Ad imageAd image

ಸಾವಿನಲ್ಲೂ ಸಾರ್ಥಕತೆ ಮೆರೆದ 10 ವರ್ಷದ ಬಾಲಕ: ಪುನೀತ್‌ರಂತೆ ಅಂಧರ ಬಾಳಿಗೆ ಬೆಳಕಾದ ಆಕಾಶ

Bharath Vaibhav
ಸಾವಿನಲ್ಲೂ ಸಾರ್ಥಕತೆ ಮೆರೆದ 10 ವರ್ಷದ ಬಾಲಕ: ಪುನೀತ್‌ರಂತೆ ಅಂಧರ ಬಾಳಿಗೆ ಬೆಳಕಾದ ಆಕಾಶ
WhatsApp Group Join Now
Telegram Group Join Now

ವಿಜಯಪುರ : ಸಾವಿನಲ್ಲೂ ಸಾರ್ಥಕತೆ ಮೆರೆದ ಮೂಲತಃ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಢವಳಗಿ ಗ್ರಾಮದ ಮಲ್ಲಪ್ಪ ಮತ್ತು ಸುಜಾತ ದಂಪತಿ ಪುತ್ರ ಆಕಾಶ, ಅಂದರ ಪಾಲಿನ ದೇವರೆಂದೇ ಕರೆಯಲ್ಪಡುವ ಈತ ಕೇವಲ ಹತ್ತು ವರ್ಷದವನಾಗಿದ್ದು ರಸ್ತೆ ಅಪಘಾತ ದುರ್ಘಟನೆ ವೇಳೆಯಲ್ಲಿ ಸಾವನಪ್ಪಿದ್ದು, ಆತನ ನೇತ್ರವನ್ನು ನಗರದ ಬಿ.ಎಲ್.ಡಿ.ಇ (ಬಿ.ಎಂ ಪಾಟೀಲ) ಖಾಸಗಿ ಆಸ್ಪತ್ರೆ ಮೂಲಕ ನೀಡಿ ಅಂದರಿಗೆ ಮಾನವೀಯತೆ ತೊರೆದಿದ್ದಾನೆ. ಹುಟ್ಟು ಉಚಿತ ಸಾವು ಖಚಿತ ಅನ್ನೊ ಮಾತಿದೆ. ಅದು ಸತ್ಯ ಕೂಡ. ಮನುಷ್ಯನು ಬದುಕಿದ್ದಾಗ ಇನ್ನೊಬ್ಬರ ಒಳಿತಿಗಾಗಿ ಬದುಕುವುದು ನಿಸ್ವಾರ್ಥ ಬದುಕು. ಸತ್ತಾಗ ಇನ್ನೊಬ್ಬರಿಗೆ ಬಾಳಿಗೆ ಬೆಳಕಾದರೆ ಅದು ಮಾನವೀಯತೆ ಬದುಕು. ಇದನ್ನು 5ನೇ ತರಗತಿ ಬಾಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾನೆ. ಮೆದುಳು ಸಂಪೂರ್ಣ ನಿಷ್ಕ್ರಿಯವಾಗಿದ್ದರಿಂದ ನೇತ್ರದಾನ ಮಾಡಿ ಅಂಧರ ಬಾಳಿಗೆ ಬೆಳಕು ನೀಡಿದ್ದಾನೆ ಆಕಾಶ(10).

