ನಿಡಗುಂದಿ : ಗರ್ಭಕಂಠಕ ಕ್ಯಾನ್ಸರ್ ತಡೆಗಟ್ಟುವ ಉದ್ದೇಶದಿಂದ ಹೆಣ್ಣು ಮಕ್ಕಳಿಗೆ ನೀಡಲಾಗುವ HPV ಲಸಿಕೆ ಅಭಿಯಾನಕ್ಕೆ ನಿಡಗುಂದಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಾಲನೆ ನೀಡಲಾಯಿತು.

14 ರಿಂದ 15 ವರ್ಷದ ಹೆಣ್ಣು ಮಕ್ಕಳಿಗೆ ನೀಡಲಾಗುವ ಎಚ್‌ಪಿವಿ (HPV) ಲಸಿಕೆ ಕಾರ್ಯಕ್ರಮವನ್ನು ವೈದ್ಯಾಧಿಕಾರಿಣಿ ಡಾ. ಮಲ್ಲಮ್ಮ ರೆಡ್ಡಿ ಅವರು ಚಾಲನೆ ನಿಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, 14 ರಿಂದ 15 ವರ್ಷದ ಎಲ್ಲಾ ಹೆಣ್ಣು ಮಕ್ಕಳು ಕಡ್ಡಾಯವಾಗಿ ಈ ಲಸಿಕೆಯನ್ನು ಪಡೆಯಬೇಕು. ಈ ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಗರ್ಭಕಂಠಕ ಕ್ಯಾನ್ಸರ್‌ನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು ಎಂದು ತಿಳಿಸಿದರು. ಸಾರ್ವಜನಿಕರು ಈ ಬಗ್ಗೆ ಅರಿವು ಪಡೆದುಕೊಂಡು ತಮ್ಮ ಮಕ್ಕಳನ್ನು ಸಮೀಪದ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದು ಲಸಿಕೆ ಪಡೆಯುವಂತೆ ಮನವಿ ಮಾಡಿದರು.
ಲಸಿಕೆಯನ್ನು ಮೊದಲಿಗೆ ಅಂಜನ ಎಸ್. ಕೋಳಕಾರ್ ಮತ್ತು ಮಾನಸಾ ಅವರು ಪಡೆದುಕೊಂಡರು.
ಈ ಕಾರ್ಯಕ್ರಮದಲ್ಲಿ ಡಾ. ಶಿವಾನಂದ, ಆರ್.ಬಿ. ಮಾಶೆಟ್ಟಿ, ಸಂತೋಷ್ ನಿಂಬರಗಿ, ಗೌರಮ್ಮ ನಾಗರಾಳ, ಸವಿತಾ, ಕಂಡೆಪ್ಪ, ಕಾಸಿಂ.ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.
ವರದಿ :ಅಲಿ ಮಕಾನದಾರ.




