ ಆಗುತ್ತಿರುವ ದೌರ್ಜನ್ಯ ತೆಗೆ ರೋಹಿತ್ ವೇಮುಲ ಕಾಯ್ದೆ, ಅಂತರಜಾತಿ ವಿವಾಹದ ದೌರ್ಜನ್ಯ ತಡೆಗೆ ಇವನಮ್ಮವ ಕಾಯ್ದೆ, ಬೌದ್ಧ ಧಮ್ಮಾಚಾರಿಗಳಿಗೆ ೬ ಸಾವಿರ ಗೌರವ ಧನ ನೀಡುವುದು ಸೇರಿ ಅನೇಕ ಘೋಷಣೆ ಮಾಡಿರುವುದು ಸಂತಸ ತಂದಿದೆ ಎಂದರು.
ಸರಕಾರ ಅಭಿವೃದ್ಧಿ ನಿಗಮಕ್ಕೆ ೧ ಸಾವಿರ ಕೋಟಿ ಅನುದಾನ ನೀಡಬೇಕು. ಶಹಾಪೂರದ ಬುದ್ಧ ಮಲಗಿದ ಬೆಟ್ಟದ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಬೇಕು. ಹುಬ್ಬಳ್ಳಿ ಸಮೀಪದ ಬೂದನಗುಡ್ಡದ ಹೆಸರನ್ನು ಬದಲಿಸಿ ಬುದ್ಧನ ಗುಡ್ಡವೆಂದು ನಾಮಕರಣ ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಎಸ್.ಪಿ.ಹುಬ್ಬಳ್ಳಿಕರ, ರಮೇಶ ವಡ್ಡಪಲ್ಲಿ, ಉಮೇಶ ಚಲವಾದಿ, ಇಂದುಮತಿ ಶಿರಗಾವಿ ಪಾಲ್ಗೊಂಡಿದ್ದರು
ವರದಿ:ಸುಧೀರ್ ಕುಲಕರ್ಣಿ




