Ad imageAd image

ಕಪ್ ಗೆಲ್ಲಲು ಮತ್ತೇ ಯತ್ನಿಸಲಿದೆ ಪಂಜಾಬ್ ಕಿಂಗ್ಸ್

Bharath Vaibhav
ಕಪ್ ಗೆಲ್ಲಲು ಮತ್ತೇ ಯತ್ನಿಸಲಿದೆ ಪಂಜಾಬ್ ಕಿಂಗ್ಸ್
WhatsApp Group Join Now
Telegram Group Join Now

ಕಳೆದ ಬಾರಿಯ (೨೦೨೫) ೧೮ ನೇ ಐಪಿಎಲ್ ಪಂದ್ಯಾವಳಿಯಲ್ಲಿ ಇನ್ನೆನೂ ಕಪ್ ಗೆದ್ದೇ ಬಿಟ್ಟರು ಎನ್ನುವಷ್ಟರಲ್ಲಿ ಫೈನಲ್‌ನಲ್ಲಿ ನಿರಾಶೆ ಅನುಭವಿಸಿದ್ದ ಪಂಜಾಬ್ ಕಿಂಗ್ಸ್ ಈ ಬಾರಿ ೧೯ ನೇ ಎಡಿಷನ್‌ನಲ್ಲಿ ಕಪ್ ಗೆದ್ದುಕೊಳ್ಳಲು ಯತ್ನ ನಡೆಸಲಿದೆ.
ಬ್ಯಾಟಿಂಗ್ ಬಲ, ಉತ್ತಮ ಸ್ಪಿನ್ನರ್‌ಗಳ ಸಹಾಯದೊಂದಿಗೆ ಕಳೆದ ಬಾರಿ ಫೈನಲ್‌ವರೆಗೆ ತಲುಪಿದ್ದ ಶ್ರೇಯಸ್ ಅಯ್ಯರ್ ಬಳಗ ಈ ಬಾರಿ ಮತ್ತದೇ ಉತ್ಸಾಹದಿಂದ ಕಣಕ್ಕೆ ಇಳಿಯಲು ತಯಾರಿ ನಡೆಸಿದೆ.
ಈ ವರೆಗಿನ ಐಪಿಎಲ್ ಪಂದ್ಯಾವಳಿಯಲ್ಲಿ ಕಳೆದ ಬಾರಿಯ ಪ್ರದರ್ಶನ ಬಿಟ್ಟರೇ ಪಂಜಾಬ್ ಕಿಂಗ್ಸ್ ( ಆಗಿನ ಕಿಂಗ್ಸ್ ಇಲೆವೆನ್ ಪಂಜಾಬ್) ತನ್ನನ್ನು ತಾನು ಪಂದ್ಯಾವಳಿಯಲ್ಲಿ ಗುರುತಿಸಕೊಳ್ಳುವ ಹಾಗೂ ಗಮನ ಸೆಳೆಯುವ ಪ್ರದರ್ಶನ ನೀಡಿರಲಿಲ್ಲ.
ತಂಡದಲ್ಲಿ ಉತ್ತಮ ಆಟಗಾರರಿಗೇನೂ ಕಮ್ಮಿ ಇಲ್ಲ. ಬ್ಯಾಟಿಂಗ್‌ನಲ್ಲಿ ಪ್ರಿಯಾನ್ಸ್ ಆರ್ಯ, ಪ್ರಬ್‌ಸಿಮರನ್ ಸಿಂಗ್, ಶ್ರೇಯಸ್ ಅಯ್ಯರ ಹಾಗೂ ಮಾರ್ಕಸ್ ಸ್ಟೋನಿಸ್ ಅವರ ರೂಪದಲ್ಲಿ ಉತ್ತಮ ಬ್ಯಾಟಿಂಗ್ ಬಲ ಹಾಗೂ ಅರ್ಷದೀಪ್ ಮುಂದಾಳತ್ವದಲ್ಲಿ ಉತ್ತಮ ಬೌಲಿಂಗ್‌ವನ್ನು ಹೊಂದಿದೆ.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!