ಕಾಕತಿ : ದಿ.23/03/2026 ರಂದು ಸಂಜೆ ಬೆಳಗಾವಿ ಶಹರದ ಕಾಕತಿ ವೇಸ್ ಸಮೀಪದ ಕಂಗ್ರಾಳ್ ಗಲ್ಲಿಯಲ್ಲಿ ಸುನಿಲ್ ಸರನೋಬತ ರವರ ಮನೆಯ ಆವರಣದಲ್ಲಿ ಕೃತಿಕ ಸಂಜೆಯ ಭಾಡಗೆ ಎಂಬಾತನು 254 ಗ್ರಾಂ ಒಣ ಗಾಂಜಾವನ್ನು ಅಕ್ರಮವಾಗಿ ಮಾರಾಟಕ್ಕೋಸ್ಕರ ಹೊಂದಿರುವುದು ಕಂಡು ಬಂದಿದ್ದು ಆಪಾದಿತನಾದ ಕೃತಿಕ ಸಂಜೆಯ ಭಾಡಗೆ ಸಾಕೀನ್ ಬೆಳಗಾವಿ ಈತನನ್ನು ಬಂಧಿಸಿ ದ್ವಿಚಕ್ರ ವಾಹನ ಸಂಖ್ಯೆ KA22HA 5758 ಮತ್ತು 254ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡು ಆಪಾದಿತನಿಂದ ಗಾಂಜಾ ಪಡೆದು ಸೇವನೆ ಮಾಡುತ್ತಿದ್ದ ಯುವರಾಜ್ ಸುನಿಲ್ ಸರ್ನೋ ಭತ್ age 34 year, ಕಂಗ್ರಾಲ್ ಗಲ್ಲಿ ಬೆಳಗಾವಿ ಈತನನ್ನು ಸಹ ದಸ್ತಗಿರಿ ಪಡಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿ ಗಾಂಜಾ ಸೇವನೆ ದೃಢಪಟ್ಟ ಕಾರಣ ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.
ಸದರಿ ದಾಳಿಯನ್ನು ಮಾನ್ಯರುಗಳಾದ ಅಪರ ಅಧಿಕಾರಿ ಆಯುಕ್ತರು ಬೆಳಗಾವಿ, ಅಬಕಾರಿ ಜಂಟಿ ಆಯುಕ್ತರು ಬೆಳಗಾವಿ ವಿಭಾಗ, ಅಬಕಾರಿ ಉಪಯುಕ್ತರು ಬೆಳಗಾವಿ ದಕ್ಷಿಣ ಜಿಲ್ಲೆ ಇವರುಗಳ ಆದೇಶದಂತೆ ಸದರಿ ದಾಳಿಯಲ್ಲಿ ರವಿ ಮುರಗೋಡ ಅಬಕಾರಿ ಉಪ ಅಧೀಕ್ಷಕರು ಬೆಳಗಾವಿ ಉಪ ವಿಭಾಗ ವಲಯ 3 ರ ನಿರೀಕ್ಷಕರಾದ ಸುನಿಲ್ ಕುಮಾರ್ ಡಿ, ಮತ್ತು ಉಪ ನಿರೀಕ್ಷಕರಾದ ವಿನಯ ಮುಶನ್ನಶರ ಸಿಬ್ಬಂದಿಯವರಾದ ವಿನಾಯಕ್ ಬೋರನ್ನವರ್ ಸಿದರಾಮ ಜಮಾದಾರ್ ಉಳವಪ್ಪ ತುಳಜಿ ಶಿವಾನಂದ ಕರಬನ್ನವರ ಹಾಜರಿದ್ದರು . ಸದರಿ ಅಪಾದಿತರ ವಿರುದ್ಧ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗುತ್ತದೆ. ಪ್ರಕರಣ ಗಳ ಒಟ್ಟು ಮೌಲ್ಯ ರೂ 73000ಗಳು.
ವರದಿ : ರಾಜು ಮುಂಡೆ




