Ad imageAd image

ಐನಾಪುರ ಪಟ್ಟಣ ಪಂಚಾಯತಗೆ ನೂತನ ಅಧ್ಯಕ್ಷ ,ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ

Bharath Vaibhav
ಐನಾಪುರ ಪಟ್ಟಣ ಪಂಚಾಯತಗೆ ನೂತನ ಅಧ್ಯಕ್ಷ ,ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ
WhatsApp Group Join Now
Telegram Group Join Now

ಐನಾಪುರ:ಪಟ್ಟಣ ಪಂಚಾಯತಿ  ಮೂರನೇಯ ಅವಧಿಗೆ ಐನಾಪೂರ ಪಟ್ಟಣ ಪಂಚಾಯತ ಅಧ್ಯಕ್ಷರಾಗಿ  ಕಾಂಗ್ರೆಸ್ ಪಕ್ಷದ ಲಕ್ಷ್ಮವ್ವ ಸುರೇಶ ಅಡಿಶೇರಿ ಹಾಗು ಉಪಾಧ್ಯಕ್ಷ ರಾಗಿ  ಜಯಶ್ರೀ ವಿಜಯ ಹರಳೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ .
ಮಂಗಳವಾರ ತಾಲ್ಲೂಕಿನ ಐನಾಪುರ ಪಟ್ಟಣ ಪಂಚಾಯತಿ ಸಭಾಭವನದಲ್ಲಿ ಅಧ್ಯಕ್ಷಉಪಾಧ್ಯಕ್ಷ ಚುನಾವಣೆಯಆಯ್ಕೆಯ ಪ್ರಕ್ರಿಯೆ ನೆರವೇರಿತು.ಈ ಹಿಂದೆ ಅಧ್ಯಕ್ಷ ಸ್ಥಾನದಲ್ಲಿದ ಕಸ್ತೂರಿ ಮಡಿವಾಳ ,ಹಾಗು ಉಪಾಧ್ಯಕ್ಷ ರತ್ನವ್ವ ಮಾದರ
ಅವರು ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷ ತೆರವಾಗಿದ್ದ ಸ್ಥಾನಕ್ಕೆ ಕಾಂಗ್ರೆಸ್‌ ಪಕ್ಷದಿಂದ ಇಬ್ಬರು ಪಪಂ ಮಹಿಳಾ ಸದಸ್ಯರಾದ ಲಕ್ಷ್ಮವ್ವ ಸುರೇಶ ಅಡಿಶೇರಿ,ಜಯಶ್ರೀ ವಿಜಯ ಹರಳೆ ಇಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ. ಅಧ್ಯಕ್ಷ ,ಉಪಾಧ್ಯಕ್ಷ
ಸ್ಥಾನಕ್ಕೆ ಅವಿರೋದ ಆಯ್ಕೆಯನ್ನು ಚುನಾವಣಾ ಅಧಿಕಾರಿ ತಹಶೀಲ್ದಾರ್  ರವಿಂದ್ರ ಹಾದಿಮನಿ ಘೊಷಿಸಿದ್ದರು.19 ಸದಸ್ಯರನ್ನು ಹೊಂದಿರುವ ಪಟ್ಟಣ ಪಂಚಾಯತಿಯಲ್ಲಿ ಕಾಂಗ್ರೆಸ್ ಪಕ್ಷದ  12 ಸದಸ್ಯರು ಸಭೆಯಲ್ಲಿ ಹಾಜರಾಗಿ. ಬೆಂಬಲ ಸೂಚಿಸಿದರು.ಸನ್ಮಾನ ಸ್ವೀಕರಿಸಿ ನೂತನ ಪಪಂ ಅಧ್ಯಕ್ಷ ಲಕ್ಷ್ಮವ್ವ ಸುರೇಶ ಅಡಿಶೇರಿ ಮಾತನಾಡಿ, ಯಾವುದೇ ರಾಜಕಾರಣ ಮಾಡದೇ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ ಎಂದು  ಮತ್ತು ತಮ್ಮ ಆಯ್ಕೆಗೆ ಶ್ರಮಿಸಿದ ಎಲ್ಲ ಸದಸ್ಯರಿಗೆ ಧನ್ಯವಾದ ಹೇಳಿದರು.
