ಬೆಳಗಾವಿ: ಹುಕ್ಕೇರಿ ಪಟ್ಟಣದಲ್ಲಿ ಹೊಟೇಲ್ ಉದ್ಯಮಿ ಒಬ್ಬರು ಸಾಲದ ಸುಳಿಯಲ್ಲಿ ಸಿಲುಕಿ, ಬಡ್ಡಿ ಕಾಟ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಘಟನೆ ದುಃಖಕರವಾಗಿ ನಡೆದಿದೆ.
ಹುಕ್ಕೇರಿ ಹಳೇ ಬಸ್ ನಿಲ್ದಾಣದ ಸಮೀಪ ಹನುಮಾನ್ ಹೊಟೇಲ್ ಮಾಲೀಕ ರಾಮ ಹಳ್ಳೂರಿ (ವಯಸ್ಸು ಸುಮಾರು 45) ಅವರು ತಮ್ಮ ಹೊಟೇಲ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಘಟನೆಯ ವಿವರ :
ಕಳೆದ ಹಲವು ದಿನಗಳಿಂದಲೂ ರಾಮ ಹಳ್ಳೂರಿ ಅವರ ಹೊಟೇಲ್ಗೆ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಸಿಗುತ್ತಿರಲಿಲ್ಲ. ಸಿಲಿಂಡರ್ ಇಲ್ಲದ ಕಾರಣ ಹೊಟೇಲ್ನ್ನು ಬಂದ್ ಮಾಡಬೇಕಾಯಿತು.
ಹೊಟೇಲ್ ಬಂದ್ ಆದ ನಂತರ ಆದಾಯ ಕಡಿಮೆಯಾಗಿ, ಬಡ್ಡಿ ಮತ್ತು ಸಾಲದ ಕಂತುಗಳು ತೀರಿಸಲು ಸಾಧ್ಯವಾಗಲಿಲ್ಲ. ಸಾಲದ ಬಡ್ಡಿ ಕಾಟ ತಾಳಲಾರದೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪರಿವಾರದವರು ಹೇಳುತ್ತಿದ್ದಾರೆ.




