Ad imageAd image

ತೃತೀಯಲಿಂಗಿಯೊಬ್ಬರ ಆಹಾರ ಸಚಿವನ ರಾಸಲೀಲೆ : ವಿಡಿಯೋ ವೈರಲ್ 

Bharath Vaibhav
ತೃತೀಯಲಿಂಗಿಯೊಬ್ಬರ ಆಹಾರ ಸಚಿವನ ರಾಸಲೀಲೆ : ವಿಡಿಯೋ ವೈರಲ್ 
WhatsApp Group Join Now
Telegram Group Join Now

ಮುಂಬೈ: ಮಹಾರಾಷ್ಟ್ರದ ರಾಜಕೀಯ ವಲಯದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಹಾಗೂ ಎನ್‌ಸಿಪಿ ನಾಯಕ ನರಹರಿ ಜಿರ್ವಾಲ್ ಅವರು ದೊಡ್ಡ ವಿವಾದಕ್ಕೆ ಸಿಲುಕಿದ್ದಾರೆ. ಸಚಿವರ ಅಧಿಕೃತ ಬಂಗಲೆಯಲ್ಲಿ ತೃತೀಯಲಿಂಗಿಯೊಬ್ಬರ ಜೊತೆಗಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸಚಿವರ ಅಧಿಕೃತ ಬಂಗಲೆಯಲ್ಲಿ ತೃತೀಯಲಿಂಗಿಯೊಬ್ಬರ ಜೊತೆಗಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.ಈ ಘಟನೆಯ ಬೆನ್ನಲ್ಲೇ ಪ್ರತಿಪಕ್ಷಗಳು ಜಿರ್ವಾಲ್ ಅವರ ತಕ್ಷಣದ ರಾಜೀನಾಮೆಗೆ ಆಗ್ರಹಿಸಿವೆ.

ಇದು ಜಿರ್ವಾಲ್ ಅವರಿಗೆ ಎರಡನೇ ದೊಡ್ಡ ಹಿನ್ನಡೆಯಾಗಿದೆ. ಇತ್ತೀಚೆಗಷ್ಟೇ ಮಂತ್ರಾಲಯದಲ್ಲಿ 35,000 ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಎಫ್‌ಡಿಎ (FDA) ಗುಮಾಸ್ತನೊಬ್ಬ ಭ್ರಷ್ಟಾಚಾರ ನಿರೋಧಕ ದಳಕ್ಕೆ (ACB) ಸಿಕ್ಕಿಬಿದ್ದಿದ್ದ. ಈಗ ವೈರಲ್ ಆಗಿರುವ ವಿಡಿಯೋ ಸಚಿವರಿಗೆ ಮತ್ತೊಂದು ದೊಡ್ಡ ತಲೆನೋವಾಗಿದೆ.

ವಿಡಿಯೋದಲ್ಲಿರುವ ತೃತೀಯಲಿಂಗಿಯನ್ನು ಪವನ್ ಯಾದವ್ ಎಂದು ಗುರುತಿಸಲಾಗಿದೆ ಎಂದು ಹೇಳಲಾಗುತ್ತಿದೆ. ಅವರ ಸಹೋದರ ಮತ್ತು ವಕೀಲ ರವಿ ಯಾದವ್ ಪ್ರಕಾರ, ಪವನ್ ಯಾದವ್ ಜನರನ್ನು ಮೋಸಗೊಳಿಸಿ ವಿಡಿಯೋ ಚಿತ್ರೀಕರಿಸಿ ನಂತರ ಬ್ಲ್ಯಾಕ್‌ಮೇಲ್ ಮಾಡುವ ಇತಿಹಾಸ ಹೊಂದಿದ್ದಾನೆ ಎಂಬ ಆರೋಪಗಳೂ ಕೇಳಿಬರುತ್ತಿವೆ.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!