ಪಪಂ ಸದಸ್ಯ  ಕಾಂಗ್ರೆಸ ಮುಖಂಡ ಪ್ರವೀಣಗಾಣಿಗೇರ ಮಾತನಾಡಿ ನಮ್ಮ ಪಟ್ಟಣ ಪಂಚಾಯತಿಯು ಕಾಂಗ್ರೆಸ್ ಪಕ್ಷದ ಹಿಡಿತದಲ್ಲಿದ್ದು ಮೂರನೇಯ ಅವಧಿಗೂ ಕೂಡ ನಮ್ಮ ಪಕ್ಷದವರೇ ಆದ ಲಕ್ಷ್ಮವ್ವ ಸುರೇಶ ಅಡಿಶೇರಿ ಅದ್ಯಕ್ಷ ಹಾಗೂ ಉಪಾಧ್ಯಕ್ಷ ಜಯಶ್ರೀ ವಿಜಯ ಹರಳೆ ಇವರು ಆಯ್ಕೆಯಾಗಿದ್ದು ತುಂಬಾ ಸಂತೋಷ ವಿಷಯ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೋಸ್ಕರ ಮೂಲಭೂತ ಸಮಸ್ಯೆಗಳಿಗೆ ಒತ್ತುಕೊಟ್ಟು ಪಕ್ಷಪಾತವಿಲ್ಲದೆ ಪ್ರಾಮಾಣಿಕವಾಗಿ ಅಧ್ಯಕ್ಷರು,ಉಪಾಧ್ಯಕ್ಷರು ಕಾರ್ಯನಿರ್ವಹಿಸುತ್ತಾರೆ ಅವರಿಗೆ ನಮ್ಮ ಎಲ್ಲ ಪಂಚಾಯಿತಿ ಹಾಗೂ ಗ್ರಾಮಸ್ಥರ ಬೆಂಬಲವಿದೆಯೆಂದು ತಿಳಿಸಿದರು.
ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ  ಮಹಾಂತೇಶ ಕವಲಾಪುರೆ ,ಮಹಾಂತೇಶ ಬಾದವಾಡಗಿ,ಗ್ರಾಮಲೆಕ್ಕಾಧಿಕಾರಿ ಪ್ರಕಾಶ ಪುಠಾಣಿ,ಚುನಾವಣೆಯ ಕಾರ್ಯನಿರ್ವಹಿಸಿದರು.ಕಾಗವಾಡ ಪೊಲೀಸ್ ಠಾಣೆಯ ಸಿಬ್ಬಂದಿ ಬಂದೋಬಸ್ತನಲ್ಲಿ ಚುನಾವಣೆ ನೆರವೇರಿತು.
ಇ ಸಂದರ್ಭದಲ್ಲಿ ಪಪಂ ಮುಖ್ಯಾಧಿಕಾರಿ ಮಹಾಂತೇಶ ಕವಲಾಪುರೆ,ಪಪಂ ಸದಸ್ಯ ಪ್ರವೀಣ ಗಾಣಿಗೇರ,ಅರುಣ ಗಾಣಿಗೇರ,  ಪಪಂ ಮಾಜಿ ಅಧ್ಯಕ್ಷ ಕಸ್ತೂರಿ ಮಡಿವಾಳ ಸರೋಜಿನಿ ಗಾಣಿಗೇರ,ರತ್ನವ್ವ ಮಾದರ, ಸಂಜಯ ಬಿರಡಿ, , ಕುಮಾರ ಜಯಕರ, ರಾಜು ಹರಳೆ, ಧರೆಪ್ಪ ಹರಳೆ , ದಾದಾ ಜೇಂತೆನವರ, ಸಂಜು ಕುಸನಾಳೆ,ನವೀನ ಗಾಣಿಗೇರ, ಗುರುರಾಜ ಮಡಿವಾಳ ,ಕುಮಾರ ಜಯಕರ,ಸುರೇಶ ಅಡಿಶೇರಿ, ಪ್ರಕಾಶ ಚಿನಗಿ,ಸಿದ್ದು ಅಡಿಶೇರಿ,ಶಾಬು ಅಡಿಶೇರಿ, ಪ್ರಕಾಶ ಗಾಣಿಗೇರ, ಸೇರಿದಂತೆ  ಇತರರು ಇದ್ದರು.
ವರದಿ :ಮುರಗೇಶ ಗಸ್ತಿ 

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!