ವಿಜಯಪುರ: ಸಿಂದಗಿ ತಾಲ್ಲೂಕಿನ ಹಂದಿಗನೂರ ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳು ಓದುತ್ತಿದ್ದಾರೆ. ಆ ಶಾಲೆಯಲ್ಲಿ ನೀರಿನ ಸೌಕರ್ಯವಿಲ್ಲದೆ ಅಲ್ಲಿನ ಮಕ್ಕಳು ತುಂಬಾ ತೊಂದರೆ ಅನುಭವಿಸುತ್ತಿದ್ದರು. ನೀರು ಸಾಲದೆ, ಮಕ್ಕಳು ತೊಂದರೆ ಪಡುತ್ತಿದ್ದರು. ವರ್ಷಗಳಿಂದ ಇಂಥ ತೊಂದರೆಯನ್ನು ಅನುಭವಿಸುತ್ತಿದ್ದ ಆ ಮಕ್ಕಳ ಸ್ಥಿತಿಯನ್ನು ನೋಡಿದ ಆದರ್ಶ ಶಿಕ್ಷಕ ವೆಂಕಟಗಿರೀಶ ಆರ್ ಕುಲಕರ್ಣಿ ಅವರು ತಮ್ಮ ಸ್ವಂತ ಖರ್ಚಿನಿಂದ ಕೊಳವೆಬಾವಿ ತೋಡಿಸಿ ನೀರಿನ ದಾಹ ತಣಿಸಿದ ಆಧುನಿಕ ಭಗೀರಥರು ಎಂದರೆ ತಪ್ಪಾಗಲಾರದು.
ಆದರ್ಶ ಶಿಕ್ಷಕ ವಿ ಆರ್ ಕುಲಕರ್ಣಿ ಗುರುಗಳು ಅವರು ಮಾತನಾಡಿ ಸರ್ಕಾರಿ ಶಾಲೆಯ ಮಕ್ಕಳೇ ನನ್ನ ಮಕ್ಕಳು; ಅವರ ಸೇವೆಗೆ ಹಣ ನೀಡಿದ್ದು ದೊಡ್ಡ ಕೆಲಸವೇನಲ್ಲ: ನಾನು ಶಿಕ್ಷಕ ವೃತ್ತಿ ಕೇವಲ ಪಾಠ ಮಾಡುವುದಕ್ಕಷ್ಟೇ ಸೀಮಿತವಲ್ಲ, ಅದು ಸಮಾಜಮುಖಿ ಸೇವೆಯೂ ಹೌದು ಎಂಬುದನ್ನು ಇಲ್ಲಿನ ಶಿಕ್ಷಕರೊಬ್ಬರು ತಮ್ಮ ನಿಸ್ವಾರ್ಥ ಕಾರ್ಯದ ಮೂಲಕ ಸಾಬೀತುಪಡಿಸಿದ್ದಾರೆ. ಗ್ರಾಮದ ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಶಾಲೆಯ ಮುಖ್ಯಗುರು ವಿ ಆರ್ ಕುಲಕರ್ಣಿ ಅವರು ಶಾಲಾ ಮಕ್ಕಳ ಕುಡಿಯುವ ನೀರಿನ ಸಮಸ್ಯೆಯನ್ನು ಕಂಡು ಮರುಗಿದ್ದಲ್ಲದೆ, ಅದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ಮೂಲಕ ಮಾದರಿಯಾಗಿದ್ದಾರೆ.
ತಮ್ಮದೇ 50,000 ರೂ. ದೇಣಿಗೆ ನೀಡುವದಾಗಿ ಮೊದಲು ಹೇಳಿದರು ತದನಂತರ 66000 ರೂಪಾಯಿ ಖರ್ಚು ಮಾಡಿರುವ ಗುರುಗಳು.
ವಿಜಯಪುರ ಜಿಲ್ಲಾ ಶಿಕ್ಷಣ ಇಲಾಖೆಯಿಂದ ‘ಜಿಲ್ಲಾ ಆದರ್ಶ ಶಿಕ್ಷಕ’ ಪ್ರಶಸ್ತಿ ಪುರಸ್ಕೃತರಾಗಿರುವ ವೆಂಕಟಗಿರೀಶ ಕುಲಕರ್ಣಿ ಅವರು, ಕೇವಲ ಪ್ರಶಸ್ತಿಯಿಂದ ತೃಪ್ತರಾಗದೆ ಶಾಲೆಯ ಮಕ್ಕಳ ಹಿತದೃಷ್ಟಿಯಿಂದ ತಮ್ಮ ಸ್ವಂತ ಗಳಿಕೆಯ 66,000 ರೂಪಾಯಿಗಳನ್ನು ನೀರಿನ ವ್ಯವಸ್ಥೆಗಾಗಿ ವಿನಿಯೋಗಿಸಿದ್ದಾರೆ. ಇವರಿಂದಾಗಿ ವಿದ್ಯಾರ್ಥಿನಿಯರ ಬಹುದಿನಗಳ ನೀರಿನ ದಾಹಕ್ಕೆ ಈಗ ಪರಿಹಾರ ಸಿಕ್ಕಂತಾಗಿದೆ.
“ಮಕ್ಕಳ ಬೆಳವಣಿಗೆಯೇ ನನ್ನ ಮೂಲ ಮಂತ್ರ” ತಮ್ಮ ಈ ಸೇವಾ ಕಾರ್ಯದ ಕುರಿತು ಭಾವನಾತ್ಮಕವಾಗಿ “ಈ ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳು ನನ್ನ ಸ್ವಂತ ಮಕ್ಕಳಿದ್ದ ಹಾಗೆ. ಆ ಮಕ್ಕಳಿಗೆ ಯಾವುದೇ ಕೊರತೆಯಾಗಬಾರದು. ಮಕ್ಕಳ ಬೆಳವಣಿಗೆಯೇ ನನ್ನ ಮೂಲ ಮಂತ್ರವಾಗಿದೆ. ಅಂತಹ ಮಕ್ಕಳಿಗಾಗಿ ಸೇವೆ ಮಾಡುವುದು ಅಷ್ಟೇನು ದೊಡ್ಡ ಕೆಲಸವಲ್ಲ” ಎಂದು ವಿನಮ್ರವಾಗಿ ತಿಳಿಸಿದ್ದಾರೆ. ಇವರ ಈ ಮಾತುಗಳು ಶಿಕ್ಷಕ ವೃಂದದ ಘನತೆಯನ್ನು ಮತ್ತಷ್ಟು ಹೆಚ್ಚಿಸಿವೆ. ಕೊಳವೆ ಬಾವಿಗೆ ಮೋಟರ ಪಾಯಿಪ್ ಇತರೆ ಖರ್ಚು ಶಾಲಾ ಎಸ್ ಡಿ ಎಂ ಸಿ ಸಮಿತಿ ಮಾಡಲು ಮುಂದಾಗಿದ್ದಾರೆ ಎಂದು ಹೇಳಲು ಸಂತೋಷವಾಗುತ್ತದೆ .
ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳ ಪ್ರಶಂಸೆ ಈ ಉದಾತ್ತ ಕಾರ್ಯವನ್ನು ಸಿಂದಗಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಮಾಹಾಂತೇಶ ಯಡ್ರಾಮಿ , ಕ್ಷೇತ್ರ ಸಮನ್ವಯಾಧಿಕಾರಿ ಆಯ್ ಎಸ್ ಟಕ್ಕೆ ಹಾಗೂ ತಾಲ್ಲೂಕು ಅಕ್ಷರ ದಾಸೋಹ ನಿರ್ಧೇಶಕ ಅರವೀಂದ್ರ ಡೊಣ್ಣೂರ ತಾಲೂಕಿನ ಸಮಸ್ತ ಶಿಕ್ಷಕ ವೃಂದದವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. “ಕೊಟ್ಟಿದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ” ಎನ್ನುವ ಸರ್ವಜ್ಞನ ವಚನದಂತೆ ಬದುಕುತ್ತಿರುವ ವಿ ಆರ್ ಕುಲಕರ್ಣಿ ಅವರ ಸೇವೆ ಅಭಿನಂದನೀಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಿಗ್ ಸಲ್ಯೂಟ್ ಹಾಗೂ ಹಾರೈಕೆ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಾಳಜಿ ವಹಿಸಿರುವ ವೆಂಕಟಗಿರೀಶ ಆರ್ ಕುಲಕರ್ಣಿ ಅವರಿಗೆ ಅಖಂಡ ಸಿಂದಗಿ ತಾಲೂಕಿನ ಶಿಕ್ಷಕ ಬಳಗ ಹಾಗೂ ಹಂದಿಗನೂರು ಗ್ರಾಮಸ್ಥರು ‘ಬಿಗ್ ಸಲ್ಯೂಟ್’ ಹೊಡೆದಿದ್ದಾರೆ. ಶ್ರೀ ಗುರುರಾಯರ, ಕೊರವಾರೇಶನ ಹಾಗೂ ಬಸವಾದಿ ಶರಣರ ಕೃಪೆ ಸದಾ ಇವರ ಮತ್ತು ಇವರ ಕುಟುಂಬದ ಮೇಲೆ ಇರಲಿ ಎಂದು ನಾಡಿನ ಜನತೆ ಹಾರೈಸಿದ್ದಾರೆ.
ವರದಿ: ಸಾಯಬಣ್ಣ ಮಾದರ