ಘಟನೆ : ಕಳೆದ ಮಾರ್ಚ 22 ರಂದು ಸಂಭವಿಸಿದ ಅಪಘಾತದಿಂದ ತೀವ್ರ ಗಾಯಗೊಂಡಿದ್ದ. ಬಾಲಕನನ್ನು ಬಿ.ಎಲ್.ಡಿ.ಇ ಖಾಸಗಿ ಆಸ್ಪತ್ರೆಗೆ ದಾಖಲಿಸಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಬಾಲಕನ ಮೆದುಳು ನಿಷ್ಕ್ರಿಯಗೊಂಡಿದ್ದ ಪರಿಣಾಮ, ಇನ್ನು ತಮ್ಮ ಮಗು ಉಳಿಯಲ್ಲ ಅಂತ ವೈದ್ಯರೇ ಖಚಿತಪಡಿಸಿದ ಮೇಲೆ ಆ ಕುಟುಂಬದವರು ನಮ್ಮ ಮಗು ಇನ್ನೂ ಬದುಕಲು ಸಾದ್ಯವಿಲ್ಲ ಅಂತ ಸುಮ್ಮನಾಗಿದ್ದರು. ಆದರೆ ನಮ್ಮ ಮಗುವಿನ ಅಂಗಾಂಗ ಕಣ್ಣಾದರೂ(ನೇತ್ರಗಳು) ಅಂಧರ ಬಾಳಿಗೆ ಬೆಳಕಾಗಲಿ ಎಂದು ನಿರ್ಧರಿಸಿದ್ದು, ಮಗುವಿನ ಸಾವಿನ ನೋವಿನಲ್ಲು ಆದರೆ ಬಾಲಕನ ಪ್ರತಿಯೊಂದು ಅಂಗಾಂಗ ದಾನ ಮಾಡುವ ಉದಾತ್ತ ಮನಸ್ಸಿಯ ಕುಟುಂಬಸ್ಥರ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತವಾಯಿತು. ಬಾಲಕನ ಅತೀ ಹೆಚ್ಚು ರಕ್ತದೊತ್ತಡದಿಂದ ದೇಹ ಕ್ಷೀಣವಾಗಿದ್ದ ಪರಿಣಾಮ ಇತರೆ ಅಂಗಾಂಗ ಪಡೆಯಲು ವೈದ್ಯರಿಗೆ ಸಾಧ್ಯವಾಗಲಿಲ್ಲ. ಬಾಲಕ ಸಾವನಪ್ಪಿದ ದೇಹ ಬೆಂಕಿನಲ್ಲಿ ಸುಟ್ಟು ಹೋಗುವ ಬದಲು ಅಂದರ ಬಾಳಿಗೆ ಬೆಳಕಾಗಲಿ ಎಂಬುವುದು ಕುಟುಂಬಸ್ಥರ ನಿರ್ಧಾರದಿಂದ ನೇತ್ರದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ ಎಂದು ಢವಳಗಿ ಗ್ರಾಮ ಪಂಚಾಯತ ಸಿಬ್ಬಂದಿ ಎಂ ಕೆ ಗುಡಿಮನಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಮೃತ ಆಕಾಶ ತಂದೆಗೆ ಒಬ್ಬನೇ ಮಗನಾಗಿದ್ದು, ಇಬ್ಬರು ಸಹೋದರಿಯರನ್ನು ಅಗಲಿದ್ದಾನೆ.
ಗಣ್ಯರು ಸ್ಥಳೀಯರು ಸಂತಾಪ : ಕುಟುಂಬಸ್ಥರ ಮಹತ್ವದ ನಿರ್ಧಾರಕ್ಕೆ ಆಸ್ಪತ್ರೆಯ ಆಡಳಿತ ಮಂಡಳಿ, ವೈದ್ಯಾಧಿಕಾರಿ ಸಿಬ್ಬಂದಿ ವರ್ಗ ಹಾಗೂ ಸ್ಥಳೀಯರು ಶ್ಲಾಘಣಿಸಿದ್ದಾರೆ. ಆಸ್ಪತ್ರೆಯ ಆಡಳಿತ ಅಧಿಕಾರಿಗಳು ಮೃತಮ ಕುಟುಂಬಕ್ಕೆ ಸಾಂತ್ವನ ಹೇಳಿ, ಬಾಲಕನ ಪಾರ್ಥಿವ ಶರೀರಕ್ಕೆ ಶ್ರದ್ಧಾಂಜಲಿ ಸಲ್ಲಿಸಿದರು. ಮೃತನ ಆತ್ಮಕ್ಕೆ ಶಾಂತಿ ಸಿಗಲೆಂದು ರಾಷ್ಟ್ರೀಯ ದೇಹಾಂಗದಾನ ಜಾಗೃತಿ ಸಮಿತಿ ಸಂಚಾಲಕ ಪ್ರೀತು ದಶವಂತ ಪ್ರಾರ್ಥಸಿದರು.

ವರದಿ :ರಾಜು ಮುಂಡೆ

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!