ನವದೆಹಲಿ: ಇಲ್ಲಿನ ದೆಹಲಿ ವಿಧಾನಸಭೆ ಕಟ್ಟಡ, ಮೆಟ್ರೋ ಸ್ಟೇಷನ್ಗಳನ್ನು ಬಾಂಬ್ ಇಟ್ಟು ಸ್ಪೋಟಿಸಲಾಗುವುದು ಎಂಬ ಬೆದರಿಕೆಯ ಈಮೇಲ್ ಕರೆಯು ದೆಹಲಿ ವಿಧಾನ ಸಭೆ ಸ್ಪೀಕರ್ ವಿಜೇಂದ್ರ ಗುಪ್ತಾ ಅವರಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ ಮೊದಲ ಬಾಂಬ್ ಬೆದರಿಕೆ ಸಂದೇಶವು ಬೆಳಿಗ್ಗೆ ೭:೨೮ ನಿಮಿಷಕ್ಕೆ ವಿಧಾನ ಸಭೆ ಕಚೇರಿ ಈ ಮೇಲ್ ಅಡ್ರೆಸ್ಗೆ ಬಂದಿದೆ. ಎರಡನೇ ಬೆದರಿಕೆ ಸಂದೇಶವು ನೇರವಾಗಿ ವಿಧಾನ ಸಭೆ ಸ್ಪೀಕರ್ ಅವರಿಗೆ ೭:೪೯ ನಿಮಿಷಕ್ಕೆ ಅಂದರೆ ಮೊದಲ ಸಂದೇಶ ಬಂದ ೨೧ ನಿಮಿಷಕ್ಕೆ ಬಂದಿದೆ.
ದೆಹಲಿ ವಿಧಾನ ಸಭೆ ಕಟ್ಟಡವನ್ನು ೧:೧೧ ನಿಮಿಷಕ್ಕೆ ಹಾಗೂ ಮೆಟ್ರೋ ಸ್ಟೇಷನ್ ಅನ್ನು ಮುಂಜಾನೆ ೯:೧೧ ಕ್ಕೆ ಸ್ಫೋಟಿಸಲಾಗುವುದು ಎಂದು ಎರಡೂ ಸಂದೇಶಗಳ ಮೂಲಕ ಬೆದರಿಕೆ ಹಾಕಲಾಗಿದೆ.
ದೆಹಲಿ ವಿಧಾನಸಭೆ ಕಟ್ಟಡ, ಮೆಟ್ರೋ ಸ್ಟೇಷನ್ಗೆ ಬಾಂಬ್ ಬೆದರಿಕೆ ಸಂದೇಶ